ದಾವಣಗೆರೆ, ಜೂ.26- ಜಿಲ್ಲಾ ವಕ್ಫ್ ಬೋರ್ಡ್ ಸಾಮಾನ್ಯ ಸಭೆಯನ್ನು ಮುಸ್ಲಿಂ ಹಾಸ್ಟೆಲ್ನಲ್ಲಿ ನಡೆಸಲಾಯಿತು. ಲಾಕ್ಡೌನ್ ಸಂದರ್ಭದಲ್ಲಿ ತನು, ಮನ, ಧನದಿಂದ ಸಹಕರಿಸಿದ ಎಲ್ಲರಿಗೂ ಸಭೆಯಲ್ಲಿ ಕೃತಜ್ಞತೆ ಸಲ್ಲಿಸಲಾಯಿತು. ವಕ್ಫ್ಬೋರ್ಡ್ ಅಧ್ಯಕ್ಷ ಮೊಹಮ್ಮದ್ ಸಿರಾಜ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಂ.ಎಸ್. ಸಮೀವುಲ್ಲಾ, ಕೆ. ಸಿರಾಜ್ ಅಹಮ್ಮದ್, ಇಫ್ತಿಖಾರ್ ಅಹಮ್ಮದ್, ಜಿಲ್ಲಾ ವಕ್ಫ್ ಅಧಿಕಾರಿ ಮೌಜಮ್ ಪಾಷಾ, ವಕ್ಫ್ ನಿರೀಕ್ಷಕ ಜಾಕೀರ್ ಹುಸೇನ್ ಮತ್ತು ಮಹಮ್ಮದ್ ರಿಜ್ವಾನುಲ್ಲಾ ಉಪಸ್ಥಿತರಿದ್ದರು.
January 10, 2025