ಉಗಾದಿಯಲ್ಲ… ತಗಾದಿ…

ಹೊಸ ವರುಷಕೆ, ಹೊಸ ಹರುಷಕೆ
ಹೊಸತು ಹೊಸತು ತರುತಿದೆ ಎಂಬುದು ಸುಳ್ಳು
ಉಗಾದಿ ಯಾರೋ ಕರೆದರೆಂದು ನೀನು ಮರಳಿ ಬರಬೇಡ
ಈ ವರ್ಷ ಉಗಾದಿ ದಿನವೇ ನೀನು ತಗಾದೆ ತಂದೆ.

ಇರುವ ಬೆಲ್ಲವನ್ನೆಲ್ಲಾ ಕಳೆದು ಬೇವನ್ನಷ್ಟೇ ನಮಗೆ ತಂದೆ
ಮೈಯೆಲ್ಲಾ ಎಣ್ಣೆ ಮುಳುಗುವವರ ಮೈಗೆ ಎಣ್ಣೆನೇ ಇಲ್ವಲ್ಲೋ ತಂದೆ
ಉಗಾದಿ ಚಂದ್ರನ ಕಂಡು ಅಪ್ಪಿಮುದ್ದಾಡುವವರು
ಪರಸ್ಪರ ಮೋರೆ ನೋಡದಂತೆ ಮಾಡಿದೆ.

ಮನೆಯ ಹೊಸ್ತಿಲ ಒಳಗೆ ಮತ್ತೊಬ್ಬರು ಕಾಲಿಡದಂತೆ ಮಾಡಿದೆ
ಬೇವು-ಬೆಲ್ಲ, ಹೋಳಿಗೆಯ ಸವಿಯ ಕಹಿ ಮಾಡಿದೆ
ನಲಿದಾಡುವ ಮನಗಳ ಮುದುಡುವಂತೆ ಮಾಡಿದೆ
ಕೊರೊನಾ ತಂದು ಚೆಂದದ ಬದುಕ ಕಾಲಿನ ಕೆರಾ ಮಾಡಿದೆ.

ಮಂದಹಾಸ ಮುದುಡಿ ಎಲ್ಲೆಲ್ಲೂ ಅನುಮಾನದ ಹುತ್ತ ಬೆಳೆಸಿದೆ
ಮಗು-ತಾಯಿಂದ ದೂರ, ಅಪ್ಪ-ಮಗನಿಂದ ದೂರ
ಗಂಡ-ಹೆಂಡತಿಯಿಂದ ದೂರ ಮಾಡಿ,
ಉಸಿರಾಡದಂತೆ ಮೂಗಿಗೆ, ಬಾಯಾಡದಂತೆ ಬಾಯ್ಗೆ ಬಾಯ್ಕುಕ್ಕೆ ಹಾಕಿದೆ
ಬೆರಳಾಡದಂತೆ ಕೈಗವಸು, ಕಾಪಾಡದಂತೆ ಸಂಕೋಲೆ
ಇನ್ನೇನು ತರುವೆಯೋ ಉಗಾದಿ…ಉಗಾದಿಯಲ್ಲ ನೀನು ತಗಾದಿ…


ಎಸ್.ಟಿ. ಶಾಂತಗಂಗಾಧರ, ನವಿಲೇಹಾಳು.

 

error: Content is protected !!