ದಾವಣಗೆರೆ, ಜು. 10 – ಕರ್ನಾಟಕ ರಾಜ್ಯದ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ಉಪಾಧ್ಯಕ್ಷರಾಗಿ ಮಧ್ಯ ಕರ್ನಾಟಕದ ದಾವಣಗೆರೆಯ ‘ಜನತಾವಾಣಿ’ ಸಂಪಾದಕ ಎಂ.ಎಸ್. ವಿಕಾಸ್ ಆಯ್ಕೆಯಾಗಿದ್ದಾರೆ.
ಹಾಸನದ ‘ಪ್ರಜೋದಯ’ ಸಂಪಾದಕ ಜೆ.ಆರ್. ಕೆಂಚೇಗೌಡ ಅವರು ಅಧ್ಯಕ್ಷರಾಗಿ ಆಯ್ಕೆ ಯಾಗಿದ್ದು, ಉಳಿದಂತೆ, ಈ ಸಂಘಕ್ಕೆ ಕರ್ನಾಟಕದ ಎಲ್ಲಾ ಜಿಲ್ಲೆಗಳ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಂದ ಒಟ್ಟು 46 ಜನರನ್ನೊಳಗೊಂಡ ಪದಾಧಿಕಾರಿ ಗಳನ್ನು ಆಯ್ಕೆ ಮಾಡಲಾಗಿದೆ.
ದಾವಣಗೆರೆಯ ‘ಇಂದಿನ ಸುದ್ದಿ’ ಸಂಪಾದಕ ವೀರಪ್ಪ ಎಂ. ಭಾವಿ, ಮೈಸೂರಿನ ‘ಆಂದೋಲನ’ ಸಂಪಾದಕ ರವಿ ಕೋಟಿ, ತುಮಕೂರಿನ ‘ಪ್ರಜಾಪ್ರಗತಿ’ ಸಂಪಾದಕ ಎಸ್. ನಾಗಣ್ಣ ಸೇರಿದಂತೆ 9 ಜನ ಹಿರಿಯ ಪತ್ರಿಕೋದ್ಯಮಿಗಳು ಮಹಾಪೋಷಕರಾಗಿದ್ದಾರೆ.
ಅಧ್ಯಕ್ಷರಾಗಿ ಹಾಸನದ ‘ಪ್ರಜೋದಯ’ ಸಂಪಾದಕ ಜೆ.ಆರ್. ಕೆಂಚೇಗೌಡ ಅವರು ಮಹಾ ಪೋಷಕರಾಗಿ ‘ಇಂದಿನ ಸುದ್ದಿ’ ಸಂಪಾದಕ ವೀರಪ್ಪ ಎಂ. ಬಾವಿ, ಪ್ರಧಾನ ಕಾರ್ಯದರ್ಶಿಯಾಗಿ ಕೊಡಗು ಜಿಲ್ಲೆಯಲ್ಲಿ ವೈದ್ಯರೂ ಆಗಿರುವ ‘ಪ್ರಜಾಸತ್ಯ’ ಸಂಪಾದಕ ಡಾ. ಬಿ.ಸಿ. ನವೀನ್ ಕುಮಾರ್ ಆಯ್ಕೆಯಾಗಿದ್ದಾರೆ.
ಶಿವಮೊಗ್ಗದ ‘ನಮ್ಮ ನಾಡು’ ಸಂಪಾದಕ ಕೆ.ವಿ. ಶಿವಕುಮಾರ್, ಹಾವೇರಿಯ `ಮೂಡಣ’ ಸಂಪಾದಕ ತೇಜಸ್ವಿನಿ ಕಾಶೆಟ್ಟಿ ಸೇರಿದಂತೆ 6 ಜನರು ಉಪಾಧ್ಯಕ್ಷರಾಗಿದ್ದಾರೆ. ಕೊಡಗು ಜಿಲ್ಲೆಯಲ್ಲಿ ವೈದ್ಯರೂ ಆಗಿರುವ ‘ಪ್ರಜಾಸತ್ಯ’ ಸಂಪಾದಕ ಡಾ. ಬಿ.ಸಿ. ನವೀನ್ ಕುಮಾರ್ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
ಮಂಡ್ಯದ ‘ಮಂಡ್ಯ ಎಕ್ಸ್ ಪ್ರೆಸ್’ ಸಂಪಾದಕ ಎಂ.ಎಸ್. ಶಿವಪ್ರಕಾಶ್ ಖಜಾಂಚಿಯಾಗಿದ್ದು, ಹಾಸನದ ‘ಜನಮಿತ್ರ’ ಸಂಪಾದಕ ಹೆಚ್.ಬಿ.ಮದನ್ ಗೌಡ ಸಂಚಾಲಕರಾಗಿದ್ದಾರೆ. ಶಿವಮೊಗ್ಗದ ‘ಶಿವಮೊಗ್ಗ ಟೆಲೆಕ್ಸ್’ ಸಂಪಾದಕ ಎನ್. ರವಿಕುಮಾರ್ ಮತ್ತು ಮಂಡ್ಯದ ‘ಕೆಮ್ಮುಗಿಲು’ ಸಂಪಾದಕ ಸೋಮಶೇಖರ ಕೆರೆಗೋಡು ಸಂಘಟನಾ ಸಂಚಾಲಕರಾಗಿದ್ದಾರೆ.
ದಾವಣಗೆರೆಯ ‘ಕನ್ನಡ ಭಾರತಿ’ ಸಂಪಾದಕ ಮಲ್ಲಿಕಾರ್ಜುನ ಕಬ್ಬೂರು, ಶಿವಮೊಗ್ಗದ ‘ನಾವಿಕ’ ಸಂಪಾದಕರಾದ ಶ್ರೀಮತಿ ಲತಾ ರಂಗಸ್ವಾಮಿ, ಚಿತ್ರದುರ್ಗದ `ಜನಸಾಗರ’ ಸಂಪಾದಕ ಬಿ.ಎನ್. ಮೈಲಾರಪ್ಪ ಅವರುಗಳೂ ಸೇರಿದಂತೆ 18 ಜನರು ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿದ್ದಾರೆ.