ಹರಪನಹಳ್ಳಿ, ಅ.10- ಬಿಳಿ ಬಟ್ಟೆ ಧರಿಸಿ ಹೊಟ್ಟೆ ಖಾಲಿ ಇಟ್ಟುಕೊಂಡು ಕರ್ತವ್ಯ ಮಾಡುತ್ತಿದ್ದರೂ ಕಣ್ಣೆತ್ತಿ ನೋಡದ ಸರ್ಕಾರ, ಈಗ ಕರ್ತವ್ಯಕ್ಕೆ ಹಾಜರಾಗದಿದ್ದರೆ ತೆಗೆದು ಹಾಕುವುದಾಗಿ ಎಚ್ಚರಿಕೆ ನೀಡುತ್ತಿರುವುದನ್ನು ಖಂಡಿಸಿ ಗುತ್ತಿಗೆ ಹಾಗೂ ಹೊರ ಗುತ್ತಿಗೆ ನೌಕರರ ಮುಷ್ಕರ 12ನೇ ದಿನಕ್ಕೆ ಕಾಲಿಟ್ಟಿದೆ ಎಂದು ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳು ಪಟ್ಟಣದ ಹಳೆ ಆಸ್ಪತ್ರೆಯಿಂದ ಪ್ರಮುಖ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ಮೂಲಕ ಮಿನಿ ವಿಧಾನಸೌಧಕ್ಕೆ ತೆರಳಿ ಮನವಿ ಸಲ್ಲಿಸಿ ಕೆಲ ಸಮಯ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಡಾ.ಆದಿತ್ಯಾ, ಡಾ.ಆಮ್ಲಾಸ್, ಚಂದ್ರಪ್ಪ, ಸುನಿತಾ, ಹನುಮಂತಪ್ಪ, ರೇಖಾ, ದೀಪಾ, ಗೋವಿಂದರಾಜ, ಮರುಳಾಕ್ಷಿ, ಸತೀಶ್‌ಚಂದ್ರ, ಪ್ರತಾಪ, ರೇಖಾ ಎಸ್.ಎಸ್., ಪರಶುರಾಮ, ಪ್ರದೀಪ್, ಅರವಿಂದ್ ಹಾಗು ಇತರರು ಭಾಗವಹಿಸಿದ್ದರು.