ದಾವಣಗೆರೆ ವಿಶ್ವವಿದ್ಯಾನಿಲಯದ ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ರಾಘವನ್
ದಾವಣಗೆರೆ, ಜೂ. 27- ವ್ಯಕ್ತಿಗತ ಸುರಕ್ಷತೆಯ ಜೊತೆಗೆ ಸಮಾಜದ ಆರೋಗ್ಯ ರಕ್ಷಣೆಗೂ ಮಾಸ್ಕ್ ಧರಿಸುವುದು ಉತ್ತಮ ಅಭ್ಯಾಸ. ಇದರಿಂದ ಕೊರೊನಾ ಸೇರಿದಂತೆ, ಯಾವುದೇ ವೈರಾಣು ಹರಡದಂತೆ ತಡೆಯಲು ಸಹಕಾರಿ ಎಂದು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ರಾಘವನ್ ತಿಳಿಸಿದರು.
ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಮೊನ್ನೆ ಏರ್ಪಡಿಸಿದ್ದ ಮಾಸ್ಕ್ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವೈರಾಣು ಸೋಂಕಿತ ವ್ಯಕ್ತಿಯ ಕೆಮ್ಮು ಅಥವಾ ಸೀನಿನ ಹನಿಗಳು ಗಾಳಿಯಲ್ಲಿರುವಾಗ ಅದರ ಮೂಲಕ ಕೊರೊನಾ ವೈರಾಣು ಆರೋಗ್ಯವಂತ ವ್ಯಕ್ತಿಯನ್ನು ಪ್ರವೇಶಿಸಿ ಶ್ವಾಸಕೋಶಕ್ಕೆ ತೊಂದರೆ ಮಾಡುವ ಸಾಧ್ಯತೆಗಳು ಹೆಚ್ಚು. ಮಾಸ್ಕ್ ಧರಿಸಿದರೆ ರೋಗಾಣು ಪ್ರವೇಶಿಸುವ ಅವಕಾಶಗಳನ್ನು ತಡೆಯುತ್ತದೆ ಎಂದರು.
ಕೆಲವು ಸಂದರ್ಭದಲ್ಲಿ ಸೋಂಕಿತ ವ್ಯಕ್ತಿ ಯಲ್ಲಿ ಯಾವುದೇ ರೀತಿಯ ರೋಗ ಲಕ್ಷಣ ಗಳು ಕಾಣದಿದ್ದರೂ ಆಂತರಿಕವಾಗಿ ಆರೋ ಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಇರುತ್ತವೆ. ಎಲ್ಲರೂ ಮಾಸ್ಕ್ ಧರಿಸಿದರೆ ಕೊರೊನಾ ವೈರಾಣು ವನ್ನು ಶೇ 80ರಷ್ಟು ನಿಯಂತ್ರಿಸಬಹುದು. ಅಲ್ಲದೇ ಸಮಸ್ಯೆಯ ಗಂಭೀರತೆಯನ್ನೂ ತಡೆಯಲು ಸಹಕಾರಿ. ಸಮಾಜದಲ್ಲಿ ವೈರಾಣು ಹರಡದಂತೆ ತಡೆ ಯಲು ನೆರವಾಗುವುದು ಎಂದು ಹೇಳಿದರು.
ಮಾಸ್ಕ್ ಧರಿಸುವುದು ಕೇವಲ ಕೊರೊನಾ ವೈರಸ್ನಿಂದ ರಕ್ಷಣೆ ಪಡೆಯುವುದಕ್ಕೆ ಸೀಮಿತವಾಗಿಲ್ಲ. ಪರಿಸರ ದಲ್ಲಿ ವಾಹನಗಳ ದಟ್ಟಣೆ ಯಿಂದ ತುಂಬಿರುವ ಇಂಗಾಲದ ಡೈ ಆಕ್ಸೈಡ್ ಹಾಗೂ ಇನ್ನಿತರೆ ವೈರಾಣುಗ ಳಿಂದಲೂ ಮುಕ್ತಿ ಪಡೆಯಲು ಸಹಕಾರಿ. ಆರೋಗ್ಯಕರ ಸಮಾಜ ನಿರ್ಮಿಸಲು ಎಲ್ಲರ ಸಹಕಾರ ಅಗತ್ಯ.
-ಪ್ರೊ. ಬಸವರಾಜ ಬಣಕಾರ, ಕುಲ ಸಚಿವ, ದಾವಣಗೆರೆ ವಿವಿ.
ಮುಖಗವುಸುಗಳಲ್ಲಿ ಮೂರು ವಿಧಗಳಿವೆ. ಬಟ್ಟೆಯಿಂದ ತಯಾರಿಸಿದ ಮುಖಗವುಸಿನಿಂದ ಶೇ. 60ರಷ್ಟು ರೋಗಾಣು ತಡೆಯಬಹುದು. ಶಸ್ತ್ರ ಚಿಕಿತ್ಸಕ ಮುಖಗವುಸು ಆರೋಗ್ಯಕರವಾದರೂ 8 ತಾಸಿಗಿಂತ ಹೆಚ್ಚು ಹೊತ್ತು ಬಳಸಲು ಸಾಧ್ಯವಾಗದು. ಎನ್-95 ಮುಖಗವುಸಿನಿಂದ ಆರೋಗ್ಯ ನಿಯಂತ್ರಣಕ್ಕೆ ಉತ್ತಮವಾದುದು. ಅದನ್ನು ಮರು ಬಳಕೆ ಮಾಡಬಹುದು. ಇವೆಲ್ಲವುಗಳಿಗಿಂತ ಮನೆಯ ಲ್ಲಿಯೇ ಬಟ್ಟೆಯಿಂದ ತಯಾರಿಸಿದ ಮಾಸ್ಕ್ ಧರಿಸುವುದು ಉತ್ತಮ ಎಂದು ಹೇಳಿದರು.
ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಬಸವರಾಜ ಬಣಕಾರ ಮಾತನಾಡಿ, ದಾವಣಗೆರೆ ವಿಶ್ವವಿದ್ಯಾನಿಲಯದ ವತಿಯಿಂದ ಸುಮಾರು 1.5 ಲಕ್ಷ ರೂ. ಮೌಲ್ಯದ ಮಾಸ್ಕ್‍ಗಳನ್ನು ಸಾರ್ವಜನಿಕರಿಗೆ ವಿತರಿಸಿ ಸಾಮಾಜಿಕ ಜವಾಬ್ದಾರಿಯನ್ನೂ ನಿರ್ವಹಿಸಲಾಗಿದೆ ಎಂದು ಹೇಳಿದರು.
ಪ್ರಾಧ್ಯಾಪಕರುಗಳಾದ ಪ್ರೊ. ವಿ.ಕುಮಾರ್, ಪ್ರೊ. ಕೆ.ಬಿ.ರಂಗಪ್ಪ, ಪ್ರೊ. ಕೆ. ವೆಂಕಟೇಶ್, ನೋಡಲ್ ಅಧಿಕಾರಿ ಡಾ. ಶರತ್, ಪ್ರಾಧ್ಯಾಪಕರಾದ ಡಾ. ಎಚ್.ವಿಶ್ವನಾಥ, ಪ್ರೊ. ಮಹಾಬಲೇಶ್ವರ, ಡಾ. ಎನ್.ಎಸ್. ಗುಂಡೂರ, ಡಾ. ಅಶೋಕ್‌ಕುಮಾರ ಪಾಳೇದ, ಪ್ರೊ. ರವಿಕುಮಾರ ಪಾಳೇದ, ಡಾ. ಸಂತೋಷ್, ಡಾ. ಸದಾಶಿವ ಉಪಸ್ಥಿತರಿದ್ದರು.