ಪ್ಯಾನ್ ಮಾದರಿ ಹೊಸ ಗುರುತಿನ ಚೀಟಿ

ದಾವಣಗೆರೆ, ಜೂ. 20 – ಪ್ಯಾನ್ ಕಾರ್ಡ್ ಮಾದರಿಯ ಹೊಸ ವಿನ್ಯಾಸದ ಮತದಾರರ ಗುರುತಿನ ಚೀಟಿಯನ್ನು ವಿತರಿಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಹೊಸ ವಿನ್ಯಾಸದ ಮತದಾರರ ಗುರುತಿನ ಚೀಟಿಯನ್ನು ಗುಂಡಾಲ್ ಬ್ಯುಸಿನೆಸ್ ಸಲ್ಯೂಷನ್ಸ್‌ನ ಮಂಜುನಾಥ ಗುಂಡಾಲ್ ಅವರು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಎಸ್ಪಿ ಹನುಮಂತರಾಯ ಅವರಿಗೆ ಸಾಂಕೇತಿಕವಾಗಿ ನೀಡಿದ್ದಾರೆ. ನೂತನ ಎಪಿಕ್ ಕಾರ್ಡ್ ಕುರಿತು ವಿವರ ನೀಡಿರುವ ಮಂಜು ನಾಥ್, ಮತದಾರರ ಗುರು ತಿನ ಚೀಟಿಯ ಗುಣಮಟ್ಟ ವನ್ನು ಸುಧಾರಿ ಸಲು ಆಯೋಗ ಮುಂದಾಗಿದೆ. ಇದರ ಅನ್ವಯ ಹೆಚ್ಚು ಕಾಲ ಬಾಳಿಕೆ ಬರುವ, ಪ್ಯಾನ್ ಕಾರ್ಡ್ ರೀತಿಯ ಹಾಗೂ ಬಣ್ಣದ ಭಾವಚಿತ್ರ ಇರುವ ಗುರುತಿನ ಚೀಟಿ ನೀಡುತ್ತಿದೆ ಎಂದಿದ್ದಾರೆ.

ಈಗಾಗಲೇ ಎಪಿಕ್ ಕಾರ್ಡ್ ಹೊಂದಿರುವವರು ನೂತನ ಕಾರ್ಡುಗಳನ್ನು   ಸಂಬಂಧಿಸಿದ ಸಿ.ಎಂ.ಸಿ.ಗಳ ಮೂಲಕ ಪಡೆಯಬಹುದಾಗಿದೆ. ಮುಂಬರುವ ದಿನಗಳಲ್ಲಿ ಚುನಾವಣಾ ಮತಪಟ್ಟಿ ಪರಿಷ್ಕರಣೆಯಾದ ನಂತರ ಎಲ್ಲರಿಗೂ ಹೊಸ ರೀತಿಯ ಗುರುತಿನ ಚೀಟಿಗಳೇ ಸಿಗಲಿವೆ ಎಂದವರು ವಿವರಿಸಿದ್ದಾರೆ.

ನೂತನ ಕಾರ್ಡುಗಳು ಹೆಚ್ಚು ಸ್ಪಷ್ಟವಾಗಿದ್ದು, ಮತದಾರರ ಗುರುತು ಪತ್ತೆ ಸುಲಭವಾಗಿರಲಿದೆ. ಇವುಗಳು ಹೋಲೋಗ್ರಾಮ್ ಸ್ಟಿಕ್ಕರ್ ಸಹ ಹೊಂದಿರುತ್ತವೆ. ಹಿಂದಿನ ಎಪಿಕ್ ಕಾರ್ಡ್ ರೀತಿಯಲ್ಲೇ ಇವೂ ಸಹ ಮಾನ್ಯತೆ ಹೊಂದಿವೆ ಎಂದವರು ಹೇಳಿದ್ದಾರೆ.

error: Content is protected !!