ದೇವರ ತೋಟದ ಹೂವು

ನಸುನಗೆಯ ಮೊಗ್ಗುಗಳು……
ಚಿಗುರೊಡೆದ ಗಿಡದಲ್ಲಿ ನಲಿದು
ಅರಳಿ ಘಮಿಸುವ ಮುನ್ನ…..
ಚಿವುಟಿ ಧರೆಯ ಮಡಿಲಿಗೆ !

ಅಂದ- ಚೆಂದದ ಹೂವುಗಳು
ಬಿರಿದು ಬೆಳದಿಂಗಳಲ್ಲಿ ಸೂಸಿ
ಪರಿ ಪರಿಯ ಪರಿಮಳವು….

ಚೆಲ್ಲಿ ಸೂಸಲು- ಹೊಸಕಿ ಕಾಲಡಿಗೆ
ಕುಸುಮ- ಕೋಮಲ ಮನಗಳು
ಸಾಲದಾಗಿಹುದು ಕಣ್ಣುಗಳೆರಡು
ಸುತ್ತ ಮುತ್ತಲೂ ಸುತ್ತವ ಇರಿತಕ್ಕೆ
ಶೀಲ ನರಳಿತ್ತು ಕಾಮುಕ ದೃಷ್ಟಿಗೆ !

ಆರಾದರೇನು? ಹೆಣ್ಣಾದರಾಯಿತು
ಅಂಧ ಕಾಮುಕ ಹೆಗ್ಗಣಗಳಿಗೆ….
ಕೊತ ಕೊತ ಕುದಿಯುವ ಬಿಸಿರಕ್ತಕ್ಕೆ
ಹೆಣ್ಣಮಾಂಸ ಭಕ್ಷಿಸುವ ದುಷ್ಟರಿಗೆ!

ಮೇಲಾಟದ ಪಿತೂರಿಯ ಪಾತ್ರ
ರಕ್ಕಸರ ಕೆಟ್ಟ ಕಾಯಕವು……
ಹೆಣ್ತನದ ಚಿಗುರು- ಮೊಗ್ಗು- ಹೂ
ಹೊಸಕಿ ಹಾಕುವ ಭಂಡ ರಾಕ್ಷಸರು!

ಅಜ್ಜಿಯನ್ನು ಅಜ್ಜಿ ಎನ್ನದಿರಿ
ಅಮ್ಮನನ್ನು ಅಮ್ಮ ಎನ್ನದಿರಿ
ಅಕ್ಕ- ತಂಗಿಯರನ್ನು ಮರೆತು ಬಿಡಿ
ಅಮ್ಮನ ಒಡಲಿಂದ ಬಂದವರೆ
ಪರರ ಜೀವನ ಕಸಿದ ಮೇಲೆ
ಹಕ್ಕೆಲ್ಲಿದೇ ನಿಮಗೆ ಬದುಕಲಿಕ್ಕೆ?

ಅತ್ಯಾಚಾರಿ ಹಣೆಪಟ್ಟಿ ಹಚ್ಚೆ ಹಚ್ಚಿ
ಹೋಗಿ ಹಾಳು ಬಾವಿಗೆ ಬೀಳಿ !
ಮತ್ತೆಂದೂ ಮೇಲೆಳದಿರಿ,ಮೇಲೆಳದಿರಿ.


ವೀಣಾ ಕೃಷ್ಣಮೂರ್ತಿ
ದಾವಣಗೆರೆ.

error: Content is protected !!