ನದಿಯ ಜಲದೆಡೆಯಲ್ಲಿ
ಮೌನ ರಾಗದಲ್ಲರಳಿ
ಮನವಲ್ಲಿ ತೇಲಿ ಸಾಗಿದಾಗ
ಭಾವ ಉಲಿದು ನಲಿಯಿತಲ್ಲಿ !
ನದಿ ಪಾತ್ರ ತಿರುವಿನಲಿ
ಕಣ್ ಮಿನುಗಿ ಸೆರಗಿನಲಿ
ತನ್ನ ತಾ ಹುಡುಕಿದಾಗ
ಬಿಂಬವದು ಪ್ರತಿಫಲಿಸಿತಲ್ಲಿ !
ಪ್ರಾಂಜಲವು ಓಘದೋಣವಲಿ
ನಿನಾದದ ಜುಳು ಜುಳುವಿನಲ್ಲಿ
ಮೊಗದಲ್ಲಿ ನಗು ಅರಳಿತಾಗ
`ಕಲ್ಲನದು’ ಮುತ್ತಿಕ್ಕಿ ಸಾಗಿದಾಗ !
ಬಂಧನವಿರದ ಹರಿವಿನಲಿ
ಅನುಬಂಧ ಬೆಸೆಯುವಲಿ
ಭಾವಾನುಬಂಧ ಬರಸೆಳೆದಾಗ
ನನ್ನಿರಿವು ನಾ ಮರೆತನಲ್ಲಿ !
ವೀಣಾ ಕೃಷ್ಣಮೂರ್ತಿ
ದಾವಣಗೆರೆ.