ದಾವಣಗೆರೆ, ಜು.10- ಬ್ಯಾಂಕ್ ವೊಂದರ ಕಸ್ಟಮರ್ ಕೇರ್ ಅಧಿಕಾರಿ ಸೋಗಿನಲ್ಲಿ ಖಾಸಗಿ ಗ್ಯಾಸ್ ಕಂಪನಿ ನೌಕರನೋರ್ವನ ಬ್ಯಾಂಕ್ ಖಾತೆಯಲ್ಲಿನ ಸುಮಾರು 88 ಸಾವಿರ ನಗದನ್ನು ಆನ್ ಲೈನ್ ಮುಖಾಂತರ ದೋಚಿರುವ ಘಟನೆ ಇಲ್ಲಿನ ಸಿಇಎನ್ ಅಪರಾಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜಗಳೂರು ಟೌನ್ ಮುಸ್ಲಿಂ ಕಾಲೋನಿ ವಾಸಿ ದಾದಾಪೀರ್ ಹಣ ಕಳೆದುಕೊಂಡ ಖಾಸಗಿ ಗ್ಯಾಸ್ ಕಂಪನಿ ನೌಕರ.
ಮೊನ್ನೆ ದಿನಾಂಕ 7ರಂದು ತನ್ನ ಸ್ನೇಹಿತನ ಖಾತೆಯುಳ್ಳ ಬ್ಯಾಂಕ್ ಎಟಿಎಂ ಕಾರ್ಡ್ ನಿಂದ ಜಗಳೂರಿನಲ್ಲಿರುವ ಬೇರೊಂದು ಬ್ಯಾಂಕ್ ಎಟಿಎಂನಲ್ಲಿ ಒಂದು ಸಾವಿರ ಹಣ ಬಿಡಿಸಲು ಪ್ರಯತ್ನಿಸಿದಾಗ ಹಣ ಬರಲಿಲ್ಲ. ಆದರೆ, ಸ್ನೇಹಿತನ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗಿದ್ದು, ಹಣ ವಾಪಸ್ ಬರಬಹುದೆಂದು ಕಾದರೂ ಹಣ ವಾಪಸ್ ಬರದಿದ್ದಾಗ ಎಟಿಎಂನಿಂದ ವಾಪಸ್ ಹೋದೆ.
ಎರಡು ದಿನಗಳ ನಂತರ ಹಣ ವಾಪಸ್ ಬಾರದ ಕಾರಣ ಮೊಬೈಲ್ ನಲ್ಲಿ ಬ್ಯಾಂಕ್ ಕಸ್ಟಮರ್ ಕೇರ್ ನಂಬರ್ ಗೆ ಸಂಪರ್ಕಿಸಿದಾಗ ಈ ವಂಚನೆ ನಡೆದಿದೆ ಎಂದು ದಾದಾ ಪೀರ್ ದೂರಿನಲ್ಲಿ ವಿವರಿಸಿದ್ದಾರೆ.