ದಾವಣಗೆರೆ, ಜು. 14 – ಜಿಲ್ಲೆಯಲ್ಲಿ ಮಂಗಳವಾರ 17 ಕೊರೊನಾ ಪ್ರಕರಣ ಗಳು ಕಂಡು ಬಂದಿದ್ದು, ಇದೇ ದಿನ 37 ಜನ ಗುಣಮುಖರಾಗಿ ಬಿಡುಗಡೆಯಾಗಿ ದ್ದಾರೆ. ಕೊರೊನಾ ಸೋಂಕಿಗೆ ಸಿಲುಕಿದ್ದ ಓರ್ವ ವೃದ್ಧೆ ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 108ಕ್ಕೆ ಇಳಿಕೆಯಾಗಿದ್ದು, ಇದುವರೆಗೂ ಮೃತರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ.
ಮಂಗಳವಾರ ಪತ್ತೆಯಾದ ಪ್ರಕರಣಗಳಲ್ಲಿ 11 ದಾವಣಗೆರೆ, ಐದು ಹರಿಹರದ ಪ್ರಕರಣಗಳು. ಒಂದು ಪ್ರಕರಣ ಬಳ್ಳಾರಿ ಜಿಲ್ಲೆಯ ಹೊಸಪೇಟೆಯದ್ದಾಗಿದೆ ಎಂದು ಜಿಲ್ಲಾಡಳಿತದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ದಾವಣಗೆರೆಯ ಎಸ್.ಎಸ್. ಬಡಾವಣೆಯ 85 ವರ್ಷದ ವೃದ್ಧೆ ಯೊಬ್ಬರು ಉಸಿರಾಟದ ಸಮಸ್ಯೆಯಿಂದ ಸಿ.ಜಿ. ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಚಿಕಿತ್ಸೆ ಫಲಕಾರಿ ಯಾಗದೇ ಸೋಮವಾರ ಮೃತಪಟ್ಟಿದ್ದಾರೆ. ಅವರಿಗೆ ಕೊರೊನಾ ಸೋಂಕಿರುವುದು ಪರೀಕ್ಷೆಯಲ್ಲಿ ಕಂಡು ಬಂದಿದೆ. ವೃದ್ಧೆ ರಕ್ತದೊತ್ತಡ, ಸಕ್ಕರೆ ಕಾಯಿಲೆ ರೋಗದಿಂದಲೂ ಬಳಲುತ್ತಿದ್ದರು.
ದಾವಣಗೆರೆಯ ಎಲ್.ಐ.ಸಿ. ಕಾಲೊನಿಯಲ್ಲಿ ಪ್ರಯಾಣದ ಹಿನ್ನೆಲೆ ಹೊಂದಿದ್ದ 29 ವರ್ಷದ ಮಹಿಳೆ (ರೋಗಿ ಸಂಖ್ಯೆ 41681), ನಿಜಲಿಂಗಪ್ಪ ಬಡಾವಣೆಯ 45 ವರ್ಷದ ಪುರುಷ (41682), ರಂಗನಾಥ ಬಡಾವಣೆಯ 8ನೇ ಕ್ರಾಸ್ ನಿವಾಸಿ 28 ವರ್ಷದ ಮಹಿಳೆಗೆ (41683) ಸೋಂಕಿರುವುದು ಕಂಡು ಬಂದಿದೆ. ಇವರಿಗೆ ಯಾವ ರೀತಿ ಸೋಂಕು ಬಂದಿದೆ ಎಂಬುದನ್ನು ಪತ್ತೆ ಮಾಡಲು ತನಿಖೆ ನಡೆಸಲಾಗುತ್ತಿದೆ.
ನಗರದ ದೇವರಾಜ ಬಡಾವಣೆಯ 61 ವರ್ಷದ ವ್ಯಕ್ತಿಯಲ್ಲಿ (41686) ಸೋಂಕಿರುವುದು ಕಂಡು ಬಂದಿದೆ. ಇವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಎಂಸಿಸಿ ಬಿ ಬ್ಲಾಕ್‌ನ 42 ವರ್ಷದ (41687) ವ್ಯಕ್ತಿಗೆ ಸೋಂಕು ಬಂದಿದ್ದು, ಮೂಲದ ತನಿಖೆ ನಡೆಯುತ್ತಿದೆ. ವಿದ್ಯಾನಗರದ 55 ವರ್ಷದ ಪುರುಷ (41688) ಪ್ರಯಾಣದ ಹಿನ್ನೆಲೆ ಹೊಂದಿದ್ದು, ಸೋಂಕು ಕಂಡು ಬಂದಿದೆ. ಎಸ್.ಎಸ್. ಬಡಾವಣೆಯ 31 ವರ್ಷದ ವ್ಯಕ್ತಿ (41690) ಪ್ರಯಾಣದ ಹಿನ್ನೆಲೆ ಹೊಂದಿದ್ದು ಸೋಂಕಿರುವುದು ಕಂಡು ಬಂದಿದೆ. ಎಂ.ಸಿ.ಸಿ. ಎ ಬ್ಲಾಕ್‌ನ 45 ವರ್ಷದ ಪುರುಷ (41691) ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಅವರಲ್ಲಿ ಸೋಂಕು ಕಂಡು ಬಂದಿದೆ.
ದಾವಣಗೆರೆ ತಾಲ್ಲೂಕಿನ ಬಸವನಾಳಿನಲ್ಲಿ 60 ವರ್ಷದ ವ್ಯಕ್ತಿ (41692) ಸೋಂಕು ಹೊಂದಿರುವುದು ಪತ್ತೆಯಾಗಿದೆ. ಇವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು.
ಹರಿಹರದ ವಿನಾಯಕನಗರದ ಭರತ್ ಆಯಿಲ್ ಮಿಲ್ ಕಾಂಪೌಂಡ್‌ನ 30 ವರ್ಷದ ಮಹಿಳೆ (41671), 19 ವರ್ಷದ ಮಹಿಳೆ (41674), 33 ವರ್ಷದ ಮಹಿಳೆ (41680) ಹಾಗೂ 14 ವರ್ಷದ ಬಾಲಕಿಗೆ (41675) ಸೋಂಕು ಬಂದಿದೆ. ಈಗಾಗಲೇ ಸೋಂಕಿತರ ಸಂಪರ್ಕದಿಂದಾಗಿ ಇವರಿಗೆ ಕೊರೊನಾ ಬಂದಿದೆ. ಹರಿಹರದ ವಿನಾಯಕ ನಗರದ ಪ್ರಯಾಣ ಹಿನ್ನೆಲೆ ಹೊಂದಿರುವ 12 ವರ್ಷದ ಬಾಲಕಿ (41689) ಸೋಂಕು ಹೊಂದಿರುವುದು ಪತ್ತೆಯಾಗಿದೆ.
ಹರಿಹರ : ಕೊರೊನಾ ಪಾಸಿಟಿವ್ ದೃಢ
ಹರಿಹರ, ಜು.14- ನಗರದಲ್ಲಿ ಒಂದು ಕೊರೊನಾ ಸೋಂಕು ಪ್ರಕ ರಣ ದೃಢ ಪಟ್ಟಿದೆ ಎಂದು ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ತಿಳಿಸಿ ದರು. ಭರತ್ ಆಯಿಲ್ ಮಿಲ್ ಕಾಂಪೌಂಡ್ನಲ್ಲಿ 32 ವರ್ಷ ವಯಸ್ಸಿನ ಮಹಿಳೆಗೆ ಸೋಂಕು ತಗಲಿಕೊಂಡಿದ್ದು, ಅವರ ಸಂಪರ್ಕದಲ್ಲಿ ಇದ್ದವರನ್ನು ತಪಾಸಣೆಗೆ ಒಳಪಡಿಸಲಾಗಿದೆ. ನಗರದಲ್ಲಿ ಇಂದು ಸಾರ್ವಜನಿಕ ಆಸ್ಪತ್ರೆ ಯಲ್ಲಿ 30, ಭರತ್ ಆಯಿಲ್ ಮಿಲ್ ಕಾಂಪೌಂಡ್ ನಲ್ಲಿ 16 ವ್ಯಕ್ತಿಗಳ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲಾಯಿತು ಎಂದು ಹೇಳಿದರು.
ಕೊರೊನಾ ಪಾಸಿಟಿವ್ : ಸೋಂಕಿತನ ನಿವಾಸದಲ್ಲಿಯೇ ಹೋಂ ಕ್ವಾರಂಟೈನ್
ಹರಪನಹಳ್ಳಿ, ಜು.14- ಪಟ್ಟಣದ ಬಾಣಗೇರಿಯ 31 ವರ್ಷದ ನಿವಾಸಿಯೊಬ್ಬರಿಗೆ ಕೋವಿಡ್ ಸೋಂಕು ದೃಢ ಪಟ್ಟಿದೆ.
ಹೊನ್ನಾಳಿ ಸಾರಿಗೆ ಡಿಪೋದಲ್ಲಿ ನಿರ್ವಾಹಕರಾಗಿರುವ ಈ ವ್ಯಕ್ತಿ, ಹೊನ್ನಾಳಿಯಲ್ಲಿಯೇ ಗಂಟಲು ದ್ರವ ಪರೀಕ್ಷೆಗೆ ನೀಡಿ, ಹರಪನಹಳ್ಳಿ ಪಟ್ಟಣಕ್ಕೆ ಆಗಮಿಸಿದ್ದರು. ಈತನಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ. ಸೋಂಕಿತ ಈ ವ್ಯಕ್ತಿಯನ್ನು ಬಾಣಗೇರಿಯ ಆತನ ನಿವಾಸದಲ್ಲಿಯೇ ಹೋಂ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಬಾಣಗೇರಿಯಲ್ಲಿ ಸೊಂಕಿತ ವ್ಯಕ್ತಿ ವಾಸವಿರುವ ಮನೆಯ 10 ಮೀಟರ್ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಎಂದು ಹಾಗೂ 100 ಮೀಟರ್ ಪ್ರದೇಶವನ್ನು ಬಫರ್ ಝೋನ್ ಎಂದು ಗುರುತಿಸಲಾಗಿದೆ ಹಾಗೂ ಆ ಪ್ರದೇಶದಲ್ಲಿ ಸ್ಯಾನಿಟೈಸ್ ಮಾಡಲಾಗಿದೆ ಎಂದು ಪುರಸಭಾ ಮುಖ್ಯಾಧಿಕಾರಿ ನಾಗರಾಜನಾಯ್ಕ ತಿಳಿಸಿದ್ದಾರೆ.
ಬೀದಿ ಬದಿ ವ್ಯಾಪಾರಿಗಳು, ಕಂಟೈನ್ಮೆಂಟ್ ಝೋನ್, ಹೀಗೆ ವಿವಿಧೆಡೆ 600ಕ್ಕೂ ಹೆಚ್ಚು ಗಂಟಲು ದ್ರವ ತೆಗೆದು ಕಳೆದ ವಾರದ ಹಿಂದೆಯೇ ಪರೀಕ್ಷೆಗೆ ಕಳಿಸಿ ಕೊಡಲಾಗಿದ್ದು, ಈಗ ಎಲ್ಲರ ಚಿತ್ತ ಆ ವರದಿಯತ್ತ ಇದ್ದು ಕುತೂಹಲ ಕೆರಳಿಸಿದೆ.
ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಜೆ.ಪಿ. ನಗರದ 59 ವರ್ಷದ ಮಹಿಳೆಯೊಬ್ಬರು (41685) ಜಿಲ್ಲೆಗೆ ಬಂದ ಸಂದರ್ಭದಲ್ಲಿ ಸೋಂಕು ಹೊಂದಿರುವುದು ಪತ್ತೆಯಾಗಿದೆ.
ಮಂಗಳವಾರದಂದು ಬಿಡುಗಡೆಯಾದವರ ವಿವರ : ಆಂಧ್ರ ಪ್ರದೇಶದ ಅನಂತಪುರದಿಂದ ಬಂದಿದ್ದ 63 ವರ್ಷದ ವ್ಯಕ್ತಿ (23566), ದಾವಣಗೆರೆಯ ಬಾಷಾ ನಗರದ 65 ವರ್ಷದ ವ್ಯಕ್ತಿ (25825), ಚನ್ನಗಿರಿ ತಾಲ್ಲೂಕಿನ ಕೊಂಡದಹಳ್ಳಿಯ 28 ವರ್ಷದ ಪುರುಷ (35911), ದಾವಣಗೆರೆಯ ಕುರುಬರಕೇರಿಯ 47 ವರ್ಷದ ವ್ಯಕ್ತಿ (35913), 60 ವರ್ಷದ ಮಹಿಳೆ (35914), ಜಗಳೂರಿನ 23 ವರ್ಷದ ಮಹಿಳೆ (35915), ಚನ್ನಗಿರಿ ತಾಲ್ಲೂಕಿನ ಮೆದಿಕೆರೆಯ 22 ವರ್ಷದ ವ್ಯಕ್ತಿ (35916), ಚನ್ನಗಿರಿ ತಾಲ್ಲೂಕು ಹಿರೇಕೋಗಲೂರಿನ 65 ವರ್ಷದ ಮಹಿಳೆ (35922), ರಾಣೇಬೆನ್ನೂರು ತಾಲ್ಲೂಕಿನ ಚಳಗೇರಿಯ 26 ವರ್ಷದ ವ್ಯಕ್ತಿ (35923), ಚನ್ನಗಿರಿಯ ಕುಂಬಾರ ಕೇರಿಯ 31 ವರ್ಷದ ಪುರುಷ (35924), 28 ವರ್ಷದ ಮಹಿಳೆ (35925), ಹರಿಹರದ ತಗ್ಗಿನಕೇರಿಯ 20 ವರ್ಷದ ವ್ಯಕ್ತಿ (35926), ಹೊನ್ನಾಳಿಯ ಅಕ್ಕಸಾಲಿ ಬೀದಿಯ 49 ವರ್ಷದ ಪುರುಷ (35927), ಹೊನ್ನಾಳಿಯ ಟಿ.ಎಂ. ರಸ್ತೆಯ 54 ವರ್ಷದ ವಯ್ಕ್ತಿ (35928), ಹೊನ್ನಾಳಿಯ ಎ.ಕೆ. ಕಾಲೊನಿಯ 35 ವರ್ಷದ ಮಹಿಳೆ (35929), 39 ವರ್ಷದ ವ್ಯಕ್ತಿ (35930), ದಾವಣಗೆರೆಯ ನರಸರಾಜಪೇಟೆಯ 52 ವರ್ಷದ ಮಹಿಳೆ (35951), 21 ವರ್ಷದ ಮಹಿಳೆ (35952), 7 ವರ್,ದ ಬಾಲಕ (35953), 30 ವರ್ಷದ ಮಹಿಳೆ (35954), ಚನ್ನಗಿರಿಯ ರಾಜಗುಂಡನಹಳ್ಳಿ ತಾಂಡಾದ 23 ವರ್ಷದ ವ್ಯಕ್ತಿ (35958), ಹೊನ್ನಾಳಿಯ ಚಿನ್ನಿಕಟ್ಟೆಯ 51 ವರ್ಷದ ವ್ಯಕ್ತಿ (36429), ಹೊನ್ನಾಳಿ ತಾಲ್ಲೂಕು ಬಿದರಹಳ್ಳಿಯ 17 ವರ್ಷದ ಯುವತಿ (36584), ದಾವಣಗೆರೆಯ ಅಹಮದ್ ನಗರದ 33 ವರ್ಷದ ಮಹಿಳೆ (36602), ಬಳ್ಳಾರಿ ಜಿಲ್ಲೆಯ ಸಂಡೂರಿನ 68 ವರ್ಷದ ವ್ಯಕ್ತಿ (38998), ಹರಿಹರದ ಇಂದಿರಾ ನಗರದ 55 ವರ್ಷದ ಪುರುಷ (39626), ಹರಿಹರದ ಹಳ್ಳದಕೇರಿಯ 12 ವರ್ಷದ ಬಾಲಕ (39319), ಹರಿಹರದ 40 ವರ್ಷದ ವ್ಯಕ್ತಿ (39343), ಹರಿಹರದ ಹಳ್ಳದಕೆರೆಯ 32 ವರ್ಷದ ಮಹಿಳೆ (39352), ಹರಿಹರದ ಕುಂಬಾರ ಓಣಿಯ 10 ವರ್ಷದ ಬಾಲಕಿ (39362), ಹರಿಹರದ ಅಮರಾವತಿ ಬಡಾವಣೆಯ 26 ವರ್ಷದ ವ್ಯಕ್ತಿ (39371), ದಾವಣಗೆರೆಯ 51 ವರ್ಷದ ಮಹಿಳೆ (39378), 12 ವರ್ಷದ ಬಾಲಕಿ (39388), ಚನ್ನಗಿರಿ ತಾಲ್ಲೂಕು ಪಾಂಡೋಮಟ್ಟಿಯ 56 ವರ್ಷದ ವ್ಯಕ್ತಿ (39399), 42 ವರ್ಷದ ಮಹಿಳೆ (39407) ಸೇರಿದ್ದಾರೆ.