ಹರಪನಹಳ್ಳಿ : ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದತಿಗೆ ಒತ್ತಾಯ

ಹರಪನಹಳ್ಳಿ, ಜೂ.13- ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದರಿಂದ ಮಕ್ಕಳಲ್ಲಿ ಸೋಂಕು ಉಂಟಾಗುವ ಸಂಭವವಿದ್ದು, ಮಕ್ಕಳ ಜೀವನಕ್ಕೆ ಕುತ್ತು ಬರುವುದು ನಿಶ್ಚಿತವಾಗಿದೆ ಎಂದು ಆಗ್ರಹಿಸಿ ಆಮ್ ಆದ್ಮಿ ಪಕ್ಷದ ವತಿಯಿಂದ  ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. 

ಈ ವೇಳೆ ಆಮ್ ಆದ್ಮಿ ಪಕ್ಷದ ತಾಲ್ಲೂಕು ಸಂಚಾಲಕ ದಾದಾ ಖಲಂದರ್ ಎ.ಟಿ ಮಾತನಾಡಿ, ಪರೀಕ್ಷೆಗಿಂತ ಮಕ್ಕಳ ಜೀವ ಅಮೂಲ್ಯವಾದುದು. ನೆರೆಹೊರೆಯ ರಾಜ್ಯಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದುಗೊಳಿಸಿ ಮಾನವೀಯತೆ ಮೆರೆದಿರುವುದು ಪ್ರಶಂಸ ನೀಯ. ಆದರೆ ನಮ್ಮ ರಾಜ್ಯದ ಶಿಕ್ಷಣ ಸಚಿವರು ನಮ್ಮ ರಾಜ್ಯದಲ್ಲಿ ಯಾವುದೇ ಕಾರಣದಿಂದ ಪರೀಕ್ಷೆ ರದ್ದುಪಡಿಸುವುದಿಲ್ಲವೆಂದು ಭೀಷ್ಮ ಪ್ರತಿಜ್ಞೆ ಮಾಡುತ್ತಿರುವುದು ವಿಪರ್ಯಾಸದ ಸಂಗತಿ. ಮಕ್ಕಳ ಜೀವಕ್ಕಿಂತ ಪರೀಕ್ಷೆಯೇ ಮುಖ್ಯವೆಂಬಂತೆ ವರ್ತಿಸುತ್ತಿದ್ದಾರೆ.

ಕೆಲ ರಾಜ್ಯಗಳು ಪರೀಕ್ಷೆ ರದ್ದುಪಡಿಸಿದ್ದು ಪ್ರತಿಭಾವಂತ ಮಕ್ಕಳಿಗೆ ಯಾವುದೇ ಅನ್ಯಾಯವಾಗದಂತೆ ಮಕ್ಕಳ ಹಿಂದಿನ ಪೂರ್ವ ಪರೀಕ್ಷೆಗಳಲ್ಲಿ ಮತ್ತು ಆಂತರಿಕ ಮೌಲ್ಯಮಾಪನದ ಆಧಾರದ ಮೇಲೆ ತೇರ್ಗಡೆ ಗೊಳಿಸುತ್ತಿ ರುವುದು ಮಕ್ಕಳ ಬಗೆಗಿನ ಕಾಳಜಿಗೆ ಸಾಕ್ಷಿಯಾ ಗಿದೆ. ಎಲ್ಲಾ ರಾಜ್ಯಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಮಹತ್ತರವಾದುದು. ಆದರೂ ಪರೀಕ್ಷೆಗಿಂತ ಅವರ ಜೀವ ಅತೀ ಮುಖ್ಯವಾದುದು ಎಂಬ ಮೌಲ್ಯಯುತ ವಿಚಾರ ಹೊಂದಿರುವ ರಾಜ್ಯಗಳಾಗಿವೆ. ಆಂತರಿಕ ಮೌಲ್ಯಮಾಪನದಿಂದ ಯಾವೊಬ್ಬ ಮಗುವಿನ ಫಲಿತಾಂಶಕ್ಕೆ ಕುಂದುಬಾರದು ಎಂದರು.

ಶಿಕ್ಷಣ ಸಚಿವರು ಪ್ರತಿನಿತ್ಯ ಸಾಮಾಜಿಕ ಜಾಲತಾಣಗಳ ಮೂಲಕ ಪರೀಕ್ಷಾ ಸಂದರ್ಭದಲ್ಲಿ ಸ್ಕ್ರೀನಿಂಗ್, ಸ್ಯಾನಿಟೈಸರ್, ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಹೇಳುತ್ತಿದ್ದಾರೆ. ಒಬ್ಬ ಮಗು ಸತತ 3 ರಿಂದ 4 ತಾಸು ಮೂಗು-ಬಾಯಿಗೆ ಮಾಸ್ಕ್ ಧರಿಸಿ ಪರೀಕ್ಷೆ ಬರೆಯುವುದು ದುಸ್ತರವಾದ ಸಂಗತಿಯಾ ಗಿದ್ದು, ವಿದ್ಯಾರ್ಥಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಸತ್ಯಸಂಗತಿ. ಈ ಕೊರೊನಾ ಭಯದಿಂದ ಮಕ್ಕಳು ಕಲಿತ ವಿಷಯ ಮನಸ್ಸಿನಲ್ಲಿ ನಿಲುಕದೆ ಮರೆತು ಹೋಗಿದೆ. ಪರೀಕ್ಷೆಗೆ ಹಲವು ತಿಂಗಳುಗಳ ಅಂತರದಿಂದ ಖಿನ್ನತೆಗೆ ಒಳಗಾಗಿ ವಿಷಯವು  ಸ್ಮೃತಿಪಟಲದಿಂದ ಅಳಿಸಿಹೋಗಿದ್ದು, ಆತಂಕದ ವಾತಾವರಣದಲ್ಲಿ ಪರೀಕ್ಷೆಗೆ ಕುಳಿತರೂ ಭಯದಿಂದ ಉತ್ತರ ಬಾರದೇ ವಿದ್ಯಾರ್ಥಿಗಳಲ್ಲಿ ನಿರುತ್ಸಾಹ ಉಂಟಾಗುವುದು ಖಚಿತ. ಮಾನ್ಯ ಸಚಿವರು ಹೇಳಿರುವುದು ಅವ್ಶೆಜ್ಞಾನಿಕವಾಗಿದೆ. ಸಂದಿಗ್ಧತೆಯಿಂದ ಕೂಡಿದ ವಾತಾವರಣದಲ್ಲಿ ಪರೀಕ್ಷೆ ನಡೆಸದಿರುವುದೇ ಸೂಕ್ತವಾಗಿದೆ ಎಂದರು

error: Content is protected !!