ಸಾಮಾಜಿಕ ಸಂಘರ್ಷ ಸಮಿತಿ ಪ್ರತಿಭಟನೆ
ದಾವಣಗೆರೆ, ಅ.3- ಉತ್ತರ ಪ್ರದೇಶದಲ್ಲಿ ದಲಿತ ಯುವತಿ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಜಿಲ್ಲಾ ಸಾಮಾಜಿಕ ಸಂಘರ್ಷ ಸಮಿತಿ ವತಿಯಿಂದ ನಗರದಲ್ಲಿ ಇಂದು ಪ್ರತಿಭಟನೆ ನಡೆಯಿತು.
ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಮುಖೇನ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಪ್ರತಿಭಟನೆ ಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಬಿ.ಎನ್. ನಾಗೇಶ್, ಗುಮ್ಮನೂರು ಪರಶುರಾಮ್, ಪಿ. ತಿಪ್ಪೇರುದ್ರಪ್ಪ ಗಾಂಧಿನಗರ, ಕಾಳಪ್ಪ, ಗುರುಮೂರ್ತಿ ರಾಮನಗರ, ನವೀನ್, ಜಿ.ಸಿ. ಬಸವರಾಜ್, ಜಿ.ಪಿ. ಹರೀಶ್, ಜಿ.ಬಿ. ದರ್ಶನ್, ಶರತ್, ರಮೇಶ್ ಗಾಂಧಿನಗರ, ಇ. ಹನುಮಂತಪ್ಪ, ಗಂಗಾಧರ, ಶಿವಕುಮಾರ್, ಸಂದೀಪ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.