ವರ್ಚುಯಲ್ ನಡಿಗೆ ಮೂಲಕ ಜಾಗೃತಿ
ದಾವಣಗೆರೆ, ಆ. 10 – ವರದಿಗಾರರ ಕೂಟದ ಸಹಕಾರದಲ್ಲಿ ದಾವಣಗೆರೆ ಕ್ಯಾನ್ಸರ್ ಫೌಂಡೇಷನ್ ಇಂದು ಆಯೋಜಿಸಿದ್ದ `ಕ್ಯಾನ್ಸರ್ ನಡೆ-ಕೋವಿಡ್ ತಡೆ’ ಜಾಗೃತಿ ಅಭಿಯಾನ ಪರೋಕ್ಷವಾಗಿ ಸೋಷಿಯಲ್ ಮೀಡಿಯಾಗಳ ಮೂಲಕ ಮತ್ತು ಪ್ರತ್ಯಕ್ಷವಾಗಿ ಕುಂದುವಾಡ ಕೆರೆಯ ಅಂಗಳದಲ್ಲಿ ನೆರವೇರಿತು.
ಕಲಾವಿದ ರವೀಂದ್ರ ಅರಳಿಗುಪ್ಪಿ ರಚಿಸಿದ್ದ ಚಿತ್ರಗಳನ್ನು ಮತ್ತು ಕಲಾ ಕೃತಿಗಳನ್ನು ಪ್ರದರ್ಶಿಸುವ ಮೂಲಕ ಜನರ ಗಮನ ಸೆಳೆದರು.
ಸಮಾರಂಭದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷ ಡಾ.ಅಂದನೂರು ರುದ್ರಮುನಿ ಕ್ಯಾನ್ಸರ್-ಕೋವಿಡ್ ಎದುರಿಸುವ ಜಾಗೃತಿ ಹಾಡಿನ ವಿಡಿಯೋ ಬಿಡುಗಡೆ ಮಾಡಿದರು.
ಇಂಡಿಯನ್ ರೆಡ್ ಕ್ರಾಸ್, ಲೈಫ್ ಲೈನ್ ಚೇರ್ಮನ್ ಹಾಗೂ ದಾವಣಗೆರೆ ಕ್ಯಾನ್ಸರ್ ಫೌಂಡೇಶನ್ ನಿರ್ದೇಶಕ ಡಾ.ಎ.ಎಂ. ಶಿವಕುಮಾರ್, ಕಾರ್ಯದರ್ಶಿ ಸುನೀಲ್ ಬ್ಯಾಡಗಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ಲೈಫ್ ಲೈನ್ ಕಾರ್ಯದರ್ಶಿ ಅನಿಲ್ ಬಾರೆಂಗಳ್, ಶೇಷಾಚಲ, ಡಾ.ಶಿಲ್ಪಾ, ಮಾಧವ ಪದಕಿ, ಶ್ರೀಕಾಂತ್, ಇನಾಯತ್, ಗೋಪಾಲ್ ಕೃಷ್ಣ, ಪೃಥ್ವಿ ಬದಾಮಿ, ವಿಜಯಕುಮಾರ್ ಇತರರು, ರೋಟರಿ ಸಂಸ್ಥೆಯ ಅಧ್ಯಕ್ಷ ಆರ್.ಟಿ. ಮೃತ್ಯುಂಜಯ, ಆನಂದ್, ಕೆ.ಬಿ.ದಯಾನಂದ್, ನಟರಾಜ್ ಮುಂತಾದ ಸದಸ್ಯರು, ಭಾರತೀಯ ವಿಕಾಸ್ ಪರಿಷತ್‌ನ ಡಾ.ಹೆಗಡೆ, ಆರತಿ ಸುಂದರೇಶ್, ಜಯರುದ್ರೇಶ್, ತಿಪ್ಪೇಸ್ವಾಮಿ ಹಾಗೂ ಇತರೆ ಸದಸ್ಯರು, ಆರ್.ಜಿ.ಐ.ಸಿ.ಎಂ ಕಾಲೇಜಿನ ಪ್ರಾಂಶುಪಾಲ ಸುನಿಲ್, ರಕ್ಷಕ್ ರಾಯ್ಕರ್, ಸಂಕಲನ ಸಮೂಹ ಸಂಸ್ಥೆಯ ಅರಳಿ ಗುಪ್ಪಿ, ಇಂಪನಾ ದಾವಣಗೆರೆ ಕ್ಯಾನ್ಸರ್ ಫೌಂಡೇಶನ್ ಅಧ್ಯಕ್ಷ ಡಾ. ಶ್ರೀಶೈಲ ಬ್ಯಾಡಗಿ, ಆರ್. ರಕ್ಷಕ್, ಆರ್.ಎಂ. ಸಂದೇಶ್ ಉಪಸ್ಥಿತರಿದ್ದರು..
§ಹೆದರಬೇಡಿ ಬೆದರಬೇಡಿ….’ ಎಂಬ ಸಾಲಿನೊಂದಿಗೆ ಆರಂಭವಾಗುವ ಗೀತೆಯ ಕುರಿತು ಮಾತನಾಡಿದ ಕಲಾವಿದ ಆರ್.ಟಿ. ಅರುಣ್ ಕುಮಾರ್, ನಗರದ ಪ್ರತಿಭೆಗಳಾದ ಗಂಗಾಧರ ಸ್ವಾಮಿ, ಜೆ. ಚೇತನ್ ಕುಮಾರ್, ಬಿ.ಎಸ್. ಸರ್ವಮಂಗಳ, ಕೆ.ಎಂ.ನಿಶ್ಕಾ ಹಾಡಿದ್ದಾರೆ. ಗಂಗಾ-ಶಂಕರ್ ಜೋಡಿ ಸಂಗೀತ ನಿರ್ದೇಶನ ಮಾಡಿದರೆ, ಉಮಾಶಂಕರ್ ಕುರುಡಿ ಸಂಕಲನ ಮಾಡಿದ್ದಾರೆ ಎಂದರು.
ನಗರವಷ್ಟೇ ಅಲ್ಲದೇ ರಾಜ್ಯ ಹಾಗೂ ಹೊರ ದೇಶಗಳ ಜನರೂ ಸಹ ನಡಿಗೆಯ ವಿಡಿಯೋಗಳನ್ನು ಕಾರ್ಯಕ್ರಮಕ್ಕೆ ಕಳಿಸಿದ್ದಾರೆ ಎಂದು ಆಯೋಜಕರು ಹೇಳಿದ್ದಾರೆ.