ಮೂರು ಕೊರೊನಾ ವಾರಿಯರ್ಗಳಿಗೂ ಸೋಂಕು, ಸಕ್ರಿಯ ಸಂಖ್ಯೆ 48
ದಾವಣಗೆರೆ, ಜು. 1 – ಜಿಲ್ಲೆಯಲ್ಲಿ ಮಂಗಳವಾರ ಮೂರು ಕೊರೊನಾ ವಾರಿಯರ್ ಗಳೂ ಸೇರಿದಂತೆ 16 ಜನರಲ್ಲಿ ಕೊರೊನಾ ಸೋಂಕು ಕಾಣಿಸಿ ಕೊಂಡಿದೆ. ಇದೇ ದಿನದಂದು ಚನ್ನಗಿರಿಯ ಮೂವರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಇದರಿಂದಾಗಿ ಜಿಲ್ಲೆಯಲ್ಲಿ ಸಕ್ರಿಯ ಕೊರೊನಾ ಸೋಂಕಿತರ ಸಂಖ್ಯೆ 48ಕ್ಕೆ ಏರಿಕೆಯಾಗಿದೆ.
ನಗರದ ಆಜಾದ್ ನಗರ, ಪೊಲೀಸ್ ಕ್ವಾರ್ಟರ್ಸ್, ಎಂ.ಸಿ.ಸಿ. ಬಿ ಬ್ಲಾಕ್, ಸುಲ್ತಾನ್ ಪೇಟೆ ಹಾಗೂ ಕುಂಬಾರ ಕೇರಿಗಳಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ. ಜಗಳೂರಿನ ಜೆ.ಸಿ.ಆರ್. ಬಡಾವಣೆ, ಹರಿಹರದ ವಿದ್ಯಾನಗರ, ಚಿನ್ನಪ್ಪ ಕಾಂಪೌಂಡ್ಗಳಲ್ಲಿ ಸೋಂಕಿತರು ಕಂಡು ಬಂದಿದ್ದಾರೆ.
ದಾವಣಗೆರೆ ತಾಲ್ಲೂಕಿನ ನೇರ್ಲಿಗಿ, ಹೊನ್ನಾಳಿಯ ಕ್ಯಾಸಿನಕೆರೆ, ಹತ್ತೂರು, ಜಗಳೂರು ತಾಲ್ಲೂಕಿನ ಚಿಕ್ಕ ಉಜ್ಜಿನಿಯ ವ್ಯಕ್ತಿಗಳಲ್ಲಿ ಸೋಂಕಿರುವುದು ಕಂಡು ಬಂದಿದೆ. ಕೊರೊನಾ ವಿರುದ್ದದ ಜೂನ್ ತಿಂಗಳಲ್ಲಿ ಮಧ್ಯ ಭಾರತದಲ್ಲಿ ವಾಡಿಕೆಯ ಶೇ.131ರಷ್ಟು ಮಳೆಯಾಗಿದೆ. ಈ ಭಾಗದಲ್ಲಿ ಗೋವಾ, ಕೊಂಕಣ್, ಮಹಾರಾಷ್ಟ್ರ, ಮಧ್ಯ ಪ್ರದೇಶ ಹಾಗೂ ಛತ್ತೀಸ್ಘಡಗಳು ಬರುತ್ತವೆ.
ಪೂರ್ವ ಹಾಗೂ ಈಶಾನ್ಯ ಉಪ ವಿಭಾಗಗಳಲ್ಲಿ ವಾಡಿಕೆಯ ಶೇ.116ರಷ್ಟು ಮಳೆಯಾಗಿದೆ. ವಾಯುವ್ಯ ಭಾಗದಲ್ಲಿ ದೀರ್ಘಾವಧಿಯ ಶೇ.104 ಹಾಗೂ ದಕ್ಷಿಣ ಭಾಗದಲ್ಲಿ ವಾಡಿಕೆಯ ಶೇ.104ರಷ್ಟು ಮಳೆಯಾಗಿದೆ. ಜುಲೈನಲ್ಲಿ ವಾಡಿಕೆಯ ಶೇ.013ರಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.