ಹರಪನಹಳ್ಳಿ ಜೆಸಿಐ ಸ್ಫೂರ್ತಿ ಘಟಕದ ಪೂರ್ವಾಧ್ಯಕ್ಷ ರವೀಂದ್ರ ಅಧಿಕಾರ ಸಲಹೆ
ಹರಪನಹಳ್ಳಿ, ಜೂ.14- ವಿವಿಧ ಕಾರಣಗಳಿಂದ ಅನಾರೋಗ್ಯ ಉಂಟಾಗಿ ರಕ್ತವಿಲ್ಲದೇ ಸಂಭವಿಸುವ ಸಾವು ತಪ್ಪಿಸಲು ರಕ್ತದ ಅವಶ್ಯಕತೆ ಇದ್ದು, ಆರೋಗ್ಯವಂತ ಮನುಷ್ಯರು ರಕ್ತದಾನ ಮಾಡಲು ಅರಿವು ಮೂಡಿಸುವ ಅಗತ್ಯತೆ ಇದೆ ಎಂದು ಹರಪನಹಳ್ಳಿ ಜೆಸಿಐ ಸ್ಫೂರ್ತಿ ಘಟಕದ ಪೂರ್ವಾಧ್ಯಕ್ಷ ರವೀಂದ್ರ ಅಧಿಕಾರ ತಿಳಿಸಿದರು.
ಪಟ್ಟಣದ ಎಡಿಬಿ ಕಾಲೇಜು ಆವರಣದಲ್ಲಿ ಭಾನುವಾರ ವಿಶ್ವ ರಕ್ತದಾನ ದಿನದ ಪ್ರಯುಕ್ತ ಹರಪನಹಳ್ಳಿ ಜೆಸಿಐ ಸ್ಫೂರ್ತಿ ಘಟಕ ಏರ್ಪಡಿಸಿದ್ದ ರಕ್ತದಾನಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮನುಷ್ಯನ ರಕ್ತದಲ್ಲಿ ಹಿಮೋಗ್ಲೋಬಿನ್ ಕೊರತೆಯಿಂದ ಅನಾಹುತಗಳು ಸಂಭವಿಸುತ್ತವೆ. ಇಂತಹ ಸಂದರ್ಭದಲ್ಲಿ ಜೀವ ಉಳಿಸಲು ರಕ್ತದ ಅವಶ್ಯಕತೆ ಇರುತ್ತದೆ ಎಂದರು.
ಜೆಸಿಐ ಉಪಾಧ್ಯಕ್ಷ ವೀರನಗೌಡ್ರು ಮಾತನಾಡಿ, ರಕ್ತದಾನದ ಮಹತ್ವವನ್ನು ಯುವಕರಿಗೆ ತಿಳಿಸಬೇಕು ಎಂದರು. 39 ಬಾರಿ ರಕ್ತ ದಾನ ಮಾಡಿದ ರಕ್ತದಾನಿ ಎಚ್.ಎಂ.ಸಂತೋಷ್, 13 ಬಾರಿ ದಾನ ಮಾಡಿದ ಪಿ.ಶರತ್ ಬಾಬು ಅವರುಗಳನ್ನು ಸನ್ಮಾನಿಸಲಾಯಿತು.
ಪೂರ್ವಾಧ್ಯಕ್ಷ ಮೋರಿಗೇರಿ ಹೇಮಣ್ಣ, ಪಿ.ಟಿ.ನಾಗರಾಜ್, ಪಿ.ಶಿವಕುಮಾರನಾಯ್ಕ, ಉಪನ್ಯಾಸಕರಾದ ಶಿವಕುಮಾರ್, ಮಲ್ಲೇಶಪ್ಪ, ಕರಿಯಪ್ಪ, ವಿನಯ್, ರಮೇಶನಾಯ್ಕ, ಮುಜಿಬರ್ ರೆಹಮಾನ್, ಎಚ್.ಎಂ.ಕೊಟ್ರೇಶ್, ಲಕ್ಷ್ಮಣ್ ರಮಾವತ್, ಸುದೀಪ್, ಸಂದೀಪ್, ನಂದೀಶ್ ಮತ್ತಿತರರು ಪಾಲ್ಗೊಂಡಿದ್ದರು.