ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಪೂರೈಸುವ ಚಿಕಿತ್ಸೆ

ಈಗಾಗಲೇ ತಿಳಿದಿರುವಂತೆ ಕೋವಿಡ್ ಪ್ರಪಂಚದಲ್ಲಿ ಎಲ್ಲಾ ಕಡೆ ವ್ಯಾಪಿಸಿಕೊಳ್ಳ ಲಾರಂಭಿಸಿದೆ. ನೂರು ರೋಗಿಗಳ ಪೈಕಿ ಸುಮಾರು ಶೇ.90 ರಷ್ಟು ರೋಗಿಗಳು ಗುಣಮುಖರಾಗುತ್ತಾರೆ. ಇದರಲ್ಲಿ ಶೇ.10 ಭಾಗದ ರೋಗಿಗಳು ಉಸಿರಾಟದ ತೊಂದರೆಗೊಳಗಾಗುತ್ತಾರೆ. ಇದರಲ್ಲಿ ಸರಿ ಸುಮಾರು ಶೇ.2 ರಿಂದ 3 ರೋಗಿಗಳು ಅನೇಕ ಕಾಯಿಲೆಗಳಿಂದ ಬಳಲುವವರು. 

ಸಕ್ಕರೆ ಕಾಯಿಲೆ, ರಕ್ತದೊತ್ತಡ, ಹೃದಯದ ಸಮಸ್ಯೆ, ಕಿಡ್ನಿ ವೈಫಲ್ಯ, ಶ್ವಾಸಕೋಶಗಳ ತೊಂದರೆ ಇರುವವರು, ತೀವ್ರ ಉಸಿರಾಟದ ತೊಂದರೆಯಿಂದ ಬಳಲಿದರೆ ಅವರಿಗೆ ಉಸಿರಾಟಕ್ಕೆ ಸಹಾಯ ಬೇಕಾಗುತ್ತದೆ.

ಈ ಕೋವಿಡ್ ರೋಗಿಗಳಿಗೆ ಹೆಚ್ಚಿನ ಆಮ್ಲಜನಕ ಬೇಕಾಗಿರುತ್ತದೆ. ಅವರ ಶ್ವಾಸನಾಳಗಳು ಹೆಚ್ಚಿನ ರೀತಿಯಲ್ಲಿ ಸೋಂಕಿಗೆ ಒಳಗಾಗಿರುತ್ತವೆ. ಇಂತಹ ರೋಗಿಗಳಿಗೆ ಉಸಿರಾಟದ ತೊಂದರೆ ಬಹಳ ಇರುತ್ತದೆ. ಇಂತಹ ರೋಗಿಗಳಿಗೆ ವೆಂಟಿಲೇಟರ್ ಬೇಕಾಗಿರುತ್ತದೆ. ಇಂತಹ ರೋಗಿಗಳು ಉಸಿರಾಟದ ಫೈಲೂರ್‌ನಲ್ಲಿ (Respiratory Failure) ಇರುತ್ತಾರೆ.

ಈ ಕೋವಿಡ್ ರೋಗಿಗಳಿಗೆ ಹೆಚ್ಚಿನ ಪ್ರಮಾಣದ ಆಮ್ಲಜನಕ ಪೂರೈಕೆ ಚಿಕಿತ್ಸೆ (HFNO High Flow Nasal Oxygen) ಬೇಕಾಗಿರುತ್ತದೆ. ಇದರಿಂದ ಶೇ.30 ರಿಂದ 40 ಭಾಗದ ರೋಗಿಗಳು ವೆಂಟಿಲೇಟರ್‌ಗೆ ಹೋಗುವುದನ್ನು ತಪ್ಪಿಸಬಹುದು.

HFNO ಉಪಕರಣ:

ಈ ಸಾಧನದಲ್ಲಿ ಸೂಕ್ತ ಅಳತೆಯ ಮೂಗಿನ ನಳಿಕೆ. ಜೊತೆಗೆ ಪ್ರಾಣವಾಯು ಪ್ರವಹಿಸುವ ಮಾಪನ, ಗಾಳಿ ಮತ್ತು ಆಮ್ಲಜನಕ ಬ್ಲೆಂಡರ್ ಮತ್ತು ಗ್ಯಾಸ್ ವಿಶ್ಲೇಷಕ ಉಪಕರಣ ಒಳಗೊಂಡಿದೆ.

* ಉಪಕರಣಕ್ಕೆ ಅನುಗುಣವಾಗಿ ಪ್ರತಿ ನಿಮಿಷಕ್ಕೆ 40 ರಿಂದ 60 ಲೀಟರ್ ಗಾಳಿ ಹರಿಸಬಹುದು.

* ಗಾಳಿಯನ್ನು ಬಿಸಿ ಮಾಡುವ ವ್ಯವಸ್ಥೆ ಗಾಳಿಯನ್ನು 330 ಮತ್ತು 430°ಮತ್ತು ಆರ್ದತೆಯನ್ನು 95% ರಿಂದ 100% ಮಾಡಿ ವಿತರಿಸುತ್ತದೆ.

* ಈ ಉಪಕರಣದ ಬಳಕೆಯಿಂದ ಬಿಸಿಯಾದ, ಆದ್ರತೆಯುಳ್ಳ ಗಾಳಿಯು ಪ್ರತಿ ನಿಮಿಷಕ್ಕೆ 60 ಲೀ. ನಷ್ಟು ಹರಿಯುತ್ತದೆ. ಉಚ್ವಾಸನ (ಉಸಿರೆಳೆದುಕೊಳ್ಳುವ) ಗಾಳಿಯಲ್ಲಿ 100 ಕ್ಕೆ 100 ರಷ್ಟು ಪ್ರಮಾಣದ ಆಮ್ಲಜನಕ ಪೂರೈಕೆಯಾಗುತ್ತದೆ. 

* ಇದರಿಂದಾಗಿ ವ್ಯಕ್ತಿಗೆ ಅನುಕೂಲವಾಗು ವಂತಹ, ಬಿಸಿಯಾದ, ಆರ್ದ್ರತೆಯಾದ, ವ್ಯಕ್ತಿಗೆ ಅಂಗೀಕಾರ ಮತ್ತು ಹಿತಕರವಾದ ಅಧಿಕ ಪ್ರಮಾಣದ ಆಮ್ಲಜನಕ ದೊರೆಯುತ್ತದೆ.

* ಉಸಿರು ನಾಳ (ಮಾರ್ಗ) ದಲ್ಲಿ ತೇವಾಂಶ, ಉಷ್ಣಾಂಶ ನಾಶವಾಗುವುದು ಕಡಿಮೆಯಾಗಿ ಉಸಿರಾಡುವ ಸ್ಥಳ ಹೆಚ್ಚುವುದರಿಂದ ಆಮ್ಲಜನಕ ಪೂರೈಕೆ ಹೆಚ್ಚಾಗುತ್ತದೆ.

ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಪೂರೈಸುವ ಚಿಕಿತ್ಸೆ : ಶಸ್ತ್ರಚಿಕಿತ್ಸೆ, ಅದರಲ್ಲೂ ಮುಖ್ಯವಾಗಿ ಉದರಕ್ಕೆ ಸಂಬಂಧಿಸಿದ ದೊಡ್ಡ ದೊಡ್ಡ ಶಸ್ತ್ರಚಿಕಿತ್ಸೆ ಮಾಡಿದಾಗ, ಆಪರೇಷನ್ ಆಗಿ ಚೇತರಿಸಿಕೊಳ್ಳುತ್ತಿರುವ ವ್ಯಕ್ತಿಗಳಿಗೆ ಉಸಿರಾಟದ ತೊಂದರೆ ಉಂಟಾಗುವುದು ಸಾಮಾನ್ಯ. ಏಕೆಂದರೆ, ಇವರ ಶ್ವಾಸಕೋಶದ ಚಿಕ್ಕ ಚಿಕ್ಕ ಉಸಿರು ಗೂಡುಗಳ ಶಕ್ತಿ ಉಡುಗಿರುತ್ತದೆ. ಶ್ವಾಸನಾಳಗಳ ಹಾದಿ ದುರಸ್ತಿಯಾಗುತ್ತಿರುತ್ತದೆ. ನೋವಿನ ಗೂಡಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಅವರಿಗೆ ಮೂಗಿನ ಮೂಲಕ ಹೆಚ್ಚು ಪ್ರಮಾಣದಲ್ಲಿ ಆಮ್ಲಜನಕವನ್ನು ಪೂರೈಸಬೇಕಾಗಿರುತ್ತದೆ.

ವಾಸ್ತವವಾಗಿ, ಅಧಿಕ ಪ್ರಮಾಣದ ಆಮ್ಲಜನಕ ಕೊಡುವಾಗ, ರೋಗಿಗೆ ಹಿತಕರವಾಗುತ್ತದೆ. ಚೆನ್ನಾಗಿ ತಾಳಿಕೊಳ್ಳುತ್ತಾನೆ, ಸಹಿಸಿಕೊಳ್ಳುತ್ತಾನೆ, ಆರಾಮದಾ ಯಕ ಅನುಭವ ಉಂಟಾಗುತ್ತದೆ. 

ಅಧಿಕ ಪ್ರಮಾಣದಲ್ಲಿ ಕೊಡುವ ಆಮ್ಲಜನಕ ಶ್ವಾಸಕೋಶದ ಫೈಲೂರ್‌ನಲ್ಲಿ ಪರಿಣಾಮಕಾರಿ ಯಾಗುತ್ತದೆ. ಹೆಚ್ಚು ಉಪಯೋಗವಾಗುತ್ತದೆ. ಸೂಕ್ತವಾದಷ್ಟೇ ಆಮ್ಲಜನಕ ಪೂರೈಕೆಯಾಗುವುದ ರೊಂದಿಗೆ, ಪ್ರಾಣ ವಾಯುವಿನಲ್ಲಿ ತಕ್ಕಷ್ಟು ಆರ್ದ್ರತೆ (ತೇವ) ಸಹ ಉಂಟಾಗುತ್ತದೆ.

ಉಸಿರಾಡುವ ವೇಗ ಹದಗೊಳ್ಳುತ್ತದೆ. ಆಮ್ಲಜನಕ ಸರಬರಾಜಿನಿಂದ ಉಸಿರಾಟದ ಕ್ರಿಯೆಯ ಹೊರೆ ಕಡಿಮೆಯಾಗುತ್ತದೆ.

ಇದೇ ರೀತಿ ಆಮ್ಲಜನಕ ಕೊಡುವ ವಿಧಾನದಿಂದ ಹೆರಿಗೆಯಲ್ಲಿ, ಗರ್ಭಿಣಿಗೆ, ವಯಸ್ಕರಿಗೆ ನಂಜು ಉಂಟಾಗಿರುವ ಜನರಿಗೆ ಹೆಚ್ಚು ಅನುಕೂಲವಾಗುತ್ತದೆ.

ಈ ಉಪಕರಣಗಳು ಜಿಲ್ಲಾ ಚಿಗಟೇರಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಈಗ ಲಭ್ಯವಿರುತ್ತವೆ. ಈಗ ಎರಡು ಉಪಕರಣಗಳು ಸಿ.ಜಿ. ಆಸ್ಪತ್ರೆಗೆ ಬಂದಿವೆ. ಮುಂದಿನ ದಿನಗಳಲ್ಲಿ ಬಾಪೂಜಿ ಆಸ್ಪತ್ರೆ ಮತ್ತು ಎಸ್‌.ಎಸ್‌. ಮೆಡಿಕಲ್‌ ಕಾಲೇಜ್‌ನಲ್ಲಿ ಲಭ್ಯವಿರುತ್ತವೆ. ಇದು ಐ.ಸಿ.ಯು.ವಿನಲ್ಲಿ ಕೆಲಸ ಮಾಡುವ ಅರಿವಳಿಕೆ ವಿಭಾಗದ ವೈದ್ಯರ ಪಾತ್ರವಾಗಿರುತ್ತದೆ. ಈಗಾಗಲೇ ಸುಮಾರು 4-5 ಕೋವಿಡ್ ರೋಗಿಗಳು ವೆಂಟಿಲೇಟರ್ ರಹಿತ ಈ ಉಪಕರಣದಿಂದ ಗುಣಮುಖರಾಗಿದ್ದಾರೆ. 

ಈ ಉಪಕರಣಕ್ಕೆ ಸಹಾಯ ಮಾಡಿದ ಡೆಪ್ಯೂಟಿ ಕಮೀಷನರ್ ಮತ್ತು ಎಕ್ಷ ರ್ಟ್ ಕಮಿಟಿ, ಜೆ.ಜೆ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಛೇರ್ಮನ್
ಡಾ. ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ್ ಅವರುಗಳಿಗೆ ಧನ್ಯವಾದಗಳು.


ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಪೂರೈಸುವ ಚಿಕಿತ್ಸೆ - Janathavani ಡಾ. ಆರ್‌.ರವಿ
ಪ್ರಾಧ್ಯಾಪಕರು ಮತ್ತು ಅರಿವಳಿಕೆ  ಹಾಗೂ ತುರ್ತು ನಿಗಾ ಘಟಕದ ಮುಖ್ಯಸ್ಥರು,
ಜೆ.ಜೆ.ಎಂ. ಮೆಡಿಕಲ್‌ ಕಾಲೇಜ್‌, ದಾವಣಗೆರೆ.

 

error: Content is protected !!