ಬೀದಿ ಬದಿ ವ್ಯಾಪಾರಿಗಳಿಗೆ ಮಾಸ್ಕ್ ವಿತರಣೆ ಬಿಜೆಪಿಯಿಂದ ಮಾಸ್ಕ್ ದಿನಾಚರಣೆ

ಜಗಳೂರು, ಜೂ.18- ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಉಚಿತ ಮಾಸ್ಕ್ ವಿತರಿಸುವ ಮೂಲಕ ತಾಲ್ಲೂಕು ಬಿಜೆಪಿಯಿಂದ ಮಾಸ್ಕ್ ದಿನಾಚರಣೆ ಆಚರಿಸಲಾಯಿತು.

ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಪಲ್ಲಾಗಟ್ಟೆ ಮಹೇಶ್ ಮಾತ ನಾಡಿ, ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಆಡಳಿತ ಸರ್ಕಾರ  ಮುಂಜಾ ಗ್ರತಾ ಕ್ರಮ ಅನುಸರಿಸಿ ಕೊರೊನಾ ಮಹಾಮಾರಿಯನ್ನು ಸಮರ್ಥವಾಗಿ ಎದುರಿಸಿದೆ. ಅದೇ ರೀತಿ ಸರ್ಕಾರದ ಆದೇಶದಂತೆ ಜಗಳೂರು ವಿಧಾನಸಭಾ ಕ್ಷೇತ್ರವನ್ನು ಕೋವಿಡ್-19 ಪಾಸಿಟಿವ್ ಪ್ರಕರಣಗಳಿಂದ ಮುಕ್ತಗೊಳಿಸಲು ಶಾಸಕ ಎಸ್.ವಿ. ರಾಮಚಂದ್ರ ಅವರ ನೇತೃತ್ವದ ಟೀಮ್ ಎಸ್.ವಿ.ಆರ್ ಬಳಗ ಹಾಗೂ ಕೊರೊನಾ ವಾರಿಯರ್ಸ್ ಗ್ರಾಮೀಣ ಭಾಗ ಸೇರಿದಂತೆ ಜನಜಾಗೃತಿ ಮೂಡಿಸಿ ಯಶಸ್ವಿಗೊಳಿಸಿದೆ ಎಂದರು.

ಪಾಸಿಟಿವ್‌ ಪ್ರಕರಣಗಳು ಕಂಡುಬಂದಿಲ್ಲ ಎಂಬ ನಿರ್ಲಕ್ಷ್ಯ ಸಲ್ಲದು. ಪ್ರತಿಯೊಬ್ಬರೂ ಹೊರಗಡೆ ಸಂಚರಿಸುವಾಗ ಮಾಸ್ಕನ್ನು ಕಡ್ಡಾಯ ವಾಗಿ ಧರಿಸಿ ಹಾಗು ಸಾನಿಟೈಸರ್ ಬಳಕೆ ಮಾಡಿ ಕೈಗಳನ್ನು ಸ್ವಚ್ಛಗೊಳಿಸಿ ಕೊಂಡರೆ ಸಾಂಕ್ರಾಮಿಕ ರೋಗಗಳಿಂದ ಮುಕ್ತರಾಗಬಹುದು. ಅಲ್ಲದೆ ಮಕ್ಕಳು, ವಯೊವೃದ್ದರು, ಗರ್ಭಿಣಿಯರು ಮನೆಯಲ್ಲಿದ್ದು ಕೊರೊನಾವನ್ನು ನಿಯಂತ್ರಿಸಲು ಸಹಕಾರ ನೀಡಬೇಕು  ಎಂದು ಕರೆ ನೀಡಿದರು.

ಬಿಜೆಪಿ ಪಕ್ಷ ಮಾಸ್ಕ್ ದಿನಾಚರಣೆಗೆ ಕರೆ ನೀಡಿದ್ದು ತಾಲ್ಲೂಕಿನಲ್ಲಿ ಕಾರ್ಯಕರ್ತರ ಸಹಕಾರದೊಂದಿಗೆ ಪಟ್ಟಣದ ಸಾರ್ವಜನಿಕರಿಗೆ ವ್ಯಾಪಾರಿಗಳಿಗೆ ಪಕ್ಷದ ವತಿಯಿಂದ ಐನೂರಕ್ಕೂ ಅಧಿಕ  ಉಚಿತ ಮಾಸ್ಕ್‌ಗಳನ್ನು ವಿತರಿಸಿ ಬೆಂಬಲಿಸಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಪಂ ಸದಸ್ಯ ಎಸ್.ಕೆ. ಮಂಜುನಾಥ್, ಪಪಂ ಸದಸ್ಯರಾದ ಆರ್. ತಿಪ್ಪೇಸ್ವಾಮಿ ನವೀನ್, ದೇವರಾಜ್ ಕಾಯಿ ಮಂಜಣ್ಣ, ಪಾಪಲಿಂಗಪ್ಪ ಮಹಿಳಾ ಘಟಕದ ರೇಖಾ ಶಿವಕುಮಾರ್, ಪದ್ಮಾ, ಮುಖಂಡರಾದ ಶಿವಕುಮಾರ್, ಕಸ್ತೂರಿಪುರ ಸ್ಲಂ ಮೋರ್ಚಾದ ಓಬಳೇಶ್ ಗೌರಿಪುರ ಶಿವಣ್ಣ, ಕಾಂತರಾಜ್, ಚಂದ್ರಕಾಂತ್ ಮತ್ತಿತರರು ಭಾಗವಹಿಸಿದ್ದರು.

error: Content is protected !!