ಖಾಸಗಿ ಶಾಲಾ – ಕಾಲೇಜುಗಳಲ್ಲಿ ಪುಸ್ತಕ ಮಾರಾಟಕ್ಕೆ ವಿರೋಧ

ಮಲೇಬೆನ್ನೂರು, ಜೂ.11- ಖಾಸಗಿ ಶಾಲಾ ಕಾಲೇಜುಗಳಲ್ಲಿ ಪಠ್ಯ ಪುಸ್ತಕಗಳು, ನೋಟ್ ಬುಕ್‍ಗಳು, ಸಮವಸ್ತ್ರಗಳು, ಲೇಖನ ಸಾಮಗ್ರಿಗಳನ್ನು ನೇರವಾಗಿ ಮಕ್ಕಳಿಗೆ ಮಾರಾಟ ಮಾಡುತ್ತಿದ್ದು, ಇದರಿಂದ ಪುಸ್ತಕ ಹಾಗೂ ಸ್ಟೇಷನರಿ ಮಾರಾಟಗಾರರಿಗೆ ವ್ಯಾಪಾರ ವಿಲ್ಲದೆ, ಜೀವನ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಜಿಲ್ಲಾ ಪುಸ್ತಕ ಮತ್ತು ಸ್ಟೇಷನರಿ ಮಾರಾಟಗಾರರ ಸಂಘದ ಅಧ್ಯಕ್ಷರಾಗಿರುವ ದಾವಣಗೆರೆಯ ನೆಹರು ಬುಕ್ ಸ್ಟಾಲ್ ಮಾಲೀಕ ಎಚ್. ಲಕ್ಷ್ಮಣ ತಿಳಿಸಿದ್ದಾರೆ.

ಇಲ್ಲಿ ಇಂದು ನಡೆದ ಬುಕ್ ಸ್ಟಾಲ್ ಹಾಗೂ ಸ್ಟೇಷನರಿ ಮಾರಾಟಗಾರರ ಸಂಘಟನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಳೆದ 10 ರಿಂದ 15 ವರ್ಷಗಳಿಂದ ಖಾಸಗಿ ಶಾಲಾ – ಕಾಲೇಜುಗಳೇ ಮಕ್ಕಳಿಗೆ ಪುಸ್ತಕ, ನೋಟ್‍ ಬುಕ್‍ಗಳನ್ನು ಮಾರಾಟ ಮಾಡುತ್ತಿದ್ದು, ಮಕ್ಕಳು ಪುಸ್ತಕ, ನೋಟ್‍ಬುಕ್ ಖರೀದಿಗೆ ಪುಸ್ತಕದ ಅಂಗಡಿ ಗಳಿಗೆ ಬಾರದೆ, ನಮಗೆ ವ್ಯಾಪಾರವಿಲ್ಲದೆ, ತೊಂದ ರೆಗೆ ಸಿಲುಕುತ್ತಿದ್ದೇವೆ ಎಂದು ಅವರು ಹೇಳಿದರು.

ಸರ್ಕಾರದ ಆದೇಶದಂತೆ ರಾಜ್ಯದ ಖಾಸಗಿ ಶಾಲೆಗಳು ಪಠ್ಯ ಪುಸ್ತಕಗಳನ್ನು (ರಾಜ್ಯ ಪಠ್ಯ ಪುಸ್ತಕ ಹೊರತುಪಡಿಸಿ) ನೋಟ್ ಪುಸ್ತಕಗಳು, ಸಮವಸ್ತ್ರ ಇತರೆ ನಿರ್ದಿಷ್ಟ ಮಾರಾಟಗಾರರಿಂದ ಅಥವಾ ಶಾಲೆಯಿಂದ ಖರೀದಿಸುವುದನ್ನು ನಿರ್ಬಂಧಿಸಿ ಆದೇಶ ಹೊರಡಿಸಿದ್ದರೂ ಸಹ, ಖಾಸಗಿ ಶಾಲೆಗಳು ಪುಸ್ತಕ ಮಾರಾಟ ಮಾತ್ರ ಮುಂದುವರೆಸುತ್ತಿವೆ. ಇಂತಹ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳು ವಂತೆ ಅವರು ಸರ್ಕಾರವನ್ನು ಒತ್ತಾಯಿಸಿದರು. 

ಸಂಘದ ಕಾರ್ಯದರ್ಶಿ ಕೆ.ಎಂ.ರೇವಣ ಸಿದ್ದಯ್ಯ, ಕೋಶಾಧ್ಯಕ್ಷ ಎಂ.ಮಹೇಂದ್ರಕುಮಾರ್, ವಿಜಯೇಂದ್ರಕುಮಾರ್, ಮಂಜುನಾಥ್, ಪ್ರವೀಣ್, ಬಸವನಗೌಡ, ರುದ್ರೇಶ್, ವಿ.ರಾಘ  ವೇಂದ್ರ, ಕುಮಾರ್, ಶಿವಕುಮಾರ್, ಮಹೇಂದ್ರ, ವಿಶ್ವನಾಥ್ ಮತ್ತಿತರರು  ಸಭೆಯಲ್ಲಿ ಉಪಸ್ಥಿತರಿದ್ದರು.

error: Content is protected !!