ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಶಿಫಾರಸ್ಸಿನ ಬಿಜೆಪಿ ಅಭ್ಯರ್ಥಿ ಬದಲಾವಣೆಗೆ ಒತ್ತಾಯ

ದಾವಣಗೆರೆ, ಜೂ.17- ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿರುವ ಜಿಲ್ಲಾ ಕಾಂಗ್ರೆಸ್, ಕೇಂದ್ರ ಸರ್ಕಾರದ ವಿರುದ್ಧ ನಗರದ ಮಹಾ ನಂದಿ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಇಂದು ಪ್ರತಿಭಟನೆ ನಡೆಸಿತು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಯುಪಿಎ ಸರ್ಕಾರದಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಿದ್ದರೂ ಸಹ ಪೆಟ್ರೋಲ್ ಬೆಲೆ 80 ರೂ. ದಾಟಿರಲಿಲ್ಲ. ಆದರೆ ಈಗ ಕಚ್ಚಾ ತೈಲ ಬೆಲೆ ಕಡಿಮೆ ಇದ್ದರೂ ಸಹ ಪೆಟ್ರೋಲ್ ಡೀಸೆಲ್ ಬೆಲೆ ಪ್ರತಿ ದಿನ ಏರುತ್ತಾ ಹೋಗುತ್ತಿದೆ. ಇದರಿಂದ ಅಗತ್ಯ ವಸ್ತುಗಳ ಬೆಲೆ ಏರುತ್ತಿದ್ದು, ನಾಗರಿಕರಿಗೆ ತೊಂದರೆಯಾಗುತ್ತಿದೆ ಎಂದರು. 

ನಗರ ಪಾಲಿಕೆ ಸದಸ್ಯ ಕೆ. ಚಮನ್ ಸಾಬ್ ಮಾತನಾಡಿ, ಇದೇ ರೀತಿ ಬೆಲೆ ಏರುತ್ತಾ ಹೋದರೆ ಮುಂದೆ ಜನಸಾಮಾನ್ಯರು ಜೀವನ ಸಾಗಿಸುವುದೇ ಕಷ್ಟವಾಗುತ್ತದೆ ಎಂದರು. ಸೋಮಲಾಪುರದ ಹನುಮಂತಪ್ಪ, ಆಶಾ ಮುರುಳಿ, ಕೋಳಿ ಇಬ್ರಾಹಿಂ, ಮುಜಾಹಿದ್ ಮಾತನಾಡಿದರು. 

ವಿಪಕ್ಷ ನಾಯಕ ಎ. ನಾಗರಾಜ್, ಪಾಲಿಕೆ ಸದಸ್ಯರುಗಳಾದ ದೇವರಮನೆ ಶಿವಕುಮಾರ್, ಗಡಿ ಗುಡಾಳ್ ಮಂಜುನಾಥ್, ಕಲ್ಲಳ್ಳಿ ನಾಗರಾಜ್, ವಿನಾಯಕ, ಜಿಲ್ಲಾ ಕಾರ್ಯದರ್ಶಿ ಎಸ್. ಮಲ್ಲಿಕಾರ್ಜುನ್, ಎಸ್.ಎಂ. ರುದ್ರೇಶ್, ಹೆಚ್. ಜಯಪ್ಪ, ಕೆ. ಎಲ್. ಹರೀಶ್ ಬಸಾಪುರ, ಬಾತಿ ಶಿವಕುಮಾರ್, ರಘು ದೊಡ್ಮನಿ, ಎನ್ ಎಸ್ ಯುಐ ಶಶಿಧರ್, ಮಹಿಳಾ ಕಾಂಗ್ರೆಸ್ ದ್ರಾಕ್ಷಾಯಣಮ್ಮ, ರಾಜೇಶ್ವರಿ, ಗೀತಾ, ವೀಣಾ, ಕಿಸಾನ್ ಘಟಕದ ಪ್ರವೀಣ್ ಕುಮಾರ್, ಮುಖಂಡರಾದ ಶಮಿ ದೇವರಹಟ್ಟಿ, ಸತೀಶ್ ಶ್ಯಾಗಲೆ, ಅಣಜಿ ಅಂಜಿನಪ್ಪ, ಆರೋಗ್ಯ ಸ್ವಾಮಿ, ಕಲ್ಪನಹಳ್ಳಿ ನಾಗರಾಜ್, ಯುವರಾಜ್, ಶಾಮನೂರು ಸುರೇಶ್, ಮಲ್ಲಿಕಾರ್ಜುನ್ ಇಂಗಳೇಶ್ವರ, ಮಹಾವೀರ್, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

error: Content is protected !!