ಎಬಿವಿಪಿ ನೇತೃತ್ವ
ದಾವಣಗೆರೆ, ಜು.2- ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ದಾವಣಗೆರೆ ವತಿಯಿಂದ ಆತ್ಮ ನಿರ್ಭರ್ ಭಾರತ್ ಅಭಿಯಾನವನ್ನು ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ನಿನ್ನೆ ನಡೆಸಲಾಯಿತು.
ಅಭಿಯಾನದಲ್ಲಿ ಪೋಸ್ಟರ್ ಬರಹಗಳ ಮೂಲಕ ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಎಂದು ಕಾರ್ಯಕರ್ತರು ನಾಗರಿಕರಲ್ಲಿ ಮನವಿ ಮಾಡಿದರು.
ಈ ವೇಳೆ ನಾವೆಲ್ಲಾ ಚೀನಾ ಕುತಂತ್ರದ ವಿರುದ್ಧ ಹೋರಾಡಬೇಕಾಗಿದೆ. ಚೀನಾದಿಂದ ಕೊರೊನಾ ಬಂದ ಈ ಸಮಯದಲ್ಲಿ ಈ ಚೀನಾ ನಮ್ಮ ಯೋಧರ ವಿರುದ್ಧ ದಂಗೆ ಎದ್ದಿದೆ. ಇನ್ಮುಂದೆ ನಾವು ಯಾರೂ ಯಾವುದೇ ಕಾರಣಕ್ಕೂ ಆ ದೇಶದ ವಸ್ತುಗಳನ್ನು ಬಳಸಬಾರದು, ವಸ್ತುಗಳನ್ನು ಉಪಯೋಗಿಸಿದರೆ ನಮಗೇ ತೊಂದರೆ. ನಮ್ಮ ದೇಶದ ವಸ್ತುಗಳನ್ನು ಉಪಯೋಗಿಸಿ ನಮ್ಮ ಭಾರತ ಸ್ವಾವಲಂಬಿಯಾಗುವ ಸಮಯ ಬಂದಿದೆ ಎಂದು ಜನಜಾಗೃತಿ ಮೂಡಿಸಿದರು.
ಕಾರ್ಯಕರ್ತ ವಿಜಯ್ ಮಾತನಾಡಿ, ಚೀನಾ ವಸ್ತುಗಳನ್ನು ನಾವು ಖರೀದಿಸಿದರೆ ನಮ್ಮ ಪ್ರತಿಯೊಂದು ಮನೆಯ ದೀಪದ ಜ್ಯೋತಿ ಆರಿದಂಗೆ. ಯಾವುದೇ ಕಾರಣಕ್ಕೂ ಚೀನಾ ವಸ್ತುಗಳನ್ನು ಉಪಯೋಗಿಸುವುದಕ್ಕೆ ನಾವು ಮುಂದಾಗಬಾರದು ಎಂದು ತಿಳಿಸಿದರು.
ನಗರ ಕಾರ್ಯದರ್ಶಿ ಇಟಗಿ ಆಕಾಶ್ ಮಾತನಾಡಿ, ಇನ್ನು ಮುಂದೆ ನಾವು ಚೈನಾ ಹಾಗೂ ಇತರೆ ವಿದೇಶಿ ವಸ್ತುಗಳನ್ನು ಬಹಿಷ್ಕರಿಸೋ ಸಂಕಲ್ಪ ಮಾಡೋಣ. ಆರ್ಥಿವಾಗಿ ಅವರ ರಾಷ್ಟ್ರದ ಬೆನ್ನು ಮೂಳೆ ಮುರಿಯೋಣ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾರ್ಯಕರ್ತರಾದ ಪೃಥ್ವಿ, ಸುಮನ್, ಮೋಹಿತ್, ಆದಿ, ಸುಹಾಸ್, ಅಮಿತ್, ರಾಜು ಸೇರಿದಂತೆ ಇತರರು ಇದ್ದರು.