ದಾವಣಗೆರೆ, ಅ.3- ಅತ್ಯಾಚಾರಕ್ಕೆ ಗಲ್ಲು ಶಿಕ್ಷೆ ಎಂಬ ಕಾನೂನು ಜಾರಿಗೆ ತರಬೇಕೆಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಉಪವಿಭಾಗಾಧಿಕಾರಿ ಮುಖಾಂತರ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು.
ಇತ್ತೀಚಿನ ದಿನಗಳಲ್ಲಿ ರಾಜಸ್ಥಾನದಲ್ಲಿ 5997 ಅತ್ಯಾಚಾರ ಪ್ರಕರಣ, ಮಧ್ಯಪ್ರದೇಶದಲ್ಲಿ 2485 ಅತ್ಯಾಚಾರ ಪ್ರಕರಣ, ಉತ್ತರ ಪ್ರದೇಶದಲ್ಲಿ 3065 ಅತ್ಯಾಚಾರ ಪ್ರಕರಣಗಳಾಗಿವೆ. ದೇಶದಲ್ಲಿನ ಹಲವು ರಾಜ್ಯಗಳಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ ಎಂದು ಸಂಘಟನೆಯ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು.
ರಾಜಸ್ಥಾನದಲ್ಲಿ ಕಳೆದ 7 ದಿನಗಳಲ್ಲಿ ಸುಮಾರು 11 ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯದ ಪ್ರಕರಣಗಳು ದಾಖಲಾಗಿವೆ. ಆದರೆ, ಇದು ಮುಖ್ಯವಾಹಿನಿಗಳ ಬೆಳಕಿಗೆ ಬಂದಿಲ್ಲ. ಈ ವಿಷಯದಲ್ಲಿ ಕೆಲ ಪಕ್ಷಗಳು ರಾಜಕೀಯ ಮಾಡುತ್ತಿದ್ದು, ಈ ಪ್ರಕರಣಗಳಿಗೆ ಕಾರಣರಾದ ಎಲ್ಲಾ ಆರೋಪಿಗಳ ವಿಚಾರಣೆಯನ್ನು ಫಾಸ್ಟ್ಟ್ಯ್ರಾಕ್ ನ್ಯಾಯಾಲಯದಲ್ಲಿ ನಡೆಸಿ ತಕ್ಷಣವೇ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಆಗ್ರಹಿಸಿದರು.
ಈ ವೇಳೆ ನಗರ ಕಾರ್ಯದರ್ಶಿ ಇಟಗಿ ಆಕಾಶ್, ಕಾರ್ಯಕರ್ತರಾದ ಸುಮನ್ ರಾಮ್, ಚೇತನ್, ದಿವಾಕರ್, ಪುಟ್ಟರಾಜು ಸೇರಿದಂತೆ ಇತರರಿದ್ದರು.