ದಾವಣಗೆರೆ, ಅ.9 – ರೈತ ಮೋರ್ಚಾ ಬಿಜೆಪಿ ಜಿಲ್ಲಾಧ್ಯಕ್ಷ ನಾಗರಾಜ್ ಲೋಕಿಕೆರೆ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರು ಭಗವಂತನ ಆಶೀರ್ವಾದದಿಂದ ಬೇಗ ಗುಣಮುಖರಾಗಲಿ ಎಂದು ಶ್ರೀ ಲಿಂಗೇಶ್ವರ ದೇವಸ್ಥಾನದಲ್ಲಿ ರುದ್ರಾಭಿಷೇಕ ಮಾಡಿಸಲಾಯಿತು.
ನಾಗರಾಜ್ ಲೋಕಿಕೆರೆ ಅಭಿಮಾನಿ ಬಳಗದ ಅಧ್ಯಕ್ಷ ಬಿ.ಪಿ.ನಾಗರಾಜ್, ಉಪಾಧ್ಯಕ್ಷ ಅಣ್ಣಪ್ಪ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಎನ್.ಕೃಷ್ಣಪ್ಪ, ಸದಸ್ಯರುಗಳಾದ ಎ.ಎಂ.ರುದ್ರಸ್ವಾಮಿ, ನಾಗರಾಜ್, ಎ.ಎಂ.ಶಿವರುದ್ರಪ್ಪ, ನಿರಂಜನ ಸ್ವಾಮಿ, ಜಯಪ್ರಕಾಶ್, ಗಣೇಶ್, ಕೊಟ್ರೇಶ್ ಬೇತೂರು, ಮಹಾಂತೇಶ್, ಡಿ.ಸುಭಾಷ್, ಮುರುಗೇಶ್, ಸಂಗೀತ ಮಂಜುನಾಥ್ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.