ಮಲೇಬೆನ್ನೂರು, ಜು.11- ಎಳೆಹೊಳೆ ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿರುವುದರಿಂದ ಕೆಲವು ಏರಿಯಾಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಸೀಲ್‌ಡೌನ್ ಆಗಿರುವ ಸ್ಥಳಗಳಲ್ಲಿರುವ ಬಡ ಕುಟುಂಬಗಳಿಗೆ ಉದ್ಯಮಿ ನಂದಿಗಾವಿ ಶ್ರೀನಿವಾಸ್ ಅವರು ಶನಿವಾರ ಫುಡ್‌ಕಿಟ್‌ಗಳನ್ನು ವಿತರಿಸಿದರು. ಕೊರೊನಾ ವಾರಿಯರ್ಸ್‌ಗಳಾದ ಗ್ರಾ.ಪಂ. ಸಿಬ್ಬಂದಿಗೆ, ಪೊಲೀಸರಿಗೆ, ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ, ಆರೋಗ್ಯ ಇಲಾಖೆಯವರಿಗೆ ಹೆಲ್ತ್ ಕಿಟ್‌ಗಳನ್ನು ಶ್ರೀನಿವಾಸ್ ನೀಡಿ, ಪ್ರೊತ್ಸಾಹಿಸಿದರು. ಗ್ರಾ.ಪಂ. ಮಾಜಿ ಅಧ್ಯಕ್ಷ ಕರಿಬಸಪ್ಪ, ಪಿಡಿಓ ಅರವಿಂದ್, ಗ್ರಾಮ ಲೆಕ್ಕಾಧಿಕಾರಿ ದೊಡ್ಡ ಬಸವರಾಜ್ ಈ ವೇಳೆ ಇದ್ದರು.
December 23, 2024