ಹೊನ್ನಾಳಿ : ಶಿಕ್ಷಕಿ ಕುಟುಂಬದಿಂದ 3 ಸಾವಿರ ವಿದ್ಯಾರ್ಥಿಗಳಿಗೆ ಮಾಸ್ಕ್

ಹೊನ್ನಾಳಿ, ಜೂ.28- ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕೂರುವ ವಿದ್ಯಾರ್ಥಿಗಳಿಗಾಗಿ ತಾವೇ ಸಿದ್ಧಪಡಿಸಿರುವ ಮಾಸ್ಕ್‌ಗಳನ್ನು ಎಸ್.ಎಸ್. ಮಂಜಿಲ್ ಉಚಿತ ಮನೆಪಾಠ ಸಂಸ್ಥಾಪಕರಾದ ಶಿಕ್ಷಕಿ ಷಹಜಾನ್ ಮತ್ತು ಅವರ ಪುತ್ರಿಯರಾದ ಶಮಾ, ಸೀಮಾ ಅವರುಗಳು ಡಿಡಿಪಿಐ ಅವರಿಗೆ ಹಸ್ತಾಂತರಿಸಿದರು. ಪಟ್ಟಣದ ಗುರುಭವನದಲ್ಲಿ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷಾ ಪೂರ್ವಸಿದ್ಧತಾ ಸಭೆ ವೇಳೆ ಮಾಸ್ಕ್‌ಗಳನ್ನು ಹಸ್ತಾಂತರಿಸಲಾಯಿತು. ಬಿಇಓ ಜಿ.ಇ. ರಾಜೀವ್, ಬಿಆರ್‌ಸಿ ಎಚ್.ಎಸ್. ಉಮಾಶಂಕರ್, ಎಪಿಸಿ ಯೋಗೇಶ್ವರಯ್ಯ, ಷಹಜಾನ್ ಮತ್ತು ಅವರ ಪುತ್ರಿಯರಾದ ಶಮಾ, ಸೀಮಾ ಹಾಗು ಇತರರು ಉಪಸ್ಥಿತರಿದ್ದರು.

error: Content is protected !!