ಲೀಡ್‌ನಿಂದ ದಾನ ಉತ್ಸವದ ಮೂಲಕ ಸಮಾಜಮುಖಿ ಕಾರ್ಯ

ದಾವಣಗೆರೆ, ಅ.10- ನಗರದ ಲೀಡರ್ ಎಕ್ಸಲ್‌ರೇ ಟಿಂಗ್ ಡೆವಲೆಪ್‌ಮೆಂಟ್‌ ಪ್ರೋಗ್ರಾಂ ಅಡಿಯಲ್ಲಿ ದಾನ ಉತ್ಸವ-2020 ರ ಅಂಗವಾಗಿ ನಗರದ ಜೈನ್‌ ತಾಂತ್ರಿಕ ಮಹಾವಿದ್ಯಾಲಯ, ಡಿ.ಆರ್.ಎಂ ವಿಜ್ಞಾನ ಮಹಾವಿದ್ಯಾಲಯ, ಬಾಪೂಜಿ ಪಾಲಿಟೆಕ್ನಿಕ್‌ ಮಹಾವಿ ದ್ಯಾಲಯದ ವಿದ್ಯಾರ್ಥಿಗಳು ವಿವಿಧ ಬೀದಿಗಳಲ್ಲಿ ಸಂಚರಿಸಿ ಹಣ್ಣು, ಹಂಪಲು ಮತ್ತು ಹಸಿದ  ಒಡಲಿಗೆ ತುತ್ತು ಅನ್ನವನ್ನು ನೀಡುವ ಮೂಲಕ ಕಾರ್ಯ ಚಟುವಟಿಕೆಯನ್ನು ಕೈಗೊಂಡರು.

ಅಭಿಯಾನದಲ್ಲಿ ಭಾಗವಹಿಸಿದ್ದ ಜೈನ್ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿನಿ ಆರ್.ಎಚ್. ಜೀವಿತಾ ಅವರು ವಿವಿಧ ಭಾಗಗಳಿಗೆ ತೆರಳಿ ಬಡ ಮತ್ತು ನಿರ್ಗತಿಕ ಮಕ್ಕಳಿಗೆ ಆಹಾರದ ಪೊಟ್ಟಣ ಮತ್ತು ಹಣ್ಣು – ಹಂಪಲುಗಳನ್ನು ವಿತರಿಸಿ ಸಮಾಜಮುಖಿ ಸೇವಾ ಕಾರ್ಯದಲ್ಲಿ ಭಾಗವಹಿಸಿದರು.

ಲೀಡ್‌ನ ಕಾರ್ಯಕ್ರಮ ವ್ಯವಸ್ಥಾಪಕ ಕೃಷ್ಣಾಜಿ ಮೋರೆ ಮಾತನಾಡಿ, ಕಳೆದ ಮೂರು ದಿನಗಳಿಂದ ಲೀಡ್‌ನ ವಿದ್ಯಾರ್ಥಿಗಳು ಪುಸ್ತಕ ದಾನ, ಅನ್ನದಾನ, ವಿದ್ಯಾದಾನ, ಸಸ್ಯದಾನದಂತಹ ವಿನೂತನ ಕಾರ್ಯಕ್ರಮ ಗಳನ್ನು ಕೈಗೊಳ್ಳುವ ಮೂಲಕ ಬಡ ಮತ್ತು ನಿರ್ಗತಿಕ ವ್ಯಕ್ತಿಗಳಿಗೆ ನೆರವಾಗುವಂತಹ ಕಾರ್ಯಗಳನ್ನು ಮಾಡಿದ್ದಾರೆ ಎಂದು ತಿಳಿಸಿದರು.

ಅಭಿಯಾನದಲ್ಲಿ ವಿದ್ಯಾರ್ಥಿಗಳಾದ ಎಂ ಅಭಿಲಾಷ, ಚೇತನ್, ಅಮೃತ ಹಾಗೂ ಇತರೆ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

error: Content is protected !!