ಯುವತಿ ಕೊಲೆ : ಶಿಕ್ಷೆಗೆ ಆಗ್ರಹ

ಜಗಳೂರು, ಅ.1- ದಲಿತ ಯುವತಿಯ ಅತ್ಯಾಚಾರಗೈದು, ಚಿತೆಗೈದು ಸಾಕ್ಷಿ ನಾಶ ಪಡಿಸಿರುವುದನ್ನು ಖಂಡಿಸಿ, ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗ ಜಮಾಯಿ ಸಿದ್ದ ಪ್ರತಿಭಟನಾಕಾರರು  ಸರ್ಕಾರದ ವಿರುದ್ಧ ಘೊಷಣೆ ಕೂಗಿ ನಂತರ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಉತ್ತರ ಪ್ರದೇಶದ ಆಗ್ರಾ ಮತ್ತು ಅಲಿಘರ್ ನಡುವೆ ಇರುವ ಹತ್ರಾಸ್‌ನಲ್ಲಿ ಸೆಪ್ಟೆಂಬರ್ 14ರಂದು 19 ವರ್ಷದ ದಲಿತ ಸಮುದಾಯದ ಯುವತಿ ತಾಯಿ ಜೊತೆ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಕಾಣೆಯಾಗಿ ನಂತರ ಮಾರಣಾಂತಿಕ ಸ್ಥಿತಿಯಲ್ಲಿ ಪತ್ತೆಯಾಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಪೊಲೀಸ್ ಅಸ್ತ್ರ ಬಳಸಿ ಸಾಕ್ಷಿ ನಾಶ ಮಾಡಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಶೀಘ್ರವೇ ಈ ಸಾವಿಗೆ ಕಾರಣರಾದ ವಿಕೃತ ಕಾಮಿಗಳಿಗೆ ಕಠಿಣ ಕಾನೂನು ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಮಾಜಿ ಕಾರ್ಯದರ್ಶಿ ಬಿ.ಲೋಕೇಶ್, ವಕೀಲ ಆರ್. ಓಬಳೇಶ್, ಮಹಮ್ಮದ್ ಭಾಷಾ, ಅನ್ವರ್ ಸಾಬ್, ರಾಜಪ್ಪ, ಕೆ.ಮಂ ಜಪ್ಪ, ಸತ್ಯಮೂರ್ತಿ, ಅಜಯ್, ನಿಂಗರಾಜ್, ಅನಂತ ರಾಜ್, ಅಂಜಿನಪ್ಪ, ಕರಿಬಸಪ್ಪ, ಯುವರಾಜ್, ಮಂಜು ನಾಥ, ಎಂ. ಅರುಣ್, ಗೌತಮ್ ಮೈಲಾರಿ,  ರಘುವೀ ರ್‍ನಾಯ್ಕ  ಹೇಮಾರೆಡ್ಡಿ ಸೇರಿದಂತೆ ಭಾಗವಹಿಸಿದ್ದರು.

error: Content is protected !!