ಧರ್ಮಸ್ಥಳ ಯೋಜನೆಯಿಂದ ಹರಿಹರ ತಾ.ನಲ್ಲಿ 5 ಸಾವಿರ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ

ಮಲೇಬೆನ್ನೂರು, ಜು. 4- ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹರಿಹರ ತಾಲ್ಲೂಕಿನಲ್ಲಿ 5 ಸಾವಿರ ಸಸಿಗಳನ್ನು ನೆಡುವುದಾಗಿ ಯೋಜನೆಯ ತಾ. ಯೋಜನಾಧಿಕಾರಿ ಗಣಪತಿ ಹೇಳಿದರು.

ಅವರು ದೇವರಬೆಳಕೆರೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಯೋಜನೆ ವತಿಯಿಂದ ಹಮ್ಮಿ ಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಹಾಗೂ ಅಂಗವಿಕಲರಿಗೆ ವ್ಹೀಲ್‌ಚೇರ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ವೀರೇಂದ್ರ ಹೆಗ್ಗಡೆ ಅವರ ಚಿಂತನೆಗಳು ಜನಪರವಾಗಿದ್ದು, ಕೃಷಿ ಕ್ಷೇತ್ರದ ಜೊತೆಗೆ ಪರಿಸರ ಸಂರಕ್ಷಣೆಗೂ ಒತ್ತು ನೀಡಿದ್ದಾರೆ.

ಈ ಯೋಜನೆಯಿಂದ ರಾಜ್ಯದ ಎಲ್ಲಾ  ಹಳ್ಳಿಗಳಲ್ಲೂ ಸಸಿ ನೆಡುವ ಕಾರ್ಯ ಸಾಗಿದ್ದು, ಲಾಕ್‌ಡೌನ್ ಸಂದರ್ಭದಲ್ಲಿ 8400 ಜನರಿಗೆ ಮಾಸಾಶನ ಮತ್ತು 10 ಸಾವಿರ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿದ್ದೇವೆ.

ರಾಜ್ಯದಲ್ಲಿ 5 ಲಕ್ಷ ಸ್ವಸಹಾಯ ಸಂಘಗ ಳನ್ನು ರಚಿಸಿದ್ದು, 50 ಲಕ್ಷ ಸದಸ್ಯರಿದ್ದಾರೆ. ಹರಿ ಹರ ತಾಲ್ಲೂಕಿನಲ್ಲಿ 4200 ಸಂಘಗಳಿದ್ದು, 35 ಸಾವಿರ ಸದಸ್ಯರಿದ್ದಾರೆ. ಇವರಿಗೆ ನಾವು ಸಾಲ ಸೌಲಭ್ಯ ಕಲ್ಪಿಸುವುದಕ್ಕೆ ಮುಖ್ಯವಾಗಿ ಬದುಕು, ಆರೋಗ್ಯದ ಬಗ್ಗೆ ಮತ್ತು ಮಾಹಿತಿಯಿಂದ ಉತ್ಪಾದನೆವರೆಗೆ ಅವರನ್ನು ತಯಾರು ಮಾಡಿದ ತೃಪ್ತಿ ನಮ್ಮ ಯೋಜನೆಗಿದೆ ಎಂದು ಯೋಜ ನಾಧಿಕಾರಿ ಗಣಪತಿ ಮುಳಂಜಿ ತಿಳಿಸಿದರು.

ಕೋವಿಡ್ -19ರ ಬಗ್ಗೆಯೂ ನಾವು ಜನ ಜಾಗೃತಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಪರಿಸರ ಸ್ವಚ್ಛವಾಗಿದ್ದರೆ ಉತ್ತಮ ಆರೋಗ್ಯ ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ನಡೆಯುವ ಯಾವುದೇ ಸಮಾರಂಭದ ಸವಿನೆ ನಪಿಗಾಗಿ ಗಿಡ ನೆಡುವುದನ್ನು ರೂಢಿಸಿಕೊಳ್ಳಿ ಎಂದು ಕೆ. ಬೇವಿನಹಳ್ಳಿ ವಲಯದ ಮೇಲ್ವಿಚಾರ ಕರಾದ ನಂದಾ ಮನವಿ ಮಾಡಿದರು.

ಗ್ರಾ.ಪಂ. ಅಧ್ಯಕ್ಷೆ ರಾಧಾ ಜುಂಜಪ್ಪ ಅಧ್ಯಕ್ಷತೆ ವಹಿಸಿದ್ದರು. ವೈದ್ಯಾಧಿಕಾರಿ ಡಾ. ದರ್ಶನಾ ಮಾತನಾಡಿದರು.

ಒಕ್ಕೂಟದ ಅಧ್ಯಕ್ಷೆ ಆಶಾ, ಉಪಾಧ್ಯಕ್ಷ ಮಂಜುನಾಥ್, ಪಿಡಿಓ ಶಿವಪ್ಪ ಬಿರಾದಾರ್, ಆರೋಗ್ಯ ಕೇಂದ್ರದ ಲ್ಯಾಬ್ ಟೆಕ್ನೀಷಿಯನ್ ಪೂಜಾ ಮತ್ತಿತರರು ಭಾಗವಹಿಸಿದ್ದರು.

error: Content is protected !!