ಹೊನ್ನಾಳಿ, ಜೂ.28- ಮುಂದಿನ ಗ್ರಾಮ ಪಂಚಾಯ್ತಿ ಚುನಾವಣೆ ನಡೆಸುವವರೆಗೂ ಪ್ರಸ್ತುತ ಇರುವ ಸ್ಥಳೀಯ ಸರ್ಕಾರ (ಹಾಲಿ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು) ವನ್ನೇ ಮುಂದುವರೆಸಬೇಕು ಹಾಗೂ ಗ್ರಾ.ಪಂ.ಗಳಿಗೆ ಆಡಳಿತಾಧಿಕಾರಿ ನೇಮಕ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ, ಭ್ರಷ್ಟಾಚಾರ ವಿರೋಧಿ ವೇದಿಕೆ ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ.
ಮುಂದಿನ ಗ್ರಾಮ ಪಂಚಾಯ್ತಿ ಚುನಾವಣೆ ನಡೆಸುವವರೆಗೂ ಪ್ರಸ್ತುತ ಇರುವ ಸ್ಥಳೀಯ ಸರ್ಕಾರವನ್ನೇ ಮುಂದುವರೆಸಬೇಕು ಮತ್ತು ಗ್ರಾಮ ಪಂಚಾಯ್ತಿಗಳಿಗೆ ಆಡಳಿತಾಧಿಕಾರಿ ನೇಮಕ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ವೇದಿಕೆ ರಾಜ್ಯಾಧ್ಯಕ್ಷ ಎ. ಉಮೇಶ್ ಮನವಿ ಮಾಡಿದ್ದಾರೆ.
ವೇದಿಕೆ ಮುಖಂಡರುಗಳಾದ ಗುರುಪಾದಯ್ಯ ಮಠದ್, ರಾಜು ಕಣಗಣ್ಣಾರ್, ಎಂ. ವಾಸಪ್ಪ, ಹನುಮಂತಪ್ಪ ಸೊರಟೂರು, ಪ್ರಸನ್ನ ಕುಂದೂರು ಹಾಗೂ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷ ರುಗಳಾದ ಬಿ.ಸಿ. ಮಂಜುನಾಥ್, ಅನಸೂಯಮ್ಮ, ರತ್ನಮ್ಮ, ಲಕ್ಷ್ಮಿ ದೇವಮ್ಮ, ಜಯಮ್ಮ, ರಾಧಾಬಾಯಿ, ಸುಜಾತ, ಜಿ. ಬಸವರಾಜಪ್ಪ, ಟಿ.ಎಸ್. ಹಾಲೇಶ್, ದಾಕ್ಷಾಯಣಮ್ಮ, ಎಂ.ಸಿ. ಮಾಲಾ, ಲಲಿತಮ್ಮ ರಾಜಪ್ಪ, ಸೌಮ್ಯರಾಣಿ, ಹನುಮಂತಪ್ಪಗೌಡ್ರು ಇನ್ನಿತರರು ಮನವಿ ಸಲ್ಲಿಸಿದರು.