ದಾವಣಗೆರೆ,ಜೂ.21- ನಗರದ ಎಂ.ಸಿ.ಸಿ. ಎ ಬ್ಲಾಕ್ ನಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಬರುವ ಜುಲೈ 5 ರ ಭಾನುವಾರ ಗುರು ಪೂರ್ಣಿಮೆ ಕಾರ್ಯಕ್ರಮ ಆಚರಣೆ ಇರುವುದಿಲ್ಲ ಎಂದು ಮಂದಿರದ ಕಾರ್ಯದರ್ಶಿ ಎಂ. ಶಿವಪ್ಪ ತಿಳಿಸಿದ್ದಾರೆ.
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದನ್ವಯ ಗುರು ಪೂರ್ಣಿಮೆ ವಿಜೃಂಭಣೆಯ ಆಚರಣೆ ಇರುವುದಿಲ್ಲ. ಕೇವಲ ಅಂದು ಬೆಳಿಗ್ಗೆ 6 ರಿಂದ ರಾತ್ರಿ 8ರವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಹೇಳಿದ್ದಾರೆ.
ಸಾಯಿ ಮಂದಿರದಲ್ಲಿ ಪಾದುಕೆಗಳನ್ನಾಗಲೀ, ಶ್ರೀ ಬಾಬಾರವರ ಮೂರ್ತಿಯನ್ನಾಗಲೀ ಮುಟ್ಟಿ ನಮಸ್ಕಾರ ಮಾಡುವಂತಿಲ್ಲ. ಮಂದಿರದಲ್ಲಿ ಕುಳಿತುಕೊಳ್ಳುವುದು, ಗುಂಪು ಕಟ್ಟಿ ನಿಲ್ಲುವುದಕ್ಕೆ ಅವಕಾಶವಿರುವುದಿಲ್ಲ ಎಂದು ಅವರು ವಿವರಿಸಿದ್ದಾರೆ.
ಮಂದಿರದ ಗುರುಗಳ ಜೊತೆಯಾಗಲೀ, ಸೇವಾಕರ್ತರ ಜೊತೆಯಾಗಲೀ, ಸಾಯಿ ಮಂದಿರ ಟ್ರಸ್ಟ್ ಆಡಳಿತ ಮಂಡಳಿ ಜೊತೆಯಾಗಲೀ ಭಕ್ತಾದಿಗಳು ಸಭ್ಯತೆಯಿಂದ ವರ್ತಿಸಬೇಕು ಎಂದು ಶಿವಪ್ಪ ಅವರು ಮನವಿ ಮಾಡಿಕೊಂಡಿದ್ದಾರೆ.