ದಾವಣಗೆರೆ, ಜು.12- ನಗರದ ಸ್ವಚ್ಛತೆ ಮತ್ತು ಉತ್ತಮ ಪರಿಸರಕ್ಕಾಗಿ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ 45 ವಾರ್ಡ್‌ಗಳಲ್ಲಿ ಪರಿಸರ ಸೈನಿಕರನ್ನು ನಿಯೋಜಿಸಿ, ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಗುವುದು ಎಂದು ಪಾಲಿಕೆ ಮಹಾಪೌರರಾದ ಬಿ.ಜಿ.ಅಜಯ್ ಕುಮಾರ್ ಹೇಳಿದರು.
ನಗರದ ಏಳನೇ ವಾರ್ಡಿನ ದೇವರಾಜ ಅರಸು ಬಡಾವಣೆ `ಬಿ’ ಬ್ಲಾಕ್ ನಲ್ಲಿರುವ ಮೈದಾನ ಮತ್ತು ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛಗೊಳಿಸಿ, ಸಸಿಗಳನ್ನು ನೆಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ಪರಿಸರ ಸೈನಿಕರಾಗಿ ಪರಿಸರ ಪ್ರಿಯರು, ಹಿರಿಯ ನಾಗರಿಕರು, ಯುವಕರು, ಸ್ಥಳೀಯ ನಾಗರಿಕರ ಸಮಿತಿ, ಸಂಘ-ಸಂಸ್ಥೆಗಳು ಮತ್ತು ಆಯಾ ವಾರ್ಡಿನ ಪಾಲಿಕೆ ಸದಸ್ಯರು ಪ್ರತಿ ಶನಿವಾರದಂದು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ.
ಈ ವೇಳೆ ಪಾಲಿಕೆ ಸದಸ್ಯರಾದ ವಿನಾಯಕ, ಗಾಯತ್ರಿ ಬಾಯಿ ಖಂಡೋಜಿರಾವ್, ಹೆಚ್.ಸಿ.ಜಯಮ್ಮ, ಶಿವನಗೌಡ ಪಾಟೀಲ್, ಮುಖಂಡರು ಗಳಾದ ಗಿರೀಶ್ ದೇವರಮನೆ, ಶಿವಕುಮಾರ್, ಗೋಪಾಲ್‌ರಾವ್, ಚೇತನಾ ಶಿವಕುಮಾರ್, ಅಧಿಕಾರಿಗಳು ಮತ್ತು ಪೌರ ಕಾರ್ಮಿಕರು ಇತರರಿದ್ದರು.