ಗುರು ಮಹಿಮೆ…

ಆ ದೇವ ಈ ದೇವ
ಮಹದೇವನೆನಬೇಡ
ವಾಸುದೇವನೂ ಬೇಡ
ಏಸುದೇವನೂ ಬೇಡ
ಗುರುದೇವ ಬಳಿಯಿರಲು
ಬೇರೆ ದೇವರ ಹಂಗು ಬೇಡವೇ ಬೇಡ !

ಗುರುವಿನಾ ಒಲವಿದ್ದು
ಮಾಡಿದಾ ಕಾಯಕವು
ಗುರಿಯ ಸಾಧಿಸಲು ಹದವು
ಗುರು ತೋರದಾ ಪಾಠ
ಜಲದುದಿತ ಗುಳ್ಳೆಯ ತೆರದಿ
ತ್ವರಿತದಲಿ ನಶಿಸುವುದು ನೋಡಾ !

ಎಲ್ಲವನು ಸ್ವಂತದಲಿ
ತಾನೇ ಕಲಿತೆನೆಂಬ ಹಮ್ಮಿನಲಿ
ಬೀಗುವುದು ಅಹಂಭಾವ
ಎದ್ದು ತೋರುವಾ ತಾರಸಿಯು ತನ್ನನೆತ್ತಿರುವ ತಳಪಾಯವನು
ಹಳಿದಂತೆ ನೋಡಾ !

ಶುರುವಿನಲಿ ಗುರುವಿರಲು
ಹರುಷದಲಿ ಸಾಗುವುದು ಬದುಕು
ಗುರುವಿರದ ಇರುವು
ತಿರುಳಿರದ ಅರಿವು ಬೆರಳಿರದ ಕರವು
ಸರಳವಾಗದು ಬದುಕು ನೋಡಾ !


ಅಣ್ಣಾಪುರ್‌ ಶಿವಕುಮಾರ್,  ಲಿಬರ್ಟಿವಿಲ್
ಇಲಿನಾಯ್, ಯುಎಸ್ಎ.
[email protected]

error: Content is protected !!