ಸರ್ಕಾರಗಳಿಂದ ಶೋಷಿತ ಸಮುದಾಯ ಕಡೆಗಣನೆ

ಜಿಲ್ಲಾ ಕುರುಬರ ಸಮಾಜದ ಸಮಾಜದ ಅಧ್ಯಕ್ಷ ಕೆಂಗೋ ಹನುಮಂತಪ್ಪ ವ್ಯಾಕುಲತೆ

ದಾವಣಗೆರೆ, ಅ.10- ಹೋರಾಟದ ಮನೋಭಾವದಿಂದ ರಾಜಕೀಯ ಮುಖಂಡರುಗಳು ಯಾವುದೇ ಕಾರಣಕ್ಕೂ ಕೈಗೊಂಡ ನಿರ್ಧಾರದಿಂದ ಹಿಂದೆ ಸರಿಯಬಾರದು. ನಿಮ್ಮ ಜೊತೆ ರಾಜ್ಯದ ಜನತೆ ನಾವಿದ್ದೇವೆ. ಎಸ್ಟಿ ಹೋರಾಟದಲ್ಲಿ ನಾವು ಯಶಸ್ವಿಯಾಗಬೇಕೆಂದು ಜಿಲ್ಲಾ ಕುರುಬ ಸಮಾಜದ ಜಿಲ್ಲಾಧ್ಯಕ್ಷ ಕೆಂಗೋ ಹನುಮಂತಪ್ಪ ಹೇಳಿದರು.  

ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದಲ್ಲಿ ಜಿಲ್ಲಾ ಕುರುಬ ಸಮಾಜ, ಪ್ರದೇಶ ಕುರುಬರ ಸಂಘ ಹಾಗೂ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಎಸ್ಟಿ ಹೋರಾಟ ಹಾಗೂ ಕುರಿ ಮತ್ತು ಜಾನುವಾರುಗಳು ಮೃತಪಟ್ಟಾಗ ಸರ್ಕಾರದಿಂದ ಪ್ರೋತ್ಸಾಹ ಧನ ನೀಡುವ ಬಗ್ಗೆ ಇಂದು ಏರ್ಪಡಿಸಿದ್ದ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ದೇಶದಲ್ಲಿ  ಶೇ. 10 ಇರುವ ವರ್ಗಕ್ಕೆ 24 ಗಂಟೆಗಳಲ್ಲಿ ಮೀಸಲಾತಿ ನೀಡಿದ ಉದಾಹರಣೆಗಳು ನಮ್ಮ ಮುಂದೆ ಇವೆ. ಇದಕ್ಕೆ ರಾಜಕೀಯ ಹಿತಾಸಕ್ತಿ ಕಾರಣವಾಗಲಿದೆ. ಸಮಾಜ ಸಾಕಷ್ಟು ತೊಂದರೆಗೀಡಾದಾಗ ದಾವಣಗೆರೆಯಿಂದ ಬೆಂಗಳೂರುವರೆಗೂ ಹೋರಾಟ ನಡೆಸಿದ್ದೇವೆ. ಈಗ ರಾಜ್ಯದ ಜನತೆಯಲ್ಲಿ ಹೋರಾಟ ಮನೋಭಾವ ಎಲ್ಲರಲ್ಲೂ ಬಂದಿದೆ. ಈ ಹೋರಾಟದಿಂದ ಹಿಂದೆ ಸರಿಯದೆ ನಮ್ಮ ಹಕ್ಕು ಪಡೆಯಬೇಕೆಂದು ಹೇಳಿದರು. 

ಜಿಲ್ಲಾ ಪಂಚಾಯ್ತಿ ಸದಸ್ಯರುಗಳಾದ ಜೆ.ಸಿ. ನಿಂಗಪ್ಪ, ಕೆ.ಆರ್. ಜಯಶೀಲ, ಎಸ್ಟಿ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷರುಗಳಾದ ಕೊಳೇನಹಳ್ಳಿ ಸತೀಶ್, ಪಿ. ರಾಜ್‍ಕುಮಾರ್,  ಬಿ.ಹೆಚ್. ಪರಶುರಾಮಪ್ಪ, ಜಿಲ್ಲಾ ಕುರುಬ ಸಮಾಜದ ಪ್ರಧಾನ ಕಾರ್ಯದರ್ಶಿ ಲೋಕಿಕೆರೆ ಸಿದ್ದಪ್ಪ ಮಾತನಾಡಿದರು.

ಹೆಚ್.ಬಿ. ಪರಶುರಾಮಪ್ಪ, ಜೆ.ಕೆ. ಕೊಟ್ರಬಸಪ್ಪ, ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ವೈ. ವಿರೂಪಾಕ್ಷಪ್ಪ, ಗೌಡ್ರು ಚನ್ನಬಸಪ್ಪ, ಜಿ.ಪಂ. ಮಾಜಿ ಸದಸ್ಯ ಎಸ್. ವೆಂಕಟೇಶ್, ಹೊನ್ನಾಳಿ ಸಿದ್ದಪ್ಪ, ದೀಟೂರು ಚಂದ್ರು, ಮಾಜಿ ಮೇಯರ್‍ಗಳಾದ ಹೆಚ್.ಬಿ. ಗೋಣೆಪ್ಪ, ಹೆಚ್.ಎನ್. ಗುರುನಾಥ್, ಮುಖಂಡರುಗಳಾದ ಸೊಕ್ಕೆ ನಾಗರಾಜ್, ಪ್ರಾಂಶುಪಾಲ ರಾಜಶೇಖರ್, ಬಸವರಾಜಪ್ಪ, ಕುಂದುವಾಡ ಗಣೇಶ್, ಎನ್.ಜೆ. ನಿಂಗಪ್ಪ, ಹೆಚ್.ಜಿ. ಸಂಗಪ್ಪ, ಬಳ್ಳಾರಿ ಷಣ್ಮುಖಪ್ಪ, ಪ್ರಧಾನ ಕಾರ್ಯದರ್ಶಿ ಹೊಳಲ್ಕೆರೆ ಪ್ರಕಾಶ್, ಕೆ. ಪರಶುರಾಮ್, ಜಮ್ನಳ್ಳಿ ನಾಗರಾಜ್, ಶ್ರೀನಿವಾಸ್, ಬಿ.ಟಿ. ಹನುಮಂತಪ್ಪ, ಎಸ್.ಎಸ್. ರವಿಕುಮಾರ್, ಸುಭಾಷ್  ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು. 

error: Content is protected !!