ಎಂ.ಪಿ.ರವೀಂದ್ರರ ಕೆಲಸಗಳನ್ನು ನಾನು ಮಾಡಿದ್ದೇನೆ ಎಂದು ಹೇಳಿಕೊಳ್ಳುವ ರಾಜಕಾರಣಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ

ಹರಪನಹಳ್ಳಿ, ಜು.11- ದಿ|| ಎಂ.ಪಿ.ರವಿಂದ್ರ ಅವರು ಹರಪನಹಳ್ಳಿ ತಾಲ್ಲೂಕನ್ನು ಬಳ್ಳಾರಿ ಜಿಲ್ಲೆಗೆ ಸೇರ್ಪಡೆ ಮಾಡಿ, ಕಲಂ 371 ಜೆ ತರುವಲ್ಲಿ 60 ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಗರ್ಭಗುಡಿ ಬ್ಯಾರೇಜ್ ನಿರ್ಮಾಣ ಸೇರಿದಂತೆ ತಾಲ್ಲೂಕಿನ ಸಾರ್ವಂಗೀಣ ಅಭಿವೃದ್ಧಿಗೆ ಶ್ರಮಿಸಿ, ಅವರು ಮಾಡಿದ ಕೆಲಸಗಳನ್ನು ನಾನು ಮಾಡಿದ್ದೇನೆ ಎಂದು ಹೇಳುವ ರಾಜಕಾರಣಿಗೆ ಜನರೇ ತಕ್ಕ ಪಾಠ ಕಲಿಸುವ ಕಾಲ ದೂರವಿಲ್ಲ ಎಂದು ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಶ್ರೀಮತಿ ಎಂ.ಪಿ.ಲತಾ ಹೇಳಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಎಂ.ಪಿ.ಪ್ರಕಾಶ್ ಜನ್ಮ ದಿನಾಚರಣೆ ಪ್ರಯುಕ್ತ ವೃತ್ತಿ ರಂಗಭೂಮಿ ಕಲಾವಿದರಿಗೆ ಇಂದು ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಜಕಾರಣದಲ್ಲಿ ತಂದೆ ಪ್ರಕಾಶ್‌ಗೆ ಹಡಗಲಿ ಕ್ಷೇತ್ರ ಮತ್ತು ಸಹೋದರ ಎಂ.ಪಿ.ರವೀಂದ್ರಗೆ ಹರಪನಹಳ್ಳಿ ಕ್ಷೇತ್ರ ಅಧಿಕಾರ ನೀಡಿವೆ. ಈ ಎರಡೂ ಕ್ಷೇತ್ರಗಳು ನಮಗೆ ಎರಡು ಕಣ್ಣುಗಳಿದ್ದಂತೆ. ರಾಜಕೀಯದಲ್ಲಿ ಏಳು-ಬೀಳುಗಳನ್ನು ಕಂಡ  ಎಂ.ಪಿ.ಪ್ರಕಾಶ್‌ರವರು, ಸಮಾಜವಾದಿ, ಜನತಾ, ಲೋಕಶಕ್ತಿ, ಜಾತ್ಯತೀತ, ಜನತಾದಳ ಹಾಗೂ ಕೊನೆಯಲ್ಲಿ ಕಾಂಗ್ರೆಸ್‌ ಪಕ್ಷ ಸೇರಿ ರಾಜಕಾರಣದಲ್ಲಿ ಹೊಸ ದಿಕ್ಕನ್ನೇ ತೋರಿ ಸದ ಮಹಾನ್ ವ್ಯಕ್ತಿಯಾಗಿ, ಶಕ್ತಿಯಾಗಿ ಇಂದಿಗೂ ಜನಮಾನಸದಲ್ಲಿ ಉಳಿದುಕೊಡಿ ದ್ದಾರೆ. ಅದೇ ಹಾದಿಯಲ್ಲಿ ನಾವು ಕೂಡ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮೈದೂರು ಕುಬೇರಗೌಡ ಮಾತನಾಡಿ, ತತ್ವ ಸಿದ್ದಾಂತದ ಸಾಂಸ್ಕೃತಿಕ ರಾಯಭಾರಿ ಎನಿಸಿದ್ದ ಮುತ್ಸದ್ಧಿ ರಾಜಕಾರಣಿ ಎಂ.ಪಿ.ಪ್ರಕಾಶ್ ಅವರು, ಇನ್ನು ಸ್ವಲ್ಪ ದಿನಗಳ ಕಾಲ ಇರಬೇಕಾಗಿತ್ತು. ಬಹುಮುಖ ಪ್ರತಿಭೆಯ ರಾಜಕಾರಣಿ ಪ್ರಕಾಶ್ ಅವರ ಕುಟುಂಬದವ ರನ್ನು ಅಧಿಕಾರಕ್ಕೆ ತರಬೇಕು ಎಂಬ ಹಿನ್ನೆಲೆ ಯಲ್ಲಿ ಎಂ.ಪಿ.ಪ್ರಕಾಶ್ ಹಾಗೂ  ಎಂ.ಪಿ.ರವೀಂದ್ರ ಅವರ ಕೆಲಸಗಳನ್ನು ಎಂ.ಪಿ.ಲತಾ ಮುಂದುವರೆಸಿದ್ದಾರೆ ಎಂದು ಹೇಳಿದರು.

ಪುರಸಭಾ ಸದಸ್ಯ ಡಿ.ಅಬ್ದುಲ್ ರೆಹಮಾನ್ ಸಾಬ್ ಮಾತನಾಡಿ, ಎಂ.ಪಿ.ಪ್ರಕಾಶ್ ಅವರು ಎಂದೂ ದ್ವೇಷದ ರಾಜಕಾರಣ ಮಾಡಿಲ್ಲ. ಎಂ.ಪಿ.ರವೀಂದ್ರ ಅವರೂ ಸಹ ಹರಪನಹಳ್ಳಿ ಕ್ಷೇತ್ರಕ್ಕೆ ಅನೇಕ ಉತ್ತಮ ಕೆಲಸಗಳನ್ನು ಮಾಡಿದ್ದಾರೆ ಎಂದು ತಿಳಿಸಿದರು.

ನ್ಯಾಯವಾದಿ ಪ್ರಕಾಶ್‌ ಪಾಟೀಲ್ ಮಾತನಾಡಿ, ದ್ವೇಷ – ಅಸೂಯೆಯ ಇಂದಿನ ರಾಜಕಾರಣದಲ್ಲಿ ಎಂ.ಪಿ.ಪ್ರಕಾ ಶರು ಮಾನವೀಯತೆ ಮೈಗೂಡಿಸಿಕೊಂಡು ರಾಜಕಾರಣ ಮಾಡಿದರು ಎಂದರು.

ಶಿಕ್ಷಕ ಮೇಘರಾಜ ಮಾತನಾಡಿ, ಎಂ.ಪಿ.ಪ್ರಕಾಶ್ ಹಾಗೂ ಎಂ.ಪಿ.ರವೀಂದ್ರ ಅವರಿಂದ ಲಾಭ ತೆಗೆದುಕೊಂಡು, ಅಧಿಕಾರ ಅನುಭವಿಸಿದವರು ಇಂದು ಅವರ ಕುಟುಂಬವನ್ನು ದ್ವೇಷ ಮಾಡುತ್ತಿದ್ದಾರೆ. ಸ್ವಾರ್ಥಕ್ಕಾಗಿ ದ್ವೇಷ ಮಾಡುವವರು ಇದ್ದಾರೆ ಎಂದು ಹೇಳಿದರು.

ರವಿ ಯುವ ಶಕ್ತಿ ಅಧ್ಯಕ್ಷ ಉದಯಶಂಕರ್, ಅಗ್ರಹಾರದ ಅಶೋಕ್, ಕಲ್ಲಹಳ್ಳಿ ಗೋಣೆಪ್ಪ ಮಾತನಾಡಿದರು. ಪುರಸಭಾ ಸದಸ್ಯರುಗಳಾದ ಎಂ.ವಿ.ಅಂಜಿನಪ್ಪ, ಟಿ.ವೆಂಕಟೇಶ್‌, ಗೊಂಗಡಿ ನಾಗರಾಜ್‌, ತಾ.ಪಂ ಸದಸ್ಯರಾದ ಹುಲಿಕಟ್ಟಿ ಚಂದ್ರಪ್ಪ, ಮೈದೂರು ರಾಮಣ್ಣ, ಮುಖಂಡರಾದ ಕೆ.ಎಂ.ಬಸವರಾಜಯ್ಯ, ಚಿಕ್ಕೇರಿ ಬಸಪ್ಪ, ಮಂಜಪ್ಪ ಹಲಗೇರಿ, ಬೆನಂಟಿ ಸೊಸೈಟಿ ಅಧ್ಯಕ್ಷ ಟಿ.ಹೆಚ್.ಎಂ ಮಂಜುನಾಥ್‌, ಕನಕನ ಬಸಾಪುರದ ಮಂಜುನಾಥ್‌, ಡಿ.ರಾಜಕುಮಾರ್‌, ನೀಲಗುಂದ ಮಂಜುನಾಥ್‌, ಬಸವರಾಜ್‌ ಮತ್ತೂರು, ಮತ್ತಿಹಳ್ಳಿ ರಾಮಣ್ಣ, ಕವಿತಾ ಸುರೇಶ್‌, ಭೀರಪ್ಪ, ಮಟ್ಟಿ ಮೃತ್ಯುಂಜಯ ಕಂಚಿಕೇರಿ ಜಯಲಕ್ಷ್ಮಿ, ಉಮಾ ಶಂಕರ್, ಗುಂಡಗತ್ತಿ ನೇತ್ರಾವತಿ, ಈಡಿಗರ ದುರುಗಪ್ಪ, ಮತ್ತಿಹಳ್ಳಿ ಪ್ರಕಾಶ್, ದಕ್ಷಿಣ ಮೂರ್ತಿ ಮತ್ತಿತರರಿದ್ದರು.

error: Content is protected !!