ಎಡಪಂಥೀಯ ಸಂಘಟನೆಗಳಲ್ಲಿ ಮುಂಚೂಣಿ ನಾಯಕತ್ವದಲ್ಲಿದ್ದ ಮಾರುತಿ ಮಾನ್ಪಡೆ

ಜಗಳೂರು, ಅ.21- ಪ್ರಾಂತ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಅವರ ನಿಧನಕ್ಕೆ ಪ್ರಗತಿಪರ ಸಂಘಟನೆ ವತಿಯಿಂದ ಸಂತಾಪ ಸೂಚಿಸಲಾಯಿತು.

ಪಟ್ಟಣದ ತಾಲ್ಲೂಕು ಕಚೇರಿ ಬಳಿಯ ಕುವೆಂಪು ಪುತ್ಥಳಿ ಮುಂಭಾಗ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ನಂತರ ಮೌನಾಚರಣೆ ಸಲ್ಲಿಸಿದರು.

ವಕೀಲ ಆರ್. ಓಬಳೇಶ್‌ ಮಾತನಾಡಿ, ಕಾರ್ಮಿಕ ಮುಖಂಡರಾದ ಮಾರುತಿ ಮಾನ್ಪಡೆ ಅವರ ಅಕಾಲಿಕ ಮರಣ ನೋವಿನ ಸಂಗತಿ. ಎಡಪಂಥೀಯ ಸಂಘಟನೆಗಳಲ್ಲಿ ಮುಂಚೂಣಿ ನಾಯಕತ್ವದಲ್ಲಿದ್ದು, ರಾಜ್ಯವ್ಯಾಪಿ ದೇವದಾಸಿ ಮಹಿಳೆಯರನ್ನು ಸಂಘಟಿಸಿ, ಅವರ ಕುಟುಂಬಗಳ ಸಾಮಾಜಿಕ ಭದ್ರತೆಗಾಗಿ ಜಾಗೃತಿ ಮೂಡಿಸಿ, ಹೋರಾಟದ ಮೂಲಕ ಸರ್ಕಾರದಿಂದ ಅವರ ಮಕ್ಕಳಿಗೆ ಸೌಲಭ್ಯಗಳನ್ನು ಕಲ್ಪಿಸಿ, ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದರು ಎಂದರು.

ದಲಿತ ಮುಖಂಡರಾದ ಶಂಭುಲಿಂಗಪ್ಪ, ತಿಪ್ಪೇಸ್ವಾಮಿ, ಎಐಟಿಯುಸಿ ಕಾರ್ಯದರ್ಶಿ ಮಹಮ್ಮದ್‌ ಭಾಷಾ, ಡಿಎಸ್‌ಎಸ್‌ ತಾಲ್ಲೂಕು ಅಧ್ಯಕ್ಷ ಸತೀಶ್‌ ಮಲೆಮಾಚಿಕೆರೆ, ಎಐಎಸ್‌ಎಫ್‌ ರಾಜ್ಯ ಸಹಕಾರ್ಯದರ್ಶಿ ಕೆ. ಮಂಜಪ್ಪ, ಮುಖಂಡರಾದ ಅನಂತರಾಜ್, ಯುವರಾಜ್, ಮಧು, ಅಬ್ದುಲ್ ಹಫೀಜ್, ಕರಿಬಸಪ್ಪ, ರವಿಕುಮಾರ್, ಜಕಾವುಲ್ಲಾ ಮತ್ತಿತರರು ಉಪಸ್ಥಿತರಿದ್ದರು.

error: Content is protected !!