ದೇವಸ್ಥಾನಗಳಿಗೆ ಕಡಿವಾಣವಿರಲಿ

ಮಾನ್ಯರೇ,

ನಗರದೆಲ್ಲೆಡೆ ಅನೇಕ ವಿವಿಧ ದೇವಸ್ಥಾನಗಳು ಇವೆ. ಆದರೆ ಎಲ್ಲಿ ಬೇಕೆಂದರಲ್ಲಿ ಗಲ್ಲಿಗಳಲ್ಲಿ, ರಸ್ತೆಗಳಲ್ಲಿ ಸಣ್ಣ-ಪುಟ್ಟ ದೇವಸ್ಥಾನಗಳು ತಲೆ ಎತ್ತುತ್ತಲೇ ಇವೆ.

ಮಾನವ ಹೃದಯವೇ ದೇವಾಲಯ. ಸರಿಯಾದ ಮಾರ್ಗದಲ್ಲಿ ನಡೆದರೆ ದೇವರೆ ನಮ್ಮ ಬಳಿ ಬರುತ್ತಾನೆ. ಆದರೆ ನಾವು ನೂರೆಂಟು ದೇವರುಗಳ ದೇವಸ್ಥಾನಗಳನ್ನು ಕಟ್ಟಿ, ಅಖಂಡವಾದ ದೇವರನ್ನು ಸೆರೆಮನೆಯಲ್ಲಿ ಇಡುವಂತೆ ಮಾಡುತ್ತೇವೆ. ಇದು ಸರಿಯೇ?

ಸಂಬಂಧಪಟ್ಟ ಅಧಿಕಾರಿ ವರ್ಗದವರು, ನಗರದ ಪ್ರಮುಖರು ಚಿಂತನೆ ಮಾಡಿ, ಎಲ್ಲೆಂದರಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಕಡಿವಾಣ ಹಾಕಲಿ. ದಯಾಮಯನಾದ ದೇವರು ಎಲ್ಲೆಲ್ಲೂ ಇರುವನು. ದೇವರನ್ನು ಭಕ್ತಿಯಿಂದ ನೆನೆಯೋಣ. ನಮಿಸೋಣ. ದೈವಭಕ್ತರಾಗೋಣ.

– ಜೆಂಬಿಗಿ ಮೃತ್ಯುಂಜಯ, ದಾವಣಗೆರೆ.

error: Content is protected !!