ಹರಪನಹಳ್ಳಿ, ಜು.17- ಪಟ್ಟಣದ ಇತಿಹಾಸ ಸುಪ್ರಸಿದ್ದ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ 50 ಲಕ್ಷ ರೂ. ಹಗರಣ ನಡೆದಿದೆ ಎಂಬ ಆರೋಪವಿದ್ದು, ಶೀಘ್ರವೇ ತನಿಖೆ ಮಾಡಿ ಎಂದು ಶಾಸಕ ಜಿ.ಕರುಣಾಕರ ರೆಡ್ಡಿ ಅವರು ಉಪವಿಭಾಗಾಧಿಕಾರಿ ವಿ.ಕೆ.ಪ್ರಸನ್ನಕುಮಾರ್ ಅವರಿಗೆ ನಿರ್ದೇಶಿಸಿದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ಶುಕ್ರವಾರ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋಟೆ ಆಂಜನೇಯ ದೇವಸ್ಥಾನದ ಬಳಿ ಹೋಲ್ ಸೇಲ್ ತರಕಾರಿ ಅಂಗಡಿಗಳಲ್ಲಿ ಅನಧಿಕೃತ ಸಮಿತಿ ರಚಿಸಿಕೊಂಡು ಹಣ ವಸೂಲಿ ಮಾಡುತ್ತಾರೆ ಎನ್ನುವ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅನಧಿಕೃತವಾಗಿ ಹಣ ವಸೂಲಿ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ, ಇಲ್ಲವಾದರೆ ಪುರಸಭೆಯವರು ಅಥವಾ ಮುಜರಾಯಿ ಇಲಾಖೆಯವರು ಶುಲ್ಕ ವಸೂಲಿ ಮಾಡಿ ಎಂದು ಆದೇಶಿಸಿದರು.
ಕೋವಿಡ್ ಸೋಂಕು ದೃಢವಾಗಿ ಆಸ್ಪತ್ರೆಗೆ ದಾಖಲಾದ ನಂತರ ಕೆಲವು ದಿನಗಳಲ್ಲಿ ದ್ರವ ಪರೀಕ್ಷೆ ಮಾಡದೆ, ಗುಣವಾಗಿದೆ ಎಂದು ರೋಗಿಯನ್ನು ಬಿಡುಗಡೆ ಮಾಡುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದರು.
ಹರಪನಹಳ್ಳಿ ತಾಲ್ಲೂಕಿ ನಲ್ಲಿ ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಆದರೆ, ಈಗ ಬೆಳೆಗಳು ಬೆಳವಣಿಗೆ ಹಂತದಲ್ಲಿದ್ದು, ಮಳೆಯ ಅವಶ್ಯಕತೆ ಇದೆ.
-ಮಂಜುನಾಥ ಗೊಂದಿ, ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ
ಹಗರಿಶೀರನಹಳ್ಳಿ ಗ್ರಾಮ ಹೊರತು ಪಡಿಸಿ, ಉಳಿದಂತೆ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಕೊರತೆ ಇಲ್ಲ.
-ಸಿದ್ದರಾಜು, ಎಇಇ, ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ
ಪೊಲೀಸರೂ ಸೈನಿಕರಂತೆ : ಕೊರೊನಾ ಕಾರಣದಿಂದ ಪೊಲೀಸರಲ್ಲಿ ಸೋಂಕು ಹಾಗೂ ಸಾವುಗಳೂ ಉಂಟಾಗಿವೆ. ಕೊರೊನಾದ ಈ ಯುದ್ಧದ ಸಂದರ್ಭದಲ್ಲಿ ಸಮಾಜದಲ್ಲಿ ಆಗುತ್ತಿರುವಂತೆಯೇ ನಮಗೂ ತೊಂದರೆಗಳಾಗಿವೆ ಎಂದವರು ಹೇಳಿದರು.
ಪೊಲೀಸರು ಹಾಗೂ ಸೈನಿಕರ ನಡುವೆ ವ್ಯತ್ಯಾಸ ಇಲ್ಲ. ಸವಾಲುಗಳು ಬಂದಾಗ ಎದುರಿಸಲು ಸನ್ನದ್ಧರಾಗಿರುತ್ತೇವೆ. ಸಿಬ್ಬಂದಿ ಕೊರತೆ ಹಾಗೂ ಕೆಲಸದ ಒತ್ತಡ ನಡುವೆ ಸಮತೋಲನ ಕಾಯ್ದುಕೊಂಡು ಮುನ್ನಡೆಯುತ್ತೇವೆ ಎಂದು ಎಡಿಜಿಪಿ ಪಾಂಡೆ ವಿಶ್ವಾಸ ವ್ಯಕ್ತಪಡಿಸಿದರು.
ಕುಟುಂಬಗಳಲ್ಲಿ ಅರಿವು : ಪೊಲೀಸ್ ಸಿಬ್ಬಂದಿ ಕೊರೊನಾ ವಾರಿಯರ್ಗಳಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಅವರ ಕುಟುಂಬದವರಲ್ಲೂ ಕಳವಳಗಳಿವೆ. ಈ ಬಗ್ಗೆ ಮುನ್ನಚ್ಚರಿಕೆಯ ಜೊತೆಗೆ ಆಪ್ತ ಸಮಾಲೋಚನೆಯನ್ನೂ ಕೈಗೊಂಡಿದ್ದೇವೆ. ಅವರಲ್ಲಿ ಅರಿವು ಮೂಡಿಸಿದ್ದೇವೆ. ಇದಕ್ಕಾಗಿ ಸೂಕ್ತ ಅಧಿಕಾರಿಗಳನ್ನೂ ನೇಮಿಸಿದ್ದೇವೆ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಎಸ್ಪಿ ಹನುಮಂತರಾಯ, ಎಎಸ್ಪಿ ರಾಜೀವ್ ಮತ್ತಿತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.