ಗುರುವಿರಲಿ ಗುರಿ ತಲುಪೆ…

ಪುಸ್ತಕದಿ ಕಲಿತ ಪಾಠವದು
ಪುಸ್ತಕವ ಬರೆಯಲಿಕೆ ಚಂದ
ಅನುಭವದಿ ಕಲಿತ ಪಾಠವದು
ಜೀವನವ ಸಾಗಿಸಲು ಅಂದ.

ಗುರು ಕಲಿಸಿದ ಪಾಠವದು
ಗುಣಮಟ್ಟದತಿ ಉತ್ತಮವು
ಗುರಿಮುಟ್ಟಲು ದಿಕ್ಸೂಚಿಯದು
ಗುರುಕೃಪೆಯಿರಲು ಜಯವು ನಿಶ್ಚಿತವು.

ಸರ್ವರಲಿ ಅಡಗಿಹವು ಪ್ರತಿಭೆಗಳು
ಗುರುವು ಗುರುತಿಸುವನು ಅವನು
ಹೊರಗೆಳೆದು ಅವೆಲ್ಲವನು. 

ಶಿಷ್ಯನುನ್ನತಿಗೆ ಬೆಳಕಾಗುವನು ಅವನು
ದಾರಿ ತೋರಿದಾ ಗುರುಗಳನು
ಮರೆಯಲಾಗದು ಎಂದಿಗೂ
ಹಣತೆಯಾ ಬತ್ತಿ ನೀನಾಗಿರಲು
ಬೆಳಗಿಸುವ ತೈಲವೇ ಅವರು!.

ಕೆಲವೊಮ್ಮೆ ಶಿಷ್ಯನಾಗಿ ಕಲಿಯುವುದು
ಮತ್ತೊಮ್ಮೆ ಗುರುವಾಗಿ ಕಲಿಸುವುದು
ಮಾನವ ಕುಲ ಧರ್ಮವದು
ಬಾಳಿನಾ ದೀರ್ಘ ದಾರಿಯೊಳು…


ಅಣ್ಣಾಪುರ್‌ ಶಿವಕುಮಾರ್,  ಲಿಬರ್ಟಿವಿಲ್
ಇಲಿನಾಯ್, ಯುಎಸ್ಎ.
[email protected]

error: Content is protected !!