ದಾವಣಗೆರೆ, ಜು. 19 – ಜಿಲ್ಲೆಯಲ್ಲಿ ಭಾನುವಾರ 62 ಕೊರೊನಾ ಪ್ರಕರಣಗಳು ಕಾಣಿಸಿಕೊಂಡಿದ್ದು, ಇದೇ ದಿನ 11 ಜನರು ಗುಣಮುಖರಾಗಿದ್ದಾರೆ ಹಾಗೂ ಇಬ್ಬರು ಸಾವನ್ನಪ್ಪಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೂ ಕೊರೊನಾ ಕಾಣಿಸಿಕೊಂಡವರ ಸಂಖ್ಯೆ 800 ರ ಗಡಿ ದಾಟಿ 807ಕ್ಕೆ ತಲುಪಿದೆ. 571 ಜನ ಇದುವರೆಗೂ ಗುಣಮುಖರಾಗಿದ್ದು, 29 ಜನ ಸಾವನ್ನಪ್ಪಿದ್ದಾರೆ. ಸಕ್ರಿಯ ಸೋಂಕಿತರ ಸಂಖ್ಯೆ ಇನ್ನೂರರ ಗಡಿ ದಾಟಿ 207ಕ್ಕೆ ತಲುಪಿದೆ.
ದಾವಣಗೆರೆಯ ಜಯನಗರದ 55 ವರ್ಷದ ಮಹಿಳೆ ಕೊರೊನಾದಿಂದ ಮೃತಪಟ್ಟಿದ್ದಾರೆ. ಇವರಲ್ಲಿ ಸಕ್ಕರೆ ಕಾಯಿಲೆ ಇತ್ತು. ಜಾಲಿನಗರದ 50 ವರ್ಷದ ಮಹಿಳೆ ಸಾವನ್ನಪ್ಪಿದ್ದು, ಇವರಲ್ಲೂ ಸಕ್ಕರೆ ಕಾಯಿಲೆ ಇತ್ತು. ಉಭಯರೂ ನಗರದ ಸಿ.ಜಿ. ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಭಾನುವಾರದಂದು ದಾವಣಗೆರೆ ತಾಲ್ಲೂಕಿನಲ್ಲಿ 24, ಹರಿಹರದಲ್ಲಿ 18, ಚನ್ನಗಿರಿಯಲ್ಲಿ 15, ಜಗಳೂರಿನಲ್ಲಿ ಮೂರು ಹಾಗೂ ಹೊನ್ನಾಳಿಯಲ್ಲಿ ಎರಡು ಪ್ರಕರಣಗಳು ಕಾಣಿಸಿಕೊಂಡಿವೆ.
ಇದೇ ದಿನದಂದು ದಾವಣಗೆರೆ ತಾಲ್ಲೂಕಿನ 8, ಹರಿಹರದ ಒಬ್ಬರು, ಚನ್ನಗಿರಿಯ ಒಬ್ಬರು ಹಾಗೂ ಇತರೆ ಜಿಲ್ಲೆಯ ಒಬ್ಬರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ದಾವಣಗೆರೆ ನಗರದ ಬೀಡಿ ಲೇಔಟ್ನ 43 ವರ್ಷದ ಮಹಿಳೆ, 48 ವರ್ಷದ ವ್ಯಕ್ತಿಗೆ ಸಂಪರ್ಕದಿಂದಾಗಿ ಸೋಂಕು ಬಂದಿದೆ. ಇಜಾರ್ದಾರ್ ಗಲ್ಲಿಯಲ್ಲಿ 52 ವರ್ಷ ಹಾಗೂ 30 ವರ್ಷದ ವ್ಯಕ್ತಿಗಳಿಗೆ ಸೋಂಕು ಬಂದಿದೆ.
ಬಾಷಾನಗರದ 23 ವರ್ಷದ ಮಹಿಳೆಗೆ ಸಂಪರ್ಕದಿಂದ ಸೋಂಕು ಬಂದಿದೆ. ನಿಟುವಳ್ಳಿ ಹೊಸ ಬಡಾವಣೆಯ 30 ವರ್ಷದ ಮಹಿಳೆ, ಭಾರತ್ ಕಾಲೋನಿಯಲ್ಲಿ ಫ್ಲುದಿಂದ ಬಳಲುತ್ತಿದ್ದ 56 ವರ್ಷದ ವ್ಯಕ್ತಿ, ಕೇಶವನಗರದ 45 ವರ್ಷದ ವ್ಯಕ್ತಿಗೆ ಸಂಪರ್ಕದಿಂದ ಸೋಂಕು ಬಂದಿದೆ.
ಸಿದ್ದವೀರಪ್ಪ ಬಡಾವಣೆಯ 46 ವರ್ಷದ ವ್ಯಕ್ತಿಗೆ ಸೋಂಕು ಬಂದಿದೆ. ಇದೇ ಬಡಾವಣೆಯ 29 ವರ್ಷ ಹಾಗೂ 56 ವರ್ಷದ ಮಹಿಳೆಯರಿಗೆ ಸಂಪರ್ಕದಿಂದ ಸೋಂಕು ಬಂದಿದೆ.
ನರಸರಾಜಪೇಟೆಯ 64 ವರ್ಷದ ಹಾಗೂ ವಿನೋಬನಗರದ 53 ವರ್ಷದ ವ್ಯಕ್ತಿಗೆ ಸಂಪರ್ಕದಿಂದ ಸೋಂಕು ಬಂದಿದೆ. ಶಿವನಗರದ 59 ವರ್ಷದ ಫ್ಲುದಿಂದ ಬಳಲುತ್ತಿದ್ದ ವ್ಯಕ್ತಿಯಲ್ಲಿ ಸೋಂಕು ಕಂಡು ಬಂದಿದೆ.
ಯರಗುಂಟೆಯ 43 ವರ್ಷದ ವ್ಯಕ್ತಿ, ನಿಜಲಿಂಗಪ್ಪ ಬಡಾವಣೆಯ 34 ವರ್ಷದ ವ್ಯಕ್ತಿ ಹಾಗೂ ಎಂ.ಸಿ.ಸಿ. ಎ ಬ್ಲಾಕ್ನ 30 ವರ್ಷದ ಫ್ಲುದಿಂದ ಬಳಲುತ್ತಿದ್ದ ವ್ಯಕ್ತಿಯಲ್ಲಿ ಸೋಂಕು ಕಂಡು ಬಂದಿದೆ. ಎಂಸಿಸಿ ಎ ಬ್ಲಾಕ್ನ 16 ವರ್ಷದ ಯುವಕ ಪ್ರಯಾಣದ ಹಿನ್ನೆಲೆ ಹೊಂದಿದ್ದು ಸೋಂಕು ಪತ್ತೆಯಾಗಿದೆ. ಫ್ಲುದಿಂದ ಬಳಲುತ್ತಿದ್ದ ಜೆ.ಹೆಚ್. ಪಟೇಲ್ ಬಡಾವಣೆಯ 58 ವರ್ಷದ ವ್ಯಕ್ತಿ ಹಾಗೂ 68 ವರ್ಷದ ವೃದ್ಧೆಯಲ್ಲಿ ಸೋಂಕು ಕಂಡು ಬಂದಿದೆ.
ಹರಿಹರದಲ್ಲಿ 20 ಕೊರೊನಾ ಪ್ರಕರಣಗಳು
ಹರಿಹರ, ಜು,19- ನಗರದಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸೇರಿ ಇಂದು ಇಪ್ಪತ್ತು ಕೊರೊನಾ ರೋಗದ ಪ್ರಕರಣಗಳು ದೃಢಪಟ್ಟಿವೆ ಎಂದು ತಹಶೀಲ್ದಾರ್ ಕೆ. ಬಿ. ರಾಮಚಂದ್ರಪ್ಪ ಅವರು ತಿಳಿಸಿದ್ದಾರೆ.
ನಗರದ ಗಾಂಧಿನಗರ 2, ವಿದ್ಯಾನಗರ 1, ಗಂಗಾನಗರ 1, ಹರ್ಲಾಪುರ 2, ಬೆಂಕಿನಗರ 1, ಸಾರ್ವಜನಿಕ ಆಸ್ಪತ್ರೆ 2, ಸೇರಿದಂತೆ ಯಲವಟ್ಟಿ 4, ಬೂದಿಹಾಳ 1, ಕರಲಹಳ್ಳಿ 1, ನಿಟ್ಟೂರು 1 ಸೇರಿದಂತೆ ಇನ್ನೂ ಹಲವಾರು ನಗರ, ಬಡಾವಣೆಗಳಲ್ಲಿ ಸುಮಾರು 20 ಕೊರೊನಾ ರೋಗ ಲಕ್ಷಣಗಳು ಹರಡಿಕೊಂಡಿದ್ದು, ಇವರ ಸಂಪರ್ಕದಲ್ಲಿ ಇದ್ದವರನ್ನು ಗಂಟಲು ದ್ರವ ಪರೀಕ್ಷೆ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.
ರಾಣೇಬೆನ್ನೂರಿನಲ್ಲಿ ಐದು ಕೊರೊನಾ ಪ್ರಕರಣಗಳು
ರಾಣೇಬೆನ್ನೂರು, ಜು. 19- ಭಾನುವಾರದಂದು ರಾಣೇಬೆನ್ನೂರಿನಲ್ಲಿ ಐದು ಪ್ರಕರಣಗಳು ಪತ್ತೆಯಾಗಿದ್ದು. ಹುಣಸಿಕಟ್ಟಿ ರಸ್ತೆಯಲ್ಲಿ ಎರಡು ಪ್ರಕರಣಗಳು, ರಂಗನಾಥ ನಗರ, ಗೌರಿಶಂಕರ ನಗರ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ತಲಾ ಒಂದೊಂದು ಪ್ರಕರಣಗಳು ಪತ್ತೆಯಾಗಿದ್ದು. ಈಗಾಗಲೇ ಪ್ರಕರಣಗಳು ಕಂಡು ಬಂದ ಪ್ರದೇಶಗಳ ಮನೆಯ ಸುತ್ತ ಮುತ್ತಲಿನ 100 ಮೀಟರ್ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಆಗಿ ಪರಿವರ್ತಿಸಲಾಗಿದೆ. ನಗರಸಭೆ ಕಡೆಯಿಂದ ಸ್ಯಾನಿಟೈಸರ್ ಸಿಂಪಡಿಸಿ ಬ್ಯಾರಿಕೇಡ್ ಅಳವಡಿಸಲಾಗಿದೆ.
ಸ್ಥಾಯಿ ಸಮಿತಿ ಅಧ್ಯಕ್ಷ ವೀರೇಶ್ಗೆ ಸೋಂಕು ದೃಢ : ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಟಿ.ವೀರೇಶ್ ಅವರಿಗೆ ಭಾನು ವಾರ ಕೊರೊನಾ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆಗೆ ಜಿಲ್ಲಾ ಚಿಗಟೇರಿ ಸಾರ್ವ ಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ದಾವಣಗೆರೆ ತಾಲ್ಲೂಕಿನ ಗೊಲ್ಲರಹಳ್ಳಿಯ 25 ವರ್ಷದ ಮಹಿಳೆಗೆ ಸಂಪರ್ಕದಿಂದ ಸೋಂಕು ಬಂದಿದೆ. ಬಿ. ಕಲ್ಪನಹಳ್ಳಿಯ 64 ವರ್ಷದ ವ್ಯಕ್ತಿಗೆ ಸಂಪರ್ಕದಿಂದ ಸೋಂಕು ಬಂದಿದೆ.
ಹರಿಹರ ಕೆ.ಆರ್. ನಗರದ 40 ವರ್ಷದ ಮಹಿಳೆಗೆ ಸಂಪರ್ಕದಿಂದ ಸೋಂಕು ಬಂದಿದೆ. ಫ್ಲುದಿಂದ ಬಳಲುತ್ತಿದ್ದ ಹರ್ಲಾಪುರದ 64 ವರ್ಷದ ಮಹಿಳೆಗೆ, ಪ್ರಯಾಣದ ಹಿನ್ನೆಲೆಯ 32 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಂಡು ಬಂದಿದೆ. ಕಾಳಿದಾಸ ನಗರದ 26 ವರ್ಷದ ವ್ಯಕ್ತಿಗೆ ಸಂಪರ್ಕದಿಂದ ಸೋಂಕು ಬಂದಿದೆ.
ಹರಿಹರ ತಾಲ್ಲೂಕಿನ ಕೊಂಡಜ್ಜಿಯ 28 ಹಾಗೂ 45 ವರ್ಷದ ಮಹಿಳೆಯರಿಗೆ ಮತ್ತು 70 ಹಾಗೂ 27 ವರ್ಷದ ವ್ಯಕ್ತಿಗಳಿಗೆ ಸಂಪರ್ಕದಿಂದ ಸೋಂಕು ಬಂದಿದೆ. ತಾಲ್ಲೂಕಿನ ಹಳ್ಳಳ್ಳಿಯಲ್ಲಿ 60 ವರ್ಷದ ವ್ಯಕ್ತಿಗೆ ಸಂಪರ್ಕದಿಂದ ಸೋಂಕು ಬಂದಿದೆ.
ಮಲೇಬೆನ್ನೂರಿನ 47 ಹಾಗೂ 22 ವರ್ಷದ ಮಹಿಳೆಯರು, 17 ಹಾಗೂ 38, 48, 44 ವರ್ಷದ ವ್ಯಕ್ತಿಗಳು, ಐದು ಹಾಗೂ 6 ವರ್ಷದ ಬಾಲಕರಿಗೆ ಸಂಪರ್ಕದಿಂದ ಸೋಂಕು ಬಂದಿದೆ.
ಹರಿಹರ ತಾಲ್ಲೂಕಿನ ಕರ್ಲಹಳ್ಳಿಯ 33 ವರ್ಷದ ವ್ಯಕ್ತಿಗೆ ಸಂಪರ್ಕದಿಂದ ಸೋಂಕು ಬಂದಿದೆ.
ಜಗಳೂರಿನ ವಿದ್ಯಾನಗರದಲ್ಲಿ ಪ್ರಯಾಣದ ಹಿನ್ನೆಲೆ ಹೊಂದಿರುವ 30 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಂಡು ಬಂದಿದೆ.
ತಾಲ್ಲೂಕಿನ ಸಿದ್ದಮ್ಮನಹಳ್ಳಿಯ 54 ವರ್ಷದ ವ್ಯಕ್ತಿ ಪ್ರಯಾಣದ ಹಿನ್ನೆಲೆ ಹೊಂದಿದ್ದು ಸೋಂಕು ಪತ್ತೆಯಾಗಿದೆ. ದೊಣ್ಣೆಹಳ್ಳಿಯ ಪ್ರವಾಸದ ಹಿನ್ನೆಲೆಯ 17 ವರ್ಷದ ಯುವಕನಲ್ಲಿ ಸೋಂಕು ಕಂಡು ಬಂದಿದೆ.
ಹೊನ್ನಾಳಿ ತಾಲ್ಲೂಕಿನ ಬೈರನಹಳ್ಳಿಯ 45 ವರ್ಷದ ಮಹಿಳೆಗೆ ಸೋಂಕು ಬಂದಿದೆ. ಹುಣಸಘಟ್ಟದಲ್ಲಿ ಫ್ಲುದಿಂದ ಬಳಲುತ್ತಿದ್ದ 60 ವರ್ಷದ ವೃದ್ಧೆಯಲ್ಲಿ ಸೋಂಕು ಕಂಡು ಬಂದಿದೆ.
ಚನ್ನಗಿರಿ ತಾಲ್ಲೂಕಿನ ನಲ್ಲೂರಿನಲ್ಲಿ ಫ್ಲುದಿಂದ ಬಳಲುತ್ತಿದ್ದ 37 ವರ್ಷದ ವ್ಯಕ್ತಿಗೆ, ತೆಗ್ಗಿನಗೆರೆಯ 20, 35, 39 ಹಾಗೂ 45 ವರ್ಷದ ಮಹಿಳೆ ಮತ್ತು 40 ಹಾಗೂ 61 ವರ್ಷದ ವ್ಯಕ್ತಿಗಳಿಗೆ ಹಾಗೂ 14 ವರ್ಷದ ಬಾಲಕನಿಗೆ ಸಂಪರ್ಕದಿಂದ ಸೋಂಕು ಬಂದಿದೆ.
ತೆಗ್ಗಿನಗೆರೆಯ 65 ವರ್ಷದ ವ್ಯಕ್ತಿ ಫ್ಲುದಿಂದ ಬಳಲುತ್ತಿದ್ದು ಅವರಲ್ಲೂ ಸೋಂಕು ಕಂಡು ಬಂದಿದೆ. ಇದೇ ಗ್ರಾಮದ 28 ವರ್ಷದ ಮಹಿಳೆ, ಐದು ವರ್ಷದ ಬಾಲಕಿಗೆ ಸಂಪರ್ಕದಿಂದ ಸೋಂಕು ಬಂದಿದೆ. ಗ್ರಾಮದ 32, 36 ಹಾಗೂ 45 ವರ್ಷದ ವ್ಯಕ್ತಿಗಳಲ್ಲಿ ಸಂಪರ್ಕದಿಂದ ಸೋಂಕು ಬಂದಿದೆ.
ತಾಲ್ಲೂಕಿನ ಸಂತೇಬೆನ್ನೂರಿನ 61 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ.
ಭಾನುವಾರದಂದು ಹನ್ನೊಂದು ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇವರಲ್ಲಿ ದಾವಣಗೆರೆಯ ಶಾಮನೂರಿನ 48 ವರ್ಷದ ವ್ಯಕ್ತಿ, ದೊಡ್ಡಬಾತಿಯ 33 ವರ್ಷದ ವ್ಯಕ್ತಿ, ಚೌಕಿಪೇಟೆಯ 70 ವರ್ಷದ ವೃದ್ಧೆ, ಸಿದ್ದವೀರಪ್ಪ ಬಡಾವಣೆಯ 22 ವರ್ಷದ ಮಹಿಳೆ, ಆಜಾದ್ ನಗರದ 34 ವರ್ಷದ ಮಹಿಳೆ, ಬೀಡಿ ಲೇಔಟ್ನ ಎಂಟು ವರ್ಷದ ಬಾಲಕಿ ಹಾಗೂ 25 ವರ್ಷದ ವ್ಯಕ್ತಿ ಸೇರಿದ್ದಾರೆ.
ಹರಿಹರದ 42 ವರ್ಷದ ಮಹಿಳೆ, ಚನ್ನಗಿರಿಯ ಕಣಸಾಲು ಬಡಾವಣೆಯ 50 ವರ್ಷದ ವ್ಯಕ್ತಿ ಹಾಗೂ ಹರಪನಹಳ್ಳಿಯ ಚಿಕ್ಕಮೇಗಳಗೆರೆಯ 46 ವರ್ಷದ ವ್ಯಕ್ತಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.