ಕುಡಿಯುವ ನೀರು, ಗ್ರಾಮೀಣ ರಸ್ತೆ ಅಭಿವೃದ್ಧಿ ಸೇರಿದಂತೆ ಹರಪನಹಳ್ಳಿ ತಾ. ಅಭಿವೃದ್ಧಿಗೆ ಒತ್ತು

ಹರಪನಹಳ್ಳಿ, ಜೂ.10- ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪನೆ ಮಾಡುವಂತೆ   ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡಲಾಗುವುದು ಎಂದು ಶಾಸಕ ಜಿ.ಕರುಣಾಕರ ರೆಡ್ಡಿ ಹೇಳಿದರು.

ತಾಲ್ಲೂಕಿನ ಬೆಣ್ಣಿಹಳ್ಳಿ, ಸಾಸ್ವಿಹಳ್ಳಿ, ಮತ್ತಿಹಳ್ಳಿ, ಹಗರಿಗಜಾಪುರಗಳಲ್ಲಿ ಇಂದು ಏರ್ಪಾಡಾಗಿದ್ದ 21 ಕೋಟಿ ರೂಗಳ ತಡೆಗೋಡೆ, ಬ್ರಿಡ್ಜ್-ಕಂ-ಬ್ಯಾರೇಜ್ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪನೆ ಮಾಡಬೇಕು ಎಂದು ಈಗಾಗಲೇ ಶಾಸಕರುಗ ಳಾದ   ಎಸ್.ವಿ.ರಾಮಚಂದ್ರಪ್ಪ, ಎಂ.ಪಿ. ರೇಣುಕಾಚಾರ್ಯ ಸೇರಿದಂತೆ ಕೆಲ ಶಾಸಕರ ಜೊತೆಗೂಡಿ ಸಿಎಂ ಗೆ ಮನವಿ ಮಾಡಿದ್ದೆವು, ಕೊರೊನಾ ಬಂದಿದ್ದರಿಂದ ಅದು ನೆನೆಗುದಿಗೆ ಬಿದ್ದಿತ್ತು. ಈಗ ಪುನಃ ಭೇಟಿಯಾಗಿ ಒತ್ತಾಯ ಮಾಡುತ್ತೇವೆ ಎಂದು ಅವರು ತಿಳಿಸಿದರು.

ತಾಲ್ಲೂಕಿನ 60 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯ ಕೆಲಸ ಭರದಿಂದ ಸಾಗಿದೆ. ಈಗಾಗಲೇ ಮೂರು ಮೊರಾರ್ಜಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಇದ್ದು, 2 ವಾಜಪೇಯಿ ಶಾಲೆ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ, ಇನ್ನೊಂದು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಮಂಜೂರು ಮಾಡಿಸಲು ಪ್ರಯತ್ನ ನಡೆದಿದೆ. ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜು ಕಾಮಗಾರಿಗೆ ಶೀಘ್ರ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.  

ವೃದ್ಧಾಪ್ಯ, ವಿಧವಾ ಸೇರಿದಂತೆ ವಿವಿಧ ವೇತನಗಳು ಕೆಲವು ತಿಂಗಳುಗಳಿಂದ ಬಂದಿಲ್ಲ. ಕೆ.1 ತಂತ್ರಾಂಶದಿಂದ ಕೆ.2 ತಂತ್ರಾಂಶಕ್ಕೆ ಮಾರ್ಪಾಡು ಮಾಡುವ ಕಾರ್ಯ ಪೂರ್ಣಗೊಂಡಿದೆ. ಬೆಂಗಳೂರಿನಿಂದ ಶೀಘ್ರ ಅನುಮತಿ ಸಿಕ್ಕ ನಂತರ ವೇತನಗಳು ಬಿಡುಗಡೆಗೊಳ್ಳುತ್ತವೆ ಎಂದ ಅವರು, 2 ಕೋಟಿ ರೂ. ವೆಚ್ಚದಲ್ಲಿ ಹಗರಿಗಜಾಪುರ -ಕೊಟ್ಟೂರು ರಸ್ತೆ ಅಭಿವೃದ್ಧಿಗೆ (ಹರಪನಹಳ್ಳಿ ತಾ. ಗಡಿ ವರೆಗೆ) ಕಾಮಗಾರಿ ಶೀಘ್ರ ಟೆಂಡರ್ ಆಗುತ್ತದೆ ಎಂದರು. ಶಿಕ್ಷಣದ ಅಭಿವೃದ್ಧಿಗಾಗಿ ಸುಮಾರು 200 ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ಕುಡಿಯುವ ನೀರು, ಗ್ರಾಮೀಣ ರಸ್ತೆ ಸೇರಿದಂತೆ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ  ಒತ್ತು ನೀಡಲಾಗುವುದು  ಎಂದು ಹೇಳಿದರು.  

ಲೋಕಸಭಾ ಸದಸ್ಯ ಜಿ.ಎಂ.ಸಿದ್ದೇಶ್ವರ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಅನ್ನಪೂರ್ಣಮ್ಮ, ಉಪಾಧ್ಯಕ್ಷ ಮಂಜಾನಾಯ್ಕ,  ಗ್ರಾ.ಪಂ. ಅಧ್ಯಕ್ಷೆ ಚೆನ್ನಮ್ಮ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸತ್ತೂರು ಹಾಲೇಶ್, ಉಪಾಧ್ಯಕ್ಷ ನಿಟ್ಟೂರು ಸಣ್ಣಹಾಲಪ್ಪ, ಕಾರ್ಯದರ್ಶಿ ರಾಘವೇಂದ್ರಶೆಟ್ಟಿ,   ಬಿಜೆಪಿ ಎಸ್.ಟಿ. ಘಟಕದ ತಾಲ್ಲೂಕು ಅಧ್ಯಕ್ಷ ಆರ್.ಲೋಕೇಶ್,  ಮುಖಂಡರಾದ ಎಂ.ಪಿ.ನಾಯ್ಕ,  ಆರ್.ಕರಿಗೌಡ್ರು, ಬಾಗಳಿ ಕೊಟ್ರೇಶ್, ಯಡಿ ಹಳ್ಳಿ ಶೇಖರಪ್ಪ, ನವೀನ್ ಪಟೇಲ್, ಮಡಿವಾ ಳಪ್ಪ, ನಾಗರಾಜ ರಾಂಪುರ,  ಯು.ಪಿ. ನಾಗ ರಾಜ, ಎಂ.ಸಂತೋಷ, ಗೋಣಿಬಸಪ್ಪ, ಡಿವೈ ಎಸ್ಪಿ ಮಲ್ಲೇಶ್ ದೊಡ್ಮನಿ, ಸಿಪಿಐ. ಕೆ. ಕುಮಾರ್  ಸೇರಿದಂತೆ ಇತರರು ಉಪಸ್ಥಿತರಿದ್ದರು.  

error: Content is protected !!