ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ : ಶ್ರೀರಾಮ ಸೇನೆ ಸಿಹಿ ಸಂಭ್ರಮಾಚರಣೆ

ದಾವಣಗೆರೆ, ಜೂ.10- ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಆರಂಭದ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆ ಜಿಲ್ಲಾ ಘಟಕದಿಂದ ನಗರದಲ್ಲಿ ಇಂದು ಸಿಹಿ  ವಿತರಿಸಿ ಸಂಭ್ರಮಾಚರಿಸಲಾಯಿತು.

ಸಂಘಟನೆಯ ಕಾರ್ಯಕರ್ತರು, ಶ್ರೀ ರಾಮಚಂದ್ರನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಿಹಿ ವಿತರಿಸಿ ಸಂಭ್ರಮಾಚರಿಸಿದರು. 

ಭಾರತದಲ್ಲಿರುವ ಹಿಂದೂಗಳು ಸೇರಿದಂತೆ ಇಡೀ ಜಗತ್ತಿನಲ್ಲಿರುವ ಹಿಂದೂಗಳಿಗೆ ಇಂದು ಸಂಭ್ರಮದ ದಿನ. ಸನಾತನ ಹಿಂದೂ ಧರ್ಮದ ಆದರ್ಶ ಪುರುಷ, ಆರಾಧ್ಯ ದೈವ ಶ್ರೀರಾಮ ಮಂದಿರವನ್ನು ಅಯೋಧ್ಯೆಯಲ್ಲಿ ನಿರ್ಮಿ ಸಲು ಇಂದು ಚಾಲನೆ ನೀಡಲಾಗಿದೆ. ಇದರಿಂದ ಕೋಟ್ಯಂ ತರ ಹಿಂದೂಗಳ ಬಹುದಿನದ ಕನಸು ನನಸಾದಂತಾಗಿದೆ ಎಂದು ಸಂಘಟನೆ ಮುಖಂಡರು ಹರ್ಷ ವ್ಯಕ್ತಪಡಿಸಿದರು.

ಇದೇ ವೇಳೆ ಅಯೋಧ್ಯೆಯಲ್ಲಿ ನಿರ್ಮಿಸಲಿರುವ ಶ್ರೀರಾಮ ಮಂದಿರ ಕಟ್ಟಡದ ಕರ ಸೇವೆಯನ್ನು ಬರುವ ಜುಲೈ 1ರಂದು ಶ್ರೀರಾಮ ಸೇನೆ ಜಿಲ್ಲಾ ಘಟಕದಿಂದ ಮಾಡಲು ನಿರ್ಧರಿಸಲಾಯಿತು. 

ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಸಂಪರ್ಕ ಪ್ರಮುಖ್ ಪರಶುರಾಮ ನಡುಮನಿ, ಜಿಲ್ಲಾಧ್ಯಕ್ಷ ಮಣಿ ಕಂಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಬಿ. ವಿನೋದ ರಾಜ್, ಕಾನೂನು ಸಲಹೆಗಾರ ಆನಂದ ಜ್ಯೋತಿ, ಮುಖಂ ಡರಾದ ಡಿ. ರಾಜೇಶ್, ವಿ. ಪರಮೇಶ್, ತಿಪ್ಪೇಶ್, ನಾಗ ರಾಜ್, ಮಾರ್ಕಂಡೇಶ್ವರ ಸೇರಿದಂತೆ ಇತರರಿದ್ದರು.

error: Content is protected !!