ಎಸ್ಸಿ ಪಟ್ಟಿಯಿಂದ ಕೈಬಿಟ್ಟಿರುವ ಅಪಪ್ರಚಾರ ಕ್ರಮಕ್ಕೆ ಒತ್ತಾಯಿಸಿ ಪತ್ರ ಚಳುವಳಿ

ಜಗಳೂರು, ಜೂ.11- ಪರಿಶಿಷ್ಟ ಜಾತಿ ಪಟ್ಟಿಯಿಂದ ಭೋವಿ, ಲಂಬಾಣಿ, ಕೊರಚ ಮತ್ತು ಕೊರಮ ಜಾತಿಗಳನ್ನು  ಕೈಬಿಡಲಾಗಿದೆ ಎಂದು ಸಮಾಜದಲ್ಲಿ ಕೆಲವು ವ್ಯಕ್ತಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಇಂತಹ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ, ಮುಖ್ಯಮಂತ್ರಿಗೆ ಭೋವಿ ಸಮಾಜ ದಿಂದ ಸಾಮೂಹಿಕವಾಗಿ ಪತ್ರ ಬರೆಯುವ ಚಳವಳಿ  ಮೂಲಕ ಒತ್ತಾಯಿಸಲಾಯಿತು.

ಪಟ್ಟಣದ ತಾಲ್ಲೂಕು ಅಂಚೆ ಕಚೇರಿಯಲ್ಲಿ ಅಂಚೆ ಪೆಟ್ಟಿಗೆಗೆ ಸಾಮೂಹಿಕವಾಗಿ ಪತ್ರ ಹಾಕುವ ಮೂಲಕ ಚಾಲನೆ ನೀಡಲಾಯಿತು.

‘ಅತ್ಯಂತ ಶೋಷಿತ ಹಾಗೂ ಕಡು ಬಡವರರಾದ ಭೋವಿ, ಲಂಬಾಣಿ, ಕೊರಚ ಮತ್ತು ಕೊರಮ ಸಮಾಜಗಳನ್ನು ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಸ್ವಾತಂತ್ರ್ಯ ಪೂರ್ವದಲ್ಲೇ ನಾಲ್ವಡಿ ಕೃಷ್ಣರಾಜ ಒಡೆಯರ್ ಮೀಸಲಾತಿ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸಿದ್ದಾರೆ. ಆದರೆ ಕೆಲವರು ಈ ಶೋಷಿತ ಸಮುದಾಯಗಳನ್ನು ಎಸ್‌ಸಿ ಪಟ್ಟಿಯಿಂದ ಕೈಬಿಡಲು ಹುನ್ನಾರ ನಡೆಸಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಮುಖಂಡರು ಒತ್ತಾಯಿಸಿದರು.

ಮುಖಂಡರಾದ ಡಿ.ಶ್ರೀನಿವಾಸ್, ಬಿ.ಆರ್.ಅಂಜಿನಪ್ಪ, ಎ.ವೆಂಕಟೇಶ್, ಪಿ.ಡಿ. ದೇವರಾಜ್, ವಿರೂಪಾಕ್ಷ ಮುಸ್ಟೂರು, ತ್ಯಾಗರಾಜ್, ಎ.ರಂಗಪ್ಪ, ಎಂ.ವಿ.ಶ್ರೀನಿವಾಸ್, ಇ. ನಾಗಪ್ಪ ಇದ್ದರು.

error: Content is protected !!