ಮೌನ ಮಂತ್ರ ಕಲಿಸಿ ಮನವನು ತಣಿಸಿ
ಭಕ್ತಿಯ ಸುಧೆಯಲಿ ತೇಲಾಡಿಸಿದೆ
ಅಜ್ಞಾನವ ದೂರವಿರಿಸಿ ಸುಜ್ಞಾನವ ನೀಡಿದೆ
ಭಕ್ತಿಯೆ ಮುಕ್ತಿಗೆ ಹಾದಿಯೆಂದು ಸಾರಿದೆ
ನಮೋ ಗುರುವೇ ನಿನಗೆ ನಮನ |
ಶಾಂತಿ ಸಹನೆಯ ಸದ್ಗುಣ ಕಲಿಸಿದೆ
ಜ್ಞಾನದ ಅಮೃತವ ಕುಡಿಸಿದೆ
ಮಾತಲ್ಲಿ ಸವಿನುಡಿಯ ಕಲಿಸಿದೆ
ಪರಮಾತ್ಮನ ಸಾನ್ನಿಧ್ಯಕೆ ಮಾರ್ಗ ತೋರಿದೆ
ನಮೋ ಗುರುವೇ ನಿನಗೆ ನಮನ |
ಭವ ಬಂಧನವ ಬಿಡಿಸಿದೆ
ಮಹದಾನಂದವ ನೀಡಿದೆ
ಮನೆಯ ನಂದಗೋಕುಲವಾಗಿಸಿದೆ
ಬಾಳಲಿ ಬೆಳಕನು ನೀಡಿರುವೆ
ನಮೋ ಗುರುವೇ ನಿನಗೆ ನಮನ |
ಜೆಂಬಗಿ ಮೃತ್ಯುಂಜಯ