ಪ್ರಕೃತಿಯೇ ಸಾರ್ವಭೌಮ
ಗಿಡ, ಮರ, ಬೆಟ್ಟ, ನದಿಗಳೆಲ್ಲ ಪ್ರಕೃತಿ
ಮಾನವನ ದುರಾಸೆ ಹೆಚ್ಚಾಗಿ
ಪ್ರಕೃತಿ ಸರ್ವನಾಶವಾಗುತ್ತಿದೆ
ಹಿಂದೆ ಕೆರೆ ಕಟ್ಟೆ, ಬಾವಿ ತುಂಬಿ ತುಳುಕುತ್ತಿದ್ದವು
ಮಳೆ ಬೇಡವೆಂದರೂ ಸುರಿಯುತ್ತಿತ್ತು
ಈಗ ಅತಿವೃಷ್ಟಿ, ಅನಾವೃಷ್ಟಿ
ಜನಸಂಖ್ಯೆ ಹಿತಮಿತವಾಗಿತ್ತು
ಸಾವಿರಾರು ಅಡಿ ಎತ್ತರದ ಅಣೆಕಟ್ಟುಗಳು
ಒಂದಲ್ಲ ಒಂದು ದಿನ ಒಡೆದರೆ ಸರ್ವನಾಶ
ಮಾನವ ಅಲ್ಪ ಸುಖಿ ದೀರ್ಘಾಯುಷಿ ಆಗಿದ್ದ
ಶತ ಶತಮಾನಗಳ ಹಿಂದೆ
ಅತಿಕ್ರಮಣ ಅನಾಗರಿಕತೆ ಅಲ್ಲವೇ?
ಭೂಮಿ, ನೀರು, ಗಾಳಿಗೆ ಸ್ವಾತಂತ್ರ್ಯವಿದೆ
ಹಿಂದೆ ಬಡತನವಿತ್ತು, ಆರೋಗ್ಯವಿತ್ತು
ಈಗ ಸಿರಿತನ ಸೋಮಾರಿಗಳ ಸ್ವತ್ತಾಗಿದೆ
ಮನೆಗಳೆಲ್ಲ ಜೈಲುಗಳಾಗಿವೆ
ಬಾಯಿ, ಮೂಗು ಮುಚ್ಚಿ ವ್ಯವಹರಿಸಬೇಕಾಗಿದೆ
ಆಸ್ಪತ್ರೆಗಳಲ್ಲಿ ಸ್ಥಳವಿಲ್ಲ ಸರ್ಕಾರಕ್ಕೆ ತಲೆನೋವು
ಮಾನವೀಯತೆ ನಾಶವಾಗಿ ಭೂ ಒಡಲು ಸೇರಿದೆ.
ಕೆ.ಎನ್. ಸ್ವಾಮಿ
ದಾವಣಗೆರೆ.