ದಾವಣಗೆರೆ ಅಶೋಕ ನಗರ ವಾಸಿಯಾಗಿರುವ ಅವಲಕ್ಕಿ ವ್ಯಾಪಾರಿ ಶ್ರೀ ವೀರಪ್ಪ ಬಿರಾದಾರ್ (ಅರಸನಾಳು) ಅವರು ದಿನಾಂಕ 10.10.2020ರ ಶನಿವಾರ ಸಂಜೆ 7.30 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 75 ವರ್ಷ ವಯಸ್ಸಾಗಿತ್ತು. ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಸೊಸೆ, ಅಳಿಯ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 11.10.2020ರ ಭಾನುವಾರ ಸಂಜೆ 4 ಗಂಟೆಗೆ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ
July 23, 2024