ದಾವಣಗೆರೆ, ಜು.6- ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ದಾವಣಗೆರೆ ಜಿಲ್ಲಾ ಘಟಕವನ್ನು ಪುನರ್ ರಚಿಸಲಾಗಿದೆ.
ನಗರದ ಎಪಿಎಂಸಿ ಸಭಾಂಗಣದಲ್ಲಿ ಇಂದು ನಡೆದ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಘಟಕವನ್ನು ಪುನರ್ ರಚಿಸಿ, ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ತಿಳಿಸಿದ್ದಾರೆ. ಜಿಲ್ಲಾ ಗೌರವಾಧ್ಯಕ್ಷರಾಗಿ ಚಿಕ್ಕನಹಳ್ಳಿ ರೇವಣಸಿದ್ದಪ್ಪ, ಜಿಲ್ಲಾಧ್ಯಕ್ಷರಾಗಿ ಕಬ್ಬಳದ ಕೆ.ಎಸ್. ಪ್ರಸಾದ್, ಉಪಾಧ್ಯಕ್ಷ ರುಗಳಾಗಿ ಗೆದ್ಲೆಹಟ್ಟಿ ಹನುಮಂತಪ್ಪ, ಪಾಮೇನಹಳ್ಳಿ ಲಿಂಗ ರಾಜು, ಸಂತೇ ಬೆನ್ನೂರು ರಫೀಕ್ ಆಹ್ಮದ್, ಜಿಲ್ಲಾ ಕಾರ್ಯದರ್ಶಿಯಾಗಿ ಆನಗೋಡು ಭೀಮಣ್ಣ, ಜಿಲ್ಲಾ ಸಂಚಾಲಕ ಚಿನ್ನಸಮುದ್ರ ರಮೇಶ ನಾಯ್ಕ ಇವರನ್ನು ಆಯ್ಕೆ ಮಾಡಲಾಗಿದೆ.