ಸ್ಮಾರ್ಟ್ ಸಿಟಿ ಸಿಬ್ಬಂದಿ, ಪೊಲೀಸ್ ಪೇದೆ ಸೇರಿ 35 ದೃಢ, 15 ಬಿಡುಗಡೆ

ದಾವಣಗೆರೆ, ಜು. 15-  ಸ್ಮಾರ್ಟ್ ಸಿಟಿ ಕಚೇರಿ ಸಿಬ್ಬಂದಿ ಹಾಗೂ ಪೊಲೀಸ್ ಪೇದೆ ಸೇರಿದಂತೆ ಜಿಲ್ಲೆಯಲ್ಲಿ ಬುಧವಾರ 35 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿವೆ. 15 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಒಟ್ಟು 128 ಸಕ್ರಿಯ ಪ್ರಕರಣಗಳಿವೆ.

ದಾವಣಗೆರೆ ಕುರುಬರ ಕೇರಿಯ 41 ವರ್ಷದ ಪುರುಷ, ಕೆಟಿಜೆ ನಗರದಲ್ಲಿ 4 ಪ್ರಕರಣಗಳು ಪತ್ತೆಯಾಗಿದ್ದು, 22 ವರ್ಷದ ಯುವಕ, 10 ವರ್ಷದ ಬಾಲಕ, 36 ವರ್ಷದ ಮಹಿಳೆ, 43 ವರ್ಷದ ಮಹಿಳೆ ಹಾಗೂ 65 ವರ್ಷದ ವೃದ್ದೆಯಲ್ಲಿ ಸೋಂಕು ದೃಢಪಟ್ಟಿದೆ.

ಜಗಳೂರು ತಾಲ್ಲೂಕು ಅಸಗೋಡಿನಲ್ಲಿ 75 ವರ್ಷದ ವೃದ್ಧೆಗೆ, ಹೊನ್ನಾಳಿ ತಾಲ್ಲೂಕು ಹಿರೇಕಲ್ಮಠದ 17 ವರ್ಷದ ಯುವತಿ, ಕಲ್ಕೇರಿಯ 16 ವರ್ಷದ ಯುವಕ, ದುರ್ಗಿ ಗುಡಿಯ 6ನೇ ಕ್ರಾಸ್‌ನಲ್ಲಿನ 25 ವರ್ಷದ ಯುವಕ, ಎಸ್.ಮಲ್ಲಾಪುರದ 23 ವರ್ಷದ ಯುವಕ, ಹೆಚ್.ಜಿ. ಹಳ್ಳಿಯ 23 ವರ್ಷದ ಯುವಕ ಸೋಂಕಿಗೆ ತುತ್ತಾಗಿದ್ದಾರೆ.

ದಾವಣಗೆರೆ ಸರಸ್ವತಿ ನಗರದ 30 ವರ್ಷದ ಯುವಕ, ಆಜಾದ್ ನಗರ 10ನೇ ಕ್ರಾಸ್‌ನ 34 ವರ್ಷದ ಯುವಕ, 37 ವರ್ಷದ ಮಹಿಳೆ, 31 ವರ್ಷದ ಯುವತಿ, 58 ವರ್ಷದ ಯುವತಿ. ಶಂಕರನಾರಾಯಣ ವಿಹಾರ  ಬಡಾವಣೆಯ 61 ವರ್ಷದ ಪುರುಷ ಕಿರುವಾಡಿ ಲೇ ಔಟ್‌, ಲೆನಿನ್ ನಗರದ 45 ವರ್ಷದ ಮಹಿಳೆ. ನಾಯ್ದು ಹೋಟೆಲ್ ಬಳಿಯ 55 ವರ್ಷದ ಪುರುಷ, 

ದಾವಣಗೆರೆ ಇಮಾಂ ನಗರದ 49 ವರ್ಷದ ಮಹಿಳೆ, ಜಗಳೂರು ತಾಲ್ಲೂಕು ಅರಿಷಿನಗುಂಡಿ ಲಿಂಗದಹಳ್ಳಿಯ 5 ವರ್ಷದ ಬಾಲಕಿ, ಹೊಸಕೆರೆಯ 34 ವರ್ಷದ ಪುರುಶ, 

ದಾವಣಗೆರೆ ಕುರುಬರ ಕೇರಿಯ 37 ವರ್ಷದ ಪುರುಷ, ಹರಿಹರ 32 ವರ್ಷದ ಯುವತಿ, ಆವರಗೆರೆಯ 30 ವರ್ಷದ ಪುರುಷ, ಚನ್ನಗಿರಿ ಸಿಟಿ ಕಣಸಾಳು ಬಡಾವಣೆಯ 50 ಪುರುಷ, . ದಾವಣಗೆರೆ ಮೆಹಬೂಬ್ ನಗರದ 19 ಯುವಕ ಹಾಗೂ 30 ವರ್ಷದ ಪುರುಷ, ದೇವರಾಜ ಅರಸು ಬಡಾವಣೆಯ 57 ವರ್ಷದ ಮಹಿಳೆ, ಭಗತ್ ಸಿಂಗ್ ನಗರದ 27 ವರ್ಷದ ಯುವಕನ ಮತ್ತು ಬಳ್ಳಾರಿ ಜಿಲ್ಲೆ ಜೆಪಿ. ನಗರದ 21 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ. 

ದಾವಣಗರೆ ತಾಲ್ಲೂಕಿನಲ್ಲಿ 24, ಹರಿಹರ-1, ಜಗಳೂರು-3, ಚನ್ನಗಿರಿ -1, ಹೊನ್ನಾಳಿ-5 ಹಾಗೂ ಹೊರ ಜಿಲ್ಲೆಯ 1 ಪ್ರಕರಣ ಸೇರಿ ಒಟ್ಟು 35 ಖಚಿತ ಪಟ್ಟ  ಪ್ರಕರಣಗಳು ವರದಿಯಾಗಿವೆ.

15 ಜನ ಬಿಡುಗಡೆ: ಚನ್ನಗಿರಿಯ ಹರೋಸಾಗರ ಮಹಬನಹಳ್ಳಿಯ 59 ವರ್ಷದ ಪುರುಷ, ನಿಟುವಳ್ಳಿ ಲೆನಿನ್ ನಗರದ 48 ವರ್ಷದ ಪುರುಷ, ವಿವೇಕಾನಂದ ಬಡಾವಣೆ 6ನೇ ಕ್ರಾಸ್‌ನ 66 ವರ್ಷದ ಪುರುಷ, 7ನೇ ಕ್ರಾಸ್‌ನ 52 ವರ್ಷದ ಪುರುಷ. ಪಿ.ಜೆ. ಬಡಾವಣೆಯ 50 ವರ್ಷದ ಮಹಿಳೆ ಹಾಗೂ 57 ವರ್ಷದ ಪುರುಷ, ಭಾಷಾ ನಗರ 15ನೇ ಕ್ರಾಸ್‌ನ 49 ವರ್ಷದ ಪುರುಷ, ಸಿದ್ದೇಶ್ವರ ಬಡಾವಣೆಯ 30 ವರ್ಷದ ಮಹಿಳೆ, ಹದಡಿ ಪೊಲೀಸ್ ಠಾಣೆಯ 34 ವರ್ಷದ ಪುರುಷ, ಆರನೇ ಕಲ್ಲಿನ 27 ವರ್ಷದ ಮಹಿಳೆ, ದಾವಣಗೆರೆಯ 25 ವರ್ಷದ ಮಹಿಳೆ, ಎಂ.ಸಿ.ಸಿ. ಬಿ ಬ್ಲಾಕ್‌ 9ನೇ ಮೇನ್, 4ನೇ ಕ್ರಾಸ್‌ನ 25 ವರ್ಷದ ಪುರುಷ, ಬಸವರಾಜ ಪೇಟೆಯ 38 ವರ್ಷದ ಪುರುಷ, ಗೌಸಿಯಾ ಕಾಲೋನಿ ಹರಿಹರದ 22 ವರ್ಷದ ಯುವತಿ ಹಾಗೂ ಭರತ್ ಮಿಲ್ ಕಾಂಪೌಂಡ್‌ನ 26 ವರ್ಷದ ಯುವತಿ ಬುಧವಾರ ಬಿಡುಗಡೆಯಾಗಿದ್ದಾರೆ

 

error: Content is protected !!