ದಾವಣಗೆರೆ, ಜೂ. 12- ಶಾಸಕ ಡಾ. ಶಾಮನೂರು ಶಿವಶಂಕರಪ್ಪನವರ ಹುಟ್ಟುಹಬ್ಬದ ನಿಮಿತ್ತ ಬೇತೂರು ಗ್ರಾಮದ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಮಾಜಿ ಸಚಿವ ಎಸ್.ಎಸ್. ಅಭಿಮಾನಿ ಬಳಗದ ವತಿಯಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಪಂಚಾಯತ್ ಸದಸ್ಯೆ ರೇಣುಕ ಬಿ. ಕರಿಬಸಪ್ಪ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರತ್ನಮ್ಮ ಪರಸಪ್ಪ, ಎಪಿಎಂಸಿ ನಿರ್ದೇಶಕ ಟಿ. ರಾಜಣ್ಣ, ವಿಎಸ್‌ಎಸ್‌ಎನ್ ಅಧ್ಯಕ್ಷ ಗುರುಪ್ರಸಾದ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಿ. ಕರಿಬಸಪ್ಪ, ಡಿಹೆಚ್‌ಓ ಡಾ. ರಾಘವೇಂದ್ರ ಸ್ವಾಮಿ, ವೈದ್ಯರಾದ ಮುರಳೀಧರ್, ಗೀತಾ, ಮೀನಾಕ್ಷಿ, ಆಶಾ ಭಾನುಪ್ರಕಾಶ್, ಮುಖಂಡರಾದ ಬಸವರಾಜಯ್ಯ, ಚೇತನ್ ಕುಮಾರ್, ನಾಗರಾಜ್, ಮುರಳೀಧರ್, ರಮೇಶ್, ಮಾರ್ಕುಂಟಿ ಮಂಜುನಾಥ್, ಕರಿಬಸಪ್ಪ, ಅಶೋಕ್, ಮಧು ಇನ್ನಿತರರು ಉಪಸ್ಥಿತರಿದ್ದರು.
December 29, 2024