ದಾವ ಣಗೆರೆ, ಜು.17- ನಗರದ ಸಿ.ಜಿ.ಆಸ್ಪತ್ರೆಗೆ ದಾಖಲಾಗಿದ್ದ ಸುಮಾರು 65 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೋರ್ವ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದು, ಈತನ ವಾರಸುದಾರರನ್ನು ಪತ್ತೆ ಹಚ್ಚಲು ಮನವಿ ಮಾಡಲಾಗಿದೆ.
ಈತನನ್ನು ದಾವಣಗೆರೆ ತಾಲ್ಲೂಕಿನ ದೊಡ್ಡ ಓಬ್ಬಜ್ಜಿಹಳ್ಳಿಯ ರಾಮಾನಾಯ್ಕ ಎಂದು ಹೇಳಲಾಗುತ್ತಿದೆ. ವಾರಸುದಾರರು ಪತ್ತೆಯಾದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ (08192-262555)ಯನ್ನು ಸ್ಪಂದಿಸಬಹುದು.