ಮಲೇಬೆನ್ನೂರು, ಜೂ. 12- ಗುಳದಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಗರ್ಭಿಣಿಯರಿಗೆ, ಬಾಣಂತಿಯರಿಗೆ ಮತ್ತು 6 ತಿಂಗ ಳಿಂದ 6 ವರ್ಷದವರೆಗಿನ ಮಕ್ಕಳಿಗೆ ಪೂರಕ ಪೌಷ್ಠಿಕ ಆಹಾರ ಪದಾರ್ಥಗಳ ಕಿಟ್ಗಳನ್ನು ತಾ.ಪಂ. ಸದಸ್ಯ ಮಾಲತೇಶ್ ವಿತರಿಸಿದರು. ಸಿಡಿಪಿಒ ಜಫರುನ್ನೀಸಾ, ಎಸಿಡಿಪಿಒ ಜ್ಯೋತಿ, ಮೇಲ್ವಿಚಾರಕರಾದ ಮಂಜುಳ ಬಂಗಾರವ್ವ, ರೇಣುಕಾ, ಅಂಗನವಾಡಿ ಕಾರ್ಯಕರ್ತೆ ರೇಣುಕಾ ಮತ್ತಿತರರು ಈ ವೇಳೆ ಹಾಜರಿದ್ದರು.
December 28, 2024