ದಾವಣಗೆರೆ, ಜೂ. 28- ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಜಿಲ್ಲಾ ಯುವ ಘಟಕದ ಕಾರ್ಯಕರ್ತರು ಹಿಮಗಿರಿಯ ಗಲ್ವಾನ್ ಕಣಿವೆಯಲ್ಲಿ ಭಾರತದ ಭೂಭಾಗದ ರಕ್ಷಣೆಗಾಗಿ ಚೀನಾದ ಸೈನಿಕರೊಂದಿಗೆ ನಡೆದ ಘರ್ಷಣೆಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ನಗರದ ಜಯದೇವ ವೃತ್ತದಲ್ಲಿ ನಿನ್ನೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಯುವ ಘಟಕದ ಜಿಲ್ಲಾಧ್ಯಕ್ಷ ಎಸ್. ಶ್ರೇಯಸ್, ನಾಗರಾಜ್ ಗೌಡ, ರಾಮಣ್ಣ ತೆಲಿಗಿ, ನಾಗರಾಜ್ ಆದಾಪುರ, ಗಿರಿಧರ್, ಚಂದ್ರಶೇಖರ್ ನಾಯ್ಕ, ವಿನಾಯಕ್ ಹೆಚ್., ಸಂತೋಷ್ ಕುಮಾರ್ ಎನ್., ಮೊಹಿದ್ದೀನ್, ಅನೀಫ್ ಹಾಗೂ ಮಹಿಳಾ ಘಟಕದ ಕವಿತಾಚಂದ್ರಶೇಖರ್, ಆಶಾ ಕೃಷ್ಣಮೂರ್ತಿ, ಪದ್ಮಾವತಿ, ಗೀತಾರೆಡ್ಡಿ ಸೇರಿದಂತೆ ಅನೇಕರು ಇದ್ದರು.